
ವಾಷಿಂಗ್ಟನ್(ಏ.12): ಅಂತರಿಕ್ಷದಲ್ಲಿ ಭಾರತ ನಡೆಸಿದ ASAT ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಸಮರ್ಥಿಸಿಕೊಂಡಿದ್ದು, ತನ್ನ ಅಂತರಿಕ್ಷವನ್ನು ಸಂರಕ್ಷಿಸುವ ಹಕ್ಕು ಭಾರತಕ್ಕಿದೆ ಎಂದು ಹೇಳಿದೆ.
ಭಾರತಕ್ಕೆ ತನ್ನ ಬಾಹ್ಯಾಕಶದ ಕುರಿತು ತೀವ್ರ ಕಳವಳ ಇದ್ದು, ಬಾಹ್ಯಾಕಾಶ ಯುದ್ಧಕ್ಕೆ ಸನ್ನದ್ದುಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಭಾರತಕ್ಕಿದ ಎಂದು ಪೆಂಟಗನ್ ಹೇಳಿಕೆ ನೀಡಿದೆ.
ಭಾರತ ತನ್ನ ಮೇಲೆ ಬಾಹ್ಯಾಕಾಶದಿಂದ ಒದಗಬಹುದಾದ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ASAT ಪರೀಕ್ಷೆ ಮಾಡಿದೆ ಎಂದು ಅಮೆರಿಕ ಬೆಂಬಲ ಸೂಚಿಸಿದೆ.
ಆದರೆ ಭಾರತ ನಡೆಸಿದ ಪರೀಕ್ಷೆಯಿಂದ ಸುಮಾರು ಬಾಹ್ಯಾಕಾಶದಲ್ಲಿ 400 ಅವಶೇಷಗಳು ಸೃಷ್ಟಿಯಾಗಿದ್ದು, ಇವುಗಳಲ್ಲಿ 24 ಅವಶೇಷಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದೂ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ನಾಸಾ ಕೂಡ ಇಂತದ್ದೇ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ಮಾರ್ಚ್ 27ರಂದು ಭಾರತ ಏ-ಸ್ಯಾಟ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಈ ತಂತ್ರಜ್ಞಾನ ಹೊಂದಿರುವ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.