ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ಇನ್ನಿಲ್ಲ!

Published : Nov 26, 2020, 06:57 PM IST
ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ಇನ್ನಿಲ್ಲ!

ಸಾರಾಂಶ

ಭಾರತೀಯ ಕಂಪ್ಯೂಟರ್ ಲೋಕದಲ್ಲಿ ಹೊಸ ಅಧ್ಯಾಯ ಆರಂಭಿಸಿದ, ಟಾಟಾ ಕನ್ಸಲ್‌ಟೆನ್ಸಿ ಸಂಸ್ಥಾಪಕ, ಪ್ರಮುಖವಾಗಿ ಭಾರತೀಯ ಕಂಪ್ಯೂಟರ್ ಉದ್ಯಮದ  ಪಿತಾಮಹ ಎಂದೇ ಗುರುತಿಸಿಕೊಂಡಿರುವ ಫಕೀರ್ ಚಂದ್ ಕೊಹ್ಲಿ ನಿಧನರಾಗಿದ್ದಾರೆ. 

ನವದೆಹಲಿ(ನ.26): ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಫಕೀರ್ ಚಂದ್ ಕೊಹ್ಲಿ ನಿಧನರಾಗಿದ್ದಾರೆ. 96 ವರ್ಷದ ಎಫ್‌ಸಿ ಕೊಹ್ಲಿ, ಭಾರತದ ಅತೀ ದೊಡ್ಡ ಸಾಫ್ಟ್‌ವೇರ್ ಕನ್ಸಲ್‌ಟೆನ್ಸಿಯಾದ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್(TCS) ಸಂಸ್ಥಾಪಕ ಹಾಗೂ ಮೊದಲ ಸಿಇಒ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೋದಿ ಮನವಿಗೆ ಸ್ಪಂದಿಸಿದ ಟಾಟಾ ಮಾಲೀಕತ್ವದ TCS, ನೌಕರರಿಗೆ ಉದ್ಯೋಗ ಭದ್ರತೆ!

ಮಾರ್ಚ್ 19, 1924ರಂದು ಪಾಕಿಸ್ತಾನದ ಪೇಶಾವರದಲ್ಲಿ ಹುಟ್ಟಿದ ಎಫ್‌.ಸಿ ಕೊಹ್ಲಿ, ಭಾರತದಲ್ಲಿ ತಮ್ಮ ವೃತ್ತಿ ಆರಂಭಿಸಿದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು. ಟಾಟಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಲೋಡ್ ರವಾನೆ ಹಾಗೂ ಸಿಸ್ಟಿಮ್ ಕಾರ್ಯಚರಣೆ ನಿರ್ವಹಿಸಲು ನೆರವಾದರು. 1970ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ನಿರ್ದೇಶರಾಗಿ ಬಡ್ತಿ ಪಡೆದರು. 

ಸಿಲಿಕಾನ್‌ ಸಿಟಿಗೆ ಬರಲಿದೆ ಆ್ಯಪಲ್: ಚೀನಾ ಬದಲು ಬೆಂಗಳೂರಲ್ಲೇ ಐಫೋನ್‌ ಉತ್ಪಾದನೆ.

ಭಾರತದ ಐಟಿ ಕ್ರಾಂತಿಯ ಹರಿಕಾರರಾದ ಟಿಸಿಎಸ್‌ನ ಮೊದಲ ಸಿಇಒ ಆದ ಹಿರಿಮೆಗೆ ಎಫ್‌ಸಿ ಕೊಹ್ಲಿ ಪಾತ್ರರಾಗಿದ್ದಾರೆ. ಭಾರತದಲ್ಲಿ 100 ಬಿಲಿಯನ್‌ಗೂ ಹೆಚ್ಚೂ ಐಟಿ ಉದ್ಯಮವನ್ನು ಸ್ಥಾಪನೆಗೆ ದೇಶಕ್ಕೆ ನೆರವಾಗಿದ್ದಾರೆ. 2002ರ ವರೆಗೆ ಐಟಿ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಎಫ್‌.ಸಿ ಕೊಹ್ಲಿ, ಬಳಿಕ ವಿಶ್ರಾಂತಿಗೆ ಜಾರಿದರು. ಇದೀಗ ಹೃದಯಾಘಾತದಿಂದ ಎಫ್‌.ಸಿ ಕೊಹ್ಲಿ ಇಂದು(ನ.26) ನಿಧನರಾಗಿದ್ದಾರೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?