ಫೋಟೋ ಅಪ್ಲೋಡ್ ಮಾಡುವ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿ ಲೀಕ್!

By Web Desk  |  First Published Jun 18, 2019, 6:24 PM IST

ಡಿಜಿಟಲ್ ಯುಗದಲ್ಲಿ ಬಳಕೆದಾರರ ಖಾಸಗಿತನ ಹಾಗೂ ಮಾಹಿತಿ ಸುರಕ್ಷತೆ ಬಹಳ ದೊಡ್ಡ ಸವಾಲು. ಬಳಕೆದಾರರು ಇವುಗಳ ಬಗ್ಗೆ ಎಷ್ಟೇ ಜಾಗರೂಕರಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಾಗಿ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.


ಬೆಂಗಳೂರು (ಜೂ.18) ಚೀನಾ ಮೂಲದ ಜನಪ್ರಿಯ ಮೊಬೈಲ್ ಕಂಪನಿ Oneplus, ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. 

ಕೆಲ ಸಮಯದಿಂದ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು Oneplus  ‘ಅರಿವಿಲ್ಲದೇ’ ಸೋರಿಕೆ ಮಾಡುತ್ತಿದ್ದು, ಇತ್ತೀಚೆಗೆ ಕಂಪನಿಯ ಗಮನಕ್ಕೆ ಬಂದಿದೆ. ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ಸುರಕ್ಷತೆ ವಿಚಾರದಲ್ಲಿ ನಡೆದಿರುವ ಈ ಲೋಪವನ್ನು ತನಿಖೆ ನಡೆಸುವುದಾಗಿ ಕಂಪನಿಯು ಹೇಳಿದೆ.

Latest Videos

undefined

ಇದನ್ನೂ ಓದಿ | Oneplus 7 Pro ಜೊತೆ ‘ಪಾಕೆಟ್ ಫ್ರೆಂಡ್ಲಿ’ Oneplus 7ಗೂ ಮೊಬೈಲ್ ಪ್ರಿಯರು ಫಿದಾ!

Oneplus ಫೋನ್‌ಗಳಲ್ಲಿರುವ ‘Shot on Oneplus’ ಆ್ಯಪ್‌ನಲ್ಲಿ ಈ ಎಡವಟ್ಟು ಸಂಭವಿಸಿದ್ದು,  ಬಳಕೆದಾರರು ತಾವು ಕ್ಲಿಕ್ಕಿಸಿದ ಫೋಟೋಗಳನ್ನು ಇಲ್ಲಿ ಅಪ್ಲೋಡ್ ಮಾಡಬಹುದಾಗಿದೆ. Shot on Oneplus ಬಳಸಲು ಇ-ಮೇಲ್ ಮೂಲಕ ಸೈನ್ ಇನ್ ಮಾಡಬೇಕು.

ಅಪ್ಲೋಡ್ ಮಾಡಿದ ಫೋಟೋಗಳ ಪೈಕಿ ಸುಂದರವಾದುದ್ದನ್ನು Oneplus  ಆಯ್ದುಕೊಳ್ಳುತ್ತದೆ, ಬಳಿಕ ಅದೇ ಆ್ಯಪ್‌ನಲ್ಲೇ ಸಾರ್ವಜನಿಕವಾಗಿ ಪ್ರದರ್ಶಿಸುತ್ತದೆ.

ಅಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವಾಗ, 'Shot on Oneplus' ಆ್ಯಪ್, ಫೋಟೋವಿನ ಶೀರ್ಷಿಕೆ, ಸ್ಥಳ ಮತ್ತು ವಿವರವನ್ನು ಕೇಳುತ್ತದೆ.  ಆದರೆ ಈಗ ಬಳಕೆದಾರರ ಹೆಸರು, ಇ-ಮೇಲ್ ವಿಳಾಸ ಮತ್ತು ಸ್ಥಳ ಸೋರಿಕೆಯಾಗಿದ್ದು, ಫೋನ್ ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಖಾಸಗಿತನವನ್ನು ಉಲ್ಲಂಘಿಸಿದಂತಾಗಿದೆ. ಕಳೆದೊಂದು ವರ್ಷದಿಂದ ಇದು ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ Oneplus 7 Pro: ಬೆಲೆ ಮತ್ತು ಫೀಚರ್ಸ್

ಯಾರು Shot on OnePlus ಬಳಸಿಲ್ಲವೋ, ಅವರ ಮಾಹಿತಿ ಸುರಕ್ಷಿತವಾಗಿದೆಯಾ? ಹೌದು ಎಂದಿದೆ ಆ ವರದಿ. ಮಾಹಿತಿ ಸೋರಿಕೆ ಲೋಪವನ್ನು ಸರಿಪಡಿಸುವ ಜೊತೆ  ಕಾರಣವನ್ನು ತನಿಖೆ ನಡೆಸುವುದಾಗಿ ಕಂಪನಿಯು ಹೇಳಿದೆ.

click me!