
ಪ್ಯಾರಿಸ್(ಏ.10): ಇದು ನಿಜಕ್ಕೂ ಬಾಹ್ಯಾಕಾಶ ವಿಜ್ಞಾನ ಪ್ರಪಂಚ ಸಂಭ್ರಮಿಸುವ ಕ್ಷಣ. ದಶಕಗಳಿಂದ ಚಿದಂಬರ ರಹಸ್ಯವಾಇಯೇ ಉಳಿದಿದ್ದ ಬ್ಲ್ಯಾಕ್ ಹೋಲ್ (ಕಪ್ಪುಕುಳಿ) ಫೋಟೋ ಸೆರೆ ಹಿಡಿಯುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಪಡೆದಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ನೆದರ್ಲೆಂಡ್ ನ ರ್ಯಾಡ್ ಬೌಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಪ್ಪುಕುಳಿಯ ಫೋಟೋ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ವಿಶ್ವದ ವಿವಿಧ ಭಾಗಗಳಲ್ಲಿರುವ 8 ಅತ್ಯಾಧುನಿಕ ಟೆಲಿಸ್ಕೋಪ್ ಸಹಾಯದಿಂದ ಫೋಟೋ ಸೆರೆ ಹಿಡಿದಿದ್ದಾರೆ.
ಹೌದು.. ವಿಶ್ವವನ್ನೇ ನುಂಗಿ ಹಾಕುವ ಕಪ್ಪುಕುಳಿಯ ಕುರಿತು ಅಮೆರಿಕದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾಹಿತಿ ನೀಡಿದ್ದರು. ಈ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಅದರಲ್ಲಿ ಹೇಳಿಕೊಳ್ಳುವಂತಹ ಯಶಸ್ವಿಯಾಗಿರಲಿಲ್ಲ. ಕಪ್ಪುಕುಳಿ ಇದೆ ಎಂದು ಮಾಹಿತಿ ಇತ್ತಾದರೂ ಅದು ಎಲ್ಲಿದೆ.. ಅದು ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಇಷ್ಟು ದಿನ ಪ್ರಶ್ನೆಗಳಾಗಿಯೇ ಉಳಿದಿತ್ತು.
ಎಂ87 ಎಂಬ ಗ್ಯಾಲಕ್ಸಿಯಿಂದ 50 ಮಿಲಿಯನ್ ಜ್ಯೋತಿರ್ವರ್ಷ ದೂರವಿರುವ ಈ ಕಪ್ಪುಕುಳಿ, ಭೂಮಿಯಿಂದ ಸುಮಾರು 40 ಬಿಲಿಯನ್ ಜ್ಯೋತಿರ್ವರ್ಷ ದೂರವಿದೆ.
ನಮ್ಮ ಸೂರ್ಯನಿಗಿಂತ ಬರೋಬ್ಬರಿ 6.5 ಬಿಲಯನ್ ಪಟ್ಟು ದೊಡ್ಡಿದಿರುವ ಈ ಕಪ್ಪುಕುಳಿ, ನಮ್ಮ ಇಡೀ ಸೌರವ್ಯೂಹಕ್ಕಿಂತಲೂ ಊಹಿಸಲಾಗದಷ್ಟು ದೊಡ್ಡದಿದೆ ಎನ್ನಲಾಗಿದೆ.
ಚಿತ್ರದಲ್ಲಿ ಕಪ್ಪುಕುಳಿಯಲ್ಲಿರುವ ಅಪಾರ ಪ್ರಮಾಣದ ಸೂಪರ್ ಹೀಟೆಡ್ ಗ್ಯಾಸ್ (ಅತ್ಯಂತ ಶಾಖದಿಂದ ಕೂಡಿದ ಅನಿಲ) ತನ್ನ ಬಳಿಯ ಗ್ಯಾಲಕ್ಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಕಪ್ಪುಕುಳಿಯಲ್ಲಿನ ಬೆಳಕಿನ ಅಗಾಧತೆ ಎಷ್ಟಿದೆ ಎಂದರೆ ಸೌರವ್ಯೂಹಕ್ಕಿಂತ ಅನೇಕ ಲಕ್ಷ ಪಟ್ಟು ಪ್ರಕಾಶಮಾನವಾಗಿದೆ.
ಈ ಬೃಹತ್ ಕಪ್ಪುಕುಳಿಯ ಗುರುತ್ವಾಕರ್ಷಣೆ ಬಲದಿಂದ ಬೆಳಕೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.