Uravu Labs: ಗಾಳಿಯಿಂದಲೇ ಶುದ್ಧ ನೀರು ಉತ್ಪಾದಿಸುತ್ತಿದೆ ಬೆಂಗಳೂರು ಮೂಲದ ಈ ಸ್ಟಾರ್ಟಪ್!

By Suvarna News  |  First Published Dec 24, 2021, 9:41 AM IST

ಬೆಂಗಳೂರು ಮೂಲದ ವಾಟರ್ ಟೆಕ್ ಸ್ಟಾರ್ಟ್ಅಪ್ ಉರವು ಲ್ಯಾಬ್ಸ್ (Uravu Labs) ನವೀಕರಿಸಬಹುದಾದ ಮೂಲಗಳಿಂದ ನೀರನ್ನು ಉತ್ಪಾದಿಸುವತ್ತ ಹೆಜ್ಜೆ ಇಟ್ಟಿದೆ. 


Tech Desk Bengaluru: ನವೀಕರಿಸಬಹುದಾದ ಶಕ್ತಿ (Renewable Energy) ಬಳಕೆ ಚರ್ಚೆಗಳು ದೇಶಾದ್ಯಂತ ನಡೆಯುತ್ತಿವೆ. ಉದ್ಯಮಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಕೆ ಬಗ್ಗೆ ಜಾಗೃತಿ ಮೂಡುತ್ತಿದೆ. ಈ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ.   ಸೌರ ವಿಕಿರಣವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ದ್ಯುತಿವಿದ್ಯುಜ್ಜನಕ ಸೌರಶಕ್ತಿ ಅಥವಾ  ವಿದ್ಯುತ್ ಉತ್ಪಾದಿಸಲು ಗಾಳಿ ಟರ್ಬೈನ್‌ಗಳ (Air Turbine) ಬಳಕೆ ಇತ್ಯಾದಿ ನವೀಕರಿಸಬಹುದಾದ ಶಕ್ತಿಯ ಉದಾಹರಣೆಗಳಾಗಿವೆ. ವಿದ್ಯುಚ್ಛಕ್ತಿ ಕ್ಷೇತ್ರ ಅಭಿವೃದ್ಧಿ ಜತೆಗೆ ಈ ಸಮಯದಲ್ಲಿ ತುರ್ತಾಗಿ ಅಭಿವೃದ್ಧಿ ಹೊಂದಬೇಕಾದ ಮತ್ತೊಂದು ವಲಯ ಎಂದರೆ ನೀರಿನ ಉದ್ಯಮ.

ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ವಾಟರ್ ಟೆಕ್ ಸ್ಟಾರ್ಟ್ಅಪ್ ಉರವು ಲ್ಯಾಬ್ಸ್ (Uravu Labs) ನವೀಕರಿಸಬಹುದಾದ ಮೂಲಗಳಿಂದ ನೀರನ್ನು ಉತ್ಪಾದಿಸುವತ್ತ ಹೆಜ್ಜೆ ಇಟ್ಟಿದೆ.  2019 ರಲ್ಲಿ ಪರ್ದೀಪ್, ಸ್ವಪ್ನಿಲ್ ಶ್ರೀವಾಸ್ತವ್, ವೆಂಕಟೇಶ್ ಆರ್ ಮತ್ತು ಗೋವಿಂದ ಬಾಲಾಜಿ ಸ್ಥಾಪಿಸಿದ ಉರವು 100 ಪ್ರತಿಶತ ನವೀಕರಿಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು  ಕುಡಿಯುವ ನೀರನ್ನು ಉತ್ಪಾದಿಸಲು ವಾತಾವರಣದ ತೇವಾಂಶ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಮಾತ್ರ ಬಳಸಿಕೊಳ್ಳುತ್ತದೆ.

Tap to resize

Latest Videos

undefined

"ಉರವು ಲ್ಯಾಬ್ಸ್ ಮೊದಲ ಬಾರಿಗೆ 100 ಪ್ರತಿಶತ ನವೀಕರಿಸಬಹುದಾದ ನೀರಿನ ತಂತ್ರಜ್ಞಾನವನ್ನು ತರುವ ಮೂಲಕ ಕ್ರಾಂತಿ ಮಾಡಿದೆ, ಇದು ವಿಸ್ತರಿಸಬಹುದಾದ, ಕೈಗೆಟುಕುವ ಮತ್ತು ವಿವಿದ ಸ್ತರಗಳಲ್ಲಿ ಬಳಸಬಹುದು" ಎಂದು ಉರವು ಲ್ಯಾಬ್ಸ್‌ನ ಸಹ-ಸಂಸ್ಥಾಪಕ ಪರ್ದೀಪ್ ಗಾರ್ಗ್ (Pardeep Garg) ಹೇಳಿದ್ದಾರೆ.

ಈ ಎರಡು ಹಂತಗಳಲ್ಲಿ ನೀರನ್ನು ಉತ್ಪಾದಿಸಲಾಗುತ್ತಿದೆ.

1)  Adsorption (ಹೀರುವಿಕೆ) - ಈ ಹಂತದಲ್ಲಿ,  ಗಾಳಿಯಲ್ಲಿನ ತೇವಾಂಶವನ್ನು  ವ್ಯವಸ್ಥೆಯಲ್ಲಿ ಹೀರಿಕೊಳ್ಳಲಾಗುತ್ತದೆ ಮತ್ತು  ಡೆಸಿಕ್ಯಾಂಟ್  (ಶುಷ್ಕಕಾರಿ) ವಸ್ತುಗಳ ಮೇಲೆ ಹಾಯಿಸಲಾಗುತ್ತದೆ.  ಒಂದೆರಡು ಗಂಟೆಗಳ ಅವಧಿಯಲ್ಲಿ ಡೆಸಿಕ್ಯಾಂಟ್ ವಸ್ತುಗಳು ತೇವಾಂಶವನ್ನು ಹೀರಿಕೊಳ್ಳಲಾಗುತ್ತವೆ

2) Desorption (ನಿರ್ಜಲೀಕರಣ) - ಮೊದಲ ಹಂತದಲ್ಲಿ ಹೀರಿಕೊಂಡ ತೇವಾಂಶವನ್ನು 90 C ಗಿಂತ ಕಡಿಮೆ ತಾಪಮಾನದಲ್ಲಿ ಲಭ್ಯವಿರುವ ಉಷ್ಣ ಶಾಖವನ್ನು ಬಳಸಿಕೊಂಡು  ನಿರ್ಜಲೀಕರಣಗೊಳಿಸಲಾಗುತ್ತದೆ. ಸೌರಶಕ್ತಿಯಿಂದ ಅಥವಾ  ಕೈಗಾರಿಕೆಗಳಿಂದ ತ್ಯಾಜ್ಯ ಅಥವಾ ಜೈವಿಕ ತ್ಯಾಜ್ಯಗಳಿಂದ ಶಾಖವನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ಶಾಖವನ್ನು ಡೆಸಿಕ್ಯಾಂಟನ್ನು ಬಿಸಿಮಾಡಲು ಬಳಸಲಾಗುತ್ತಿದೆ.
 
ಇದು ಡೆಸಿಕ್ಯಾಂಟ್ ವಸ್ತುಗಳನ್ನು ಅಗತ್ಯವಾದ ತಾಪಮಾನಕ್ಕೆ ಏರಿಸುವ ಮೂಲಕ  ಹೀರಿಕೊಂಡ ತೇವಾಂಶವನ್ನು ಬಿಡುಗಡೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಬಿಡುಗಡೆಯಾದ ತೇವಾಂಶವನ್ನು ಗಾಳಿಯಿಂದ ತಂಪಾಗುವ ಕಂಡೆನ್ಸರ್‌ನಲ್ಲಿ ಸುತ್ತುವರಿದ ತಾಪಮಾನದಲ್ಲಿ ಘನೀಕರಿಸಲಾಗುತ್ತದೆ ಮತ್ತು ಶುದ್ಧ ಮತ್ತು 100 ಪ್ರತಿಶತ ನವೀಕರಿಸಬಹುದಾದ ನೀರನ್ನು ಉತ್ಪಾದಿಸಲಾಗುತ್ತಿದೆ. ಈ ನಿರ್ಜಲೀಕರಣ ಹಂತವು ಒಂದೆರಡು ಗಂಟೆಗಳವರೆಗೆ ನಡೆಯುತ್ತದೆ.

ಸ್ಟಾರ್ಟ್‌ಅಪ್ ಪ್ರಮಾಣಿತ ಘಟಕಗಳು ಮತ್ತು ವಾಣಿಜ್ಯಿಕವಾಗಿ ಲಭ್ಯವಿರುವ ಡೆಸಿಕ್ಯಾಂಟ್ ವಸ್ತುಗಳನ್ನು ಬಳಸುತ್ತದೆ. ಹಾಗಾಗಿ ಇದರ ತಯಾರಿಕೆ ಮತ್ತು ಬಳಕೆ ಸುಲಭವಾಗುತ್ತದೆ. "ಹಾಗೆಯೇ, ಆರ್ದ್ರತೆಯು ಸುಮಾರು 30 ಪ್ರತಿಶತದಷ್ಟು ಇರುವಾಗಲೂ ತೇವಾಂಶವನ್ನು ಸೆರೆಹಿಡಿಯಲು ನಮ್ಮ ತಂತ್ರಜ್ಞಾನ ವೆಚ್ಚ-ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಪರ್ದೀಪ್ ಹೇಳಿದ್ದಾರೆ.

ಇದನ್ನೂ ಓದಿ:

1) Diavol Virus: ಬಂದಿದೆ ದುಡ್ಡು ಕದಿಯುವ ಹೊಸ ಕಂಪ್ಯೂಟರ್‌ ಇ ಮೇಲ್‌ ವೈರಸ್‌!

2) ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇರ್‌ ಕಟ್‌ ಹೇಗೆ ಮಾಡ್ತಾರೆ ಗೊತ್ತಾ... ಈ ವಿಡಿಯೋ ನೋಡಿ

3) Sound from Ganymede: ಸೌರವ್ಯೂಹದ ಅತಿದೊಡ್ಡ ಚಂದ್ರನ ಶಬ್ದ ಸೆರೆಹಿಡಿದ ನಾಸಾದ ಜುನೋ ಮಿಷನ್: ಇಲ್ಲಿದೆ ಆಡಿಯೋ!

click me!