World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!

By Suvarna News  |  First Published Dec 24, 2021, 10:37 AM IST

ಡಿಸೆಂಬರ್ 3, 1992 ರಂದು ವೊಡಾಫೋನ್ ಮೂಲಕ ರವಾನಿಸಲಾದ 15 ಅಕ್ಷರಗಳನ್ನು ಒಳಗೊಂಡಿದ್ದ 'ಮೇರಿ ಕ್ರಿಸ್ಮಸ್ʼ  ಎಸ್‌ಎಮ್‌ಎಸ್ NFT ಹರಾಜಿನಲ್ಲಿ 91 ಲಕ್ಷಕ್ಕೆ ಮಾರಾಟವಾಗಿದೆ.


Tech Desk: ಇತಿಹಾಸದಲ್ಲಿ ಮೊದಲ ಪಠ್ಯ ಸಂದೇಶವನ್ನು ಬ್ರಿಟಿಷ್ ಆಪರೇಟರ್ ವೊಡಾಫೋನ್ (Vodaphone) ಮಂಗಳವಾರ ಹರಾಜಿನಲ್ಲಿ €107,000 (ಸುಮಾರು 91 ಲಕ್ಷ) ಗೆ ಮಾರಾಟ ಮಾಡಿದೆ. ಇದರ ಡಿಜಿಟಲ್ ವರ್ಷನ್ ಎನ್‌ಎಫ್‌ಟಿ ಹರಾಜಿನ ಮೂಲಕ ಮಾರಾಟ ಮಾಡಲಾಗಿದ್ದು ಖರಿದಿಸಿದ ಗ್ರಾಹಕರ ಹೆಸರು ಬಹಿರಂಗಪಡಿಸಲಾಗಿಲ್ಲ. ಡಿಸೆಂಬರ್ 3, 1992 ರಂದು ವೊಡಾಫೋನ್ ಮೂಲಕ ರವಾನಿಸಲಾದ SMS 15 ಅಕ್ಷರಗಳನ್ನು ಒಳಗೊಂಡಿದ್ದು  "ಮೆರ್ರಿ ಕ್ರಿಸ್ಮಸ್." ಎಂದು ಬರೆಯಲಾಗಿತ್ತು. 

ಇದನ್ನು ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ತ್ ಅವರು ರಿಚರ್ಡ್ ಜಾರ್ವಿಸ್ ಎಂಬ ಸಹೋದ್ಯೋಗಿಗೆ ಕಳುಹಿಸಿದ್ದರು. ಅವರು ಕಂಪನಿಯ ಕ್ರಿಸ್ಮಸ್ ಪಾರ್ಟಿಯಲ್ಲಿದ್ದಾಗ ಅದನ್ನು ಸ್ವೀಕರಿಸಿದರು.  ಪ್ಯಾರಿಸ್‌ನಲ್ಲಿರುವ ಅಗುಟ್ಟೆಸ್ ಹರಾಜು ಮನೆಯಲಿ ಈ ಹರಾಜು ನಡೆಸಲಾಗಿದ್ದು, ಇದರಲ್ಲಿ ಸುಮಾರು   € 100,000 ರಿಂದ € 200,000 ವರೆಗೆ ಆದಯಾ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಕಾನೂನು ಕಾರಣಗಳಿಂದಾಗಿ, ಹರಾಜಿನಲ್ಲಿ ವಿಜೇತರಾದ ಗ್ರಾಹಕರು SMS ಅನ್ನು ಪ್ರದರ್ಶಿಸಲು ಡಿಜಿಟಲ್ ಪಿಕ್ಚರ್ ಫ್ರೇಮ್ ಸೇರಿದಂತೆ  NFT ಸಹ ಸ್ವೀಕರಿಸುತ್ತಾರೆ.

Latest Videos

undefined

 

Vodafone will auction world’s first ever SMS, reading ‘Merry Christmas,’ as a non-fungible token pic.twitter.com/81Cyp2paLT

— Reuters (@Reuters)

 

ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಗೆ ಆದಾಯ ದಾನ!

ಮಾರಾಟದ ಆದಾಯವನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಗೆ (UNHCR) ದಾನ ಮಾಡುವುದಾಗಿ ವೊಡಾಫೋನ್ ಹೇಳಿದೆ."ತಂತ್ರಜ್ಞಾನವು ಯಾವಾಗಲೂ ಜಗತ್ತನ್ನು ಆವಿಷ್ಕರಿಸುವ ಮತ್ತು ಬದಲಾಯಿಸುವ ಶಕ್ತಿಯನ್ನು ಹೊಂದಿದೆ" ಎಂದು ವೊಡಾಫೋನ್ ಯುಎನ್‌ಹೆಚ್‌ಸಿಆರ್‌ನ ಖಾಸಗಿ ವಲಯದ ಪಾಲುದಾರಿಕೆ ಸೇವೆಯ ಮುಖ್ಯಸ್ಥ ಕ್ರಿಶ್ಚಿಯನ್ ಸ್ಕೇಕ್ (Christian Schaake) ಹೇಳಿದ್ದಾರೆ.

“ಸಾಮಾಜಿಕ ಒಳಿತಿಗಾಗಿ ಈ ಅದ್ಭುತ ತಂತ್ರಜ್ಞಾನ (Technology) ಮತ್ತು ಸಾಮಾಜಿಕ ಆಂದೋಲನದ ಸಂಯೋಜನೆಯ ಮೂಲಕ, UNHCR ನಿರಾಶ್ರಿತರಿಗೆ ಮತ್ತು ಮನೆಯಿಂದ ಬಲವಂತವಾಗಿ ಹೊರದೂಡಲಾದ ಜನರಿಗೆ ಸಹಾಯ ಮಾಡುವುದನ್ನು ಮುಂದುವರಿಸಬಹುದು, ಅವರ ಜೀವನವನ್ನು ಪರಿವರ್ತಿಸಲು ಮತ್ತು  ಅವರ ಪ್ರೀತಿಪಾತ್ರರಿಗೆ ಮತ್ತು ಸಮುದಾಯಗಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಅವಕಾಶವನ್ನು ನೀಡುತ್ತದೆ. ," ಸ್ಕೇಕ್ ಹೇಳಿದ್ದಾರೆ.

Non-Fungible Token (NFT) ಎಂದರೇನು?

ಆನ್‌ಲೈನ್ ಮಾಧ್ಯಮ ರೂಪದಲ್ಲಿರುವ  ವಸ್ತುಗಳನ್ನು ಯಾರು ಹೊಂದಿದ್ದಾರೆಂದು ಪ್ರಮಾಣೀಕರಿಸಲು ಡಿಜಿಟಲ್ ಫೈಲ್‌ಗಳು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಅವು ವಿಶಿಷ್ಟ ವಸ್ತುಗಳ ಮಾಲೀಕತ್ವವನ್ನು ಪ್ರತಿನಿಧಿಸಲು ಬಳಸಬಹುದಾದ ಟೋಕನ್ಗಳಾಗಿವೆ (Tokens)̤ ಇಂತಹ ಟೋಕನ್‌ಗಳನ್ನು ಎನ್‌ಎಫ್‌ಟಿ ಎಂದು ಕರೆಯಲಾಗುತ್ತದೆ.

Ethereum ಬ್ಲಾಕ್‌ಚೈನ್ ನೆಟ್‌ವರ್ಕ್‌ನಲ್ಲಿ NFT ಅನ್ನು ರಚಿಸಲಾಗುತ್ತದೆ. ಬ್ಲಾಕ್‌ಚೈನ್ ಮೂಲಭೂತವಾಗಿ ವ್ಯವಹಾರಗಳ ಸಾರ್ವಜನಿಕ ಡಿಜಿಟಲ್ ಪುರಾವೆ  ಆಗಿದ್ದು, ಅದನ್ನು ಬ್ಲಾಕ್‌ಚೈನ್‌ನಲ್ಲಿನ ಕಂಪ್ಯೂಟಿಂಗ್ ಸಿಸ್ಟಮ್‌ಗಳ ಸಹಯಾದಿಂದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ನಕಲು ಮಾಡಲಾಗುತ್ತದೆ ಮತ್ತು ವಿತರಿಸಲಾಗುತ್ತದೆ.

ವಿಶ್ವದ ಮೊದಲ ಟ್ವೀಟ್ ಮಾರಾಟ

2021ರ ಮಾರ್ಚ್‌ನಲ್ಲಿ ಟ್ವಿಟರ್ ಸಿಇಒ ಜಾಕ್ ಡಾರ್ಸಿ ತಮ್ಮ ಮೊದಲ ಟ್ವೀಟ್ನ ಡಿಜಿಟಲ್ ವರ್ಷನ್ ಹರಾಜಿನ ಮೂಲಕ ಮಾರಾಟ ಮಾಡಿದ್ದರು. ಇದರ ಆಕ್ಷನ್ ಘೋಷಿಸಿದ ಒಂದೇ ವಾರದಲ್ಲಿ 21 ಕೋಟಿಗೆ ಈ ಟ್ವೀಟ್ ಮಾರಾಟವಾಗಿತ್ತು.

2006 ಮಾರ್ಚ್‌ನಲ್ಲಿ ಪೋಸ್ಟ್ ಮಾಡಲಾದ ‘just setting up my twttr’ ಅನ್ನು ಬ್ರಿಡ್ಜ್ ಒರಾಕಲ್ ಸಿಇಒ ಸಿನ ಎಸ್ಟವಿ ಖರೀದಿಸಿದ್ದರು. ಆದಾಯವನ್ನು ಬ್ಯಾಂಕ್ ಅಥವಾ ಸರ್ಕಾರಕ್ಕೆ ಸಂಬಂಧಿಸದ ಡಿಜಿಟಲ್ ಕರೆನ್ಸಿಯಾಗಿರುವ ಬಿಟ್‌ಕಾಯಿನ್‌ಗೆ ಪರಿವರ್ತಿಸಲಾಗುವುದು ಮತ್ತು ಲಾಭೋದ್ದೇಶವಿಲ್ಲದ ಗಿವ್‌ಡೈರೆಕ್ಟ್ಲಿಯ ಆಫ್ರಿಕಾ ಪ್ರತಿಕ್ರಿಯೆಗೆ ನೀಡಲಾಗುವುದು ಎಂದು ಡಾರ್ಸಿ ಈ ತಿಂಗಳ ಆರಂಭದಲ್ಲಿ ಟ್ವೀಟ್ ಮಾಡಿದ್ದರು. ಕೊರೋನವೈರಸ್ ಸಾಂಕ್ರಾಮಿಕದಿಂದ ಆರ್ಥಿಕವಾಗಿ ಪ್ರಭಾವಿತರಾದ ಆಫ್ರಿಕನ್ ಕುಟುಂಬಗಳನ್ನು ಬೆಂಬಲಿಸಲು ಚಾರಿಟಿ ಹಣವನ್ನು ಸಂಗ್ರಹಿಸಲಾಗಿತ್ತು.

ಇದನ್ನೂ ಓದಿ:

1) Uravu Labs: ಗಾಳಿಯಿಂದಲೇ ಶುದ್ಧ ನೀರು ಉತ್ಪಾದಿಸುತ್ತಿದೆ ಬೆಂಗಳೂರು ಮೂಲದ ಈ ಸ್ಟಾರ್ಟಪ್!

2) Area Busyness : ನಿಮ್ಮ ನಗರದ ಜನನಿಬಿಡ ಪ್ರದೇಶಗಳ ಮಾಹಿತಿ ನೀಡುತ್ತದೆ ಗೂಗಲ್‌ ಮ್ಯಾಪ್ ಹೊಸ ಫೀಚರ್!

3) Ola Cabs: ರೈಡ್‌ ಸ್ವೀಕರಿಸುವ ಮುನ್ನವೇ ಚಾಲಕರಿಗೆ ಡ್ರಾಪ್‌ಲೊಕೇಶನ್‌, ಪೇಮೆಂಟ್‌ ಮಾಹಿತಿ ಲಭ್ಯ!

click me!