ಹೊಸ ಯೋಜನೆಯನ್ನು ಪ್ರಕಟಿಸಿದ್ದ ಫೇಸ್ಬುಕ್; ವಿಭಿನ್ನ ಉದ್ಯಮಕ್ಕೆ ಕೈ ಹಾಕಿದ್ದ ಸೋಶಿಯಲ್ ಮೀಡಿಯಾ ದೈತ್ಯ; ಕ್ಯಾಲಿಬ್ರಾ ಎಂಬ ಡಿಜಿಟಲ್ ವ್ಯಾಲೆಟ್ ಹಾಗೂ ಲಿಬ್ರಾ ಎಂಬ ಕ್ರಿಪ್ಟೊಕರೆನ್ಸಿ ಯೋಜನೆ
ಬೆಂಗಳೂರು (ಜೂ. 19): ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್ಬುಕ್‌ನ ಮಹಾತ್ವಾಕಾಂಕ್ಷಿ ಯೋಜನೆ ಬಗ್ಗೆ www.suvarnanews.com ಮಂಗಳವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಫೇಸ್ಬುಕ್ ತರಲುದ್ದೇಶಿಸಿದ್ದ ಹೊಸ ಡಿಜಿಟಲ್ ಕರೆನ್ಸಿ ಯೋಜನೆಗೆ ಈಗ ಬ್ರೇಕ್ ಬಿದ್ದಿದೆ.
ಕ್ಯಾಲಿಬ್ರಾ ಎಂಬ ಡಿಜಿಟಲ್ ವ್ಯಾಲೆಟ್ ವ್ಯವಸ್ಥೆಯನ್ನು ಪ್ರಕಟಿಸಿದ್ದ ಫೇಸ್ಬುಕ್, ಲಿಬ್ರಾ ಎಂಬ ಹೆಸರಿನ ಕ್ರಿಪ್ಟೊಕರೆನ್ಸಿಯನ್ನು ಚಲಾವಣೆಗೆ ತರಲು ಸಿದ್ಧತೆ ನಡೆಸಿತ್ತು. ಫೇಸ್ಬುಕ್ ಈ ಹೊಸ ಯೋಜನೆ ಬಗ್ಗೆ ಘೋಷಿಸಿದ ಬೆನ್ನಲ್ಲೇ ಅಮೆರಿಕಾ ಸಂಸದರಿಂದ ರೆಡ್ ಸಿಗ್ನಲ್ ತೋರಿಸಲಾಗಿದೆ.
ಮೊದಲು ನೀವು ಜಾರಿಗೆ ತರಲುದ್ದೇಶಿಸಿರುವ ಕ್ರಿಪ್ಟೊಕರೆನ್ಸಿ/ ಡಿಜಿಟಲ್ ವ್ಯಾಲೆಟ್ ವ್ಯವಸ್ಥೆಯನ್ನು ಕಾಂಗ್ರೆಸ್ ಮುಂದೆ ವಿವರಿಸಿ ಎಂದು ಸಂಸತ್ತಿನ ಹಣಕಾಸು ಸಮಿತಿಯ ಮುಖ್ಯಸ್ಥೆ ಮ್ಯಾಕ್ಸಿನ್ ವಾಟರ್ಸ್ ಫೇಸ್ಬುಕ್‌ಗೆ ಸೂಚಿಸಿದ್ದಾರೆ.
ಇದನ್ನೂ ಓದಿ | ಫೋಟೋ ಅಪ್ಲೋಡ್ ಮಾಡುವ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿ ಲೀಕ್!
ಫೇಸ್ಬುಕ್ ಬಳಿ ಬಿಲಿಯನ್‌ಗಟ್ಟಲೆ ಜನರ ಮಾಹಿತಿ ಇದೆ. ಅದರ ಸುರಕ್ಷತೆ ಮತ್ತು ಖಾಸಗಿತನ ಜೊತೆ ಈ ಹಿಂದೆ ಹಲವಾರು ಬಾರಿ ರಾಜಿ ಮಾಡಿಕೊಳ್ಳಲಾಗಿದೆ. ಆದ್ದರಿಂದ, ಆ ಯೋಜನೆಯನ್ನು ಅಷ್ಟಕ್ಕೆ ನಿಲ್ಲಿಸಿ, ಕಾಂಗ್ರೆಸ್ ಅದನ್ನು ಪರಿಶೀಲಿಸಬೇಕು, ಎಂದು ಆಕೆ ಹೇಳಿದ್ದಾರೆ.
2004ರಲ್ಲಿ ಆರಂಭವಾದ ಫೇಸ್ಬುಕ್ ಈಗ ಜಗತ್ತಿನಾದ್ಯಂತ 140 ಭಾಷೆಗಳಲ್ಲಿ ಸೇವೆಯನ್ನು ಒದಗಿಸುತ್ತಿದ್ದು 2.38 ಬಿಲಿಯನ್ ಬಳಕೆದಾರರನ್ನು ಹೊಂದಿದೆ.