ಮಾನವ ಜಾತಿಗೆ ಹೊಸ ತಳಿ ಸೇರ್ಪಡೆ: ಪುರಾತನ ಅವಶೇಷ ಪತ್ತೆ!

By Web Desk  |  First Published Apr 11, 2019, 4:51 PM IST

ಯಾರಿಗೂ ತಿಳಿದಿರದ ಅಪರೂಪದ ಮಾನವ ತಳಿ ಅವಶೇಷ ಪತ್ತೆ| ಫಿಲಿಪೈನ್ಸ್ ನ ಲುಜೋನ್ ದ್ವೀಪದಲ್ಲಿ ಪತ್ತೆಯಾದ ನೂತನ ತಳಿಯ ಅವಶೇಷಗಳು| ಹೊಸ ತಳಿಗೆ ಹೋಮೋ ಲುಜೋನೆನ್ಸಿಸ್ ಎಂದು ನಾಮಕರಣ| 50,000 ವರ್ಷಗಳ ಹಿಂದೆ ಜೀವಿಸಿದ್ದ ಅನಾಮಧೇಯ ಮಾನವ ತಳಿ|


ಟೋಕಿಯೋ(ಏ.11): ಜೀವ ವಿಕಾಸವಾದದ ಸಿದ್ದಾಂತ ಮಂಡಿಸಿದ್ದ ಚಾರ್ಲ್ಸ್ ಡಾರ್ವಿನ್, ಜೀವ ಪ್ರಪಂಚ ನಿರಂತರ ಬದಲಾವಣೆಗೆ ಒಳಪಡುವ ಪ್ರಕ್ರಿಯೆಗಯ ಪಾಲುದಾರ ಎಂದು ಹೇಳಿದ್ದರು.

ಅದರಂತೆ ಹೋಮೋ ಸೇಪಿಯನ್ಸ್ ಪ್ರಾಣಿ ಜಾತಿಗೆ ಸೇರಿದ ಮಾನವ ಕೂಡ ಲಕ್ಷಾಂತರ ವರ್ಷಗಳಿಂದ ಆಂತರಿಕ ಮತ್ತು ಬಾಹ್ಯ ರಚನೆಯ ಬದಲಾಣೆಗೆ ಒಳಪಟ್ಟಿದ್ದಾನೆ. ಈ ಪ್ರಕ್ರಿಯೆ ಮುಂದುವರೆಯಲಿದೆ.

Latest Videos

undefined

ಮಾನವನ ಆದಿ, ಅಂತ್ಯವನ್ನು ಸಂಶೋಧನೆಗೊಳಪಡಿಸುತ್ತಿರುವ ವಿಜ್ಞಾನಿಗಳು ಆಗಾಗ ರೋಚಕ ಎನಿಸುವಂತ ಹೊಸ ಸೊ ಶೋಧನೆ ಮಾಡುವುದು ಸಾಮಾನ್ಯ. ಅದರಂತೆ ಇದುವರೆಗೂ ಯಾರಿಗೂ ಗೊತ್ತಿರದ, ಮಾನವ ಜಾತಿಯ ಯಾವುದೇ ತಳಿಗೂ ಸೇರಿರದ ಹೊಸ ಮಾನವ ಜನಾಂಗವನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.

ಫಿಲಿಪೈನ್ಸ್ ದ್ವೀಪದಲ್ಲಿ ಸುಮಾರು 50,000 ವರ್ಷಗಳ ಹಿಂದೆ ಜೀವಿಸಿದ್ದ ಅನಾಮಧೇಯ ಮಾನವ ತಳಿಯೊಂದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಫಿಲಿಪೈನ್ಸ್ ನ ಲುಜೋನ್ ದ್ವೀಪದಲ್ಲಿ ಅವಶೇಷಗಳು ಪತ್ತೆಯಾದ ಕಾರಣ ಇದಕ್ಕೆ ಹೋಮೋ ಲುಜೋನೆನ್ಸಿಸ್ ಎಂದು ನಾಮಕರಣ ಮಾಡಲಾಗಿದೆ.

ಲುಜೋನ್ ದ್ವೀಪದಲ್ಲಿ ಪತ್ತೆಯಾದ ಅವಶೇಷಗಳು ಮಾನವ ಜಾತಿಗೆ ನೇರ ಸಂಬಂಧ ಹೊಂದಿರದೇ, ದೂರದ ಸಂಬಂಧಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಚಿಂಪಾಂಜಿ ಮತ್ತು ಹೋಮೋ ಸೇಪಿಯನ್ಸ್ ಜಾತಿಯ ನಡುವಿನ ಕೊಂಡಿಯಾಗಿ ಈ ತಳಿಯನ್ನು ಗುರುತಿಸಬಹುದು ಎಂಬುದು ಸಂಶೋಧಕರ ವಾದವಾಗಿದೆ.

click me!