ಡಿ.26ರಿಂದ ಭಾರತದಲ್ಲಿ Asus ROG phone 5 Ultimate ಮಾರಾಟ, ಇಲ್ಲಿದೆ ಫೋನ್ ಬೆಲೆ ಹಾಗೂ ವಿಶೇಷತೆ!

By Suvarna News  |  First Published Dec 23, 2021, 6:08 PM IST

* ಕಳೆದ ಮಾರ್ಚ್‌ನಲ್ಲಿ ಆಸಸ್ ROG ಫೋನ್ 5 ಬಿಡುಗಡೆ ಮಾಡಿದ್ದ ಕಂಪನಿ
* 18 GB RAM ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಮಾರಾಟ 
* ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಈ ಫೋನ್ ಮಾರಾಟಕ್ಕೆಸಿಗಲಿದೆ


ಬೆಂಗಳೂರು(ಡಿ.23): ಭಾರತದಲ್ಲೂ ಸಾಕಷ್ಟು ಗ್ರಾಹಕರನ್ನು ಹೊಂದಿರುವ ಆಸಸ್ (Asus) ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ, ಹೊಸ ಹೊಸ ಮಾಡೆಲ್‌ಗಳನ್ನು ಪರಿಚಯಿಸುವ ಮೂಲಕನ್ನ ತನ್ನ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಕಳೆದ ಮಾರ್ಚ್‌ನಲ್ಲಿ ಆಸಸ್ ಆರ್‌ಒಜಿ ಫೋನ್ 5 (Asus ROG phone 5) ಬಿಡುಗಡೆ ಮಾಡಿದ್ದ ಕಂಪನಿ, ಇದೀಗ 18 ಜಿಬಿ RAM ಹೊಂದಿರುವ ಗೇಮಿಂಗ್ ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಆಸಸ್ ಆರ್‌ಒಜಿ ಫೋನ್ 5 ಅಲ್ಟಿಮೇಟ್ (Asus ROG phone 5 Ultimate) ಭಾರತದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಸಿಗಲಿದೆ(available first time in India). ಆ್ಯಸಸ್ ಕಂಪನಿ ಈ ಫೋನ್(Smartphone) ಭಾರತದಲ್ಲಿ ಡಿಸೆಂಬರ್ 26ರ ಮಧ್ಯಾಹ್ನದಿಂದ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ವಿಶೇಷ ಏನೆಂದೆರ, ಈ ಹೊಸ ಫೋನ್ ಅನ್ನು ಕಂಪನಿಯು ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ (Flip kart) ಮೂಲಕ ಮಾತ್ರವೇ ಮಾರಾಟ  ಮಾಡಲಿದೆ. ಅಂದರೆ ಎಕ್ಸ್‌ಕ್ಲೂಸಿವ್ ಆಗಿ ಪ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಇದು ದೊರೆಯಲಿದೆ. ಕಂಪನಿಯು 12 ತಿಂಗಳ ವಾರಂಟಿಯನ್ನು ಸಹ ನೀಡುತ್ತದೆ, ಕೇವಲ ಒಂದು ಬಣ್ಣದಲ್ಲಿ ಮಾತ್ರ ಲಭ್ಯವಿದೆ.

ಭಾರತೀಯ ಮಾರುಕಟ್ಟೆಯಲ್ಲಿ(Indian Market) ಕಳೆದ  ಮಾರ್ಚ್‌ನಲ್ಲಿ ಪರಿಚಯಿಸಲಾದ Asus ROG ಫೋನ್ 5 ಅಲ್ಟಿಮೇಟ್‌ನ 8GB RAM ಮತ್ತು 512 GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಅಂದಾಜು 79,999. ರೂ. ಇರಲಿದೆ.

Tap to resize

Latest Videos

undefined

OnePlus 10Pro ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ 

ಇದು ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್ (Qualcomm Snapdragon 888 5G SoC),  18 GB RAM ಮತ್ತು 512 GB LPDDR5 RAM ಅನ್ನು ಹೊಂದಿದೆ. ವಿಶೇಷ ಆವೃತ್ತಿಯ ಗೇಮಿಂಗ್ ಸ್ಮಾರ್ಟ್‌ಫೋನ್ 6.78 - ಇಂಚಿನ ಸ್ಯಾಮ್‌ಸಂಗ್ ಅಮೋಎಲ್ಇಡಿ (AMOLED) ಪ್ರದರ್ಶಕವನ್ನು 144Hz ರಿಫ್ರೆಶ್ ದರ, 1ms ಪ್ರತಿಕ್ರಿಯೆ ಸಮಯ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 (Android 11)ನಿಂದ ಚಾಲಿತವಾಗಿದೆ, ಮೇಲ್ಭಾಗದಲ್ಲಿ ROG UI ಇದೆ. ಇದು 20.4:9 ಆಕಾರ ಅನುಪಾತ, 395ppi ಪಿಕ್ಸೆಲ್ ಸಾಂದ್ರತೆ, 144Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ, 24.3ms ಟಚ್ ಲೇಟೆನ್ಸಿ ಮತ್ತು HDR10+ ಹೊಂದಾಣಿಕೆಯೊಂದಿಗೆ ಪೂರ್ಣ-HD+ Samsung AMOLED ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು 2.5D ಪ್ರದರ್ಶಕವನ್ನು ರಕ್ಷಿಸಲು ಸಹ ಬಳಸಲಾಗುತ್ತದೆ. ರಿಯರ್ ಪ್ಯಾನೆಲ್‌ನಲ್ಲಿ ROG ದೃಷ್ಟಿಯೊಂದಿಗೆ ಏಕವರ್ಣದ PMOLED ಪ್ರದರ್ಶನವನ್ನು ಸಹ ಸೇರಿಸಲಾಗಿದೆ.

ಇದು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಮೊದಲನೆಯ ಕ್ಯಾಮೆರಾ  64 -ಮೆಗಾಪಿಕ್ಸೆಲ್ ಸೋನಿ IMX686 ಕ್ಯಾಮೆರಾ ಆಗಿದೆ. ಇನ್ನೊಂದು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಮತ್ತು ಇನ್ನೊಂದು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳು ಇರಲಿವೆ. ಕ್ಯಾಮೆರಾಗಳ ದೃಷ್ಟಿಯಿಂದ ಈ ಫೋನು ಅತ್ಯುತ್ತಮವಾಗಿದೆ ಎನ್ನಬಹುದು.

Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!

5G, 4G LTE, Wi-Fi ಡೈರೆಕ್ಟ್, ಬ್ಲೂಟೂತ್ v5.2, NFC, USB ಟೈಪ್-C ಕನೆಕ್ಟರ್ ಮತ್ತು 3.5mm ಹೆಡ್ಫೋನ್ ಜ್ಯಾಕ್ ಸಂಪರ್ಕಗಳು ಫೋನಿನ ಕೆನಕ್ಟಿವಿಟಿ ಸಾಮರ್ಥ್ಯವನ್ನು ಹೆಚ್ಚಿಸಿವೆ. ಇದು 30 ವ್ಯಾಟ್ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000 mAh ಬ್ಯಾಟರಿಯನ್ನು ಹೊಂದಿದೆ. ಈ ಹೊಸ ಫೋನ್ 172.8x77.2x10.29mm ಆಯಾಮಗಳನ್ನು ಹೊಂದಿದೆ ಮತ್ತು 238 ಗ್ರಾಂ ತೂಕವನ್ನು ಹೊಂದಿದೆ. ಸದ್ಯಕ್ಕೆ ಈ ಫೋನ್ ಇನ್ನೂ ವಿವರವಾದ ಮಾಹಿತಿಗಳಲ್ಲ. ಬಿಡುಗಡೆಯಾದ ಬಳಿಕ ಪರಿಪೂರ್ಣ ಚಿತ್ರಣಗೊತ್ತಾಗಲಿದೆ.

click me!