17 ದಿನಗಳ ಬಳಿಕ ಇಸ್ರೋ ಟ್ವೀಟ್| ಕಾತುರದಿಂದ ಕಾಯುತ್ತಿದ್ದವರಿಗೆ ಟ್ವೀಟ್ ಮೂಲಕ ಧನ್ಯವಾದ ಎಂದ ಇಸ್ರೋ| ಬೆಂಬಲಕ್ಕೆ ನಿಂತ ನಿಮಗೆ Thank You, ವಿಕ್ಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದೇವೆ
ನವದೆಹಲಿ[ಸೆ.18]: ಚಂದ್ರಯಾನ 2, ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ ಎಂದು ಕಾತುರದಿಂದ ಕಾಯುತ್ತಿದ್ದವರೆಲ್ಲರಿಗೂ ಭಾರತದ ಹೆಮ್ಮೆ ಇಸ್ರೋ ಸಂಸ್ಥೆ ಟ್ವೀಟ್ ಮೂಲಕ Thank You ಎಂದಿದೆ.
ಹೌದು ಸೆಪ್ಟೆಂಬರ್ 10 ರಂದು ವಿಕ್ರಮ್ ಲ್ಯಾಂಡರ್ ಚಿತ್ರ ಲಭಿಸಿದೆ ಎಂದು ಟ್ವೀಟ್ ಮಾಡಿದ್ದ ಇಸ್ರೋ ಮೌನ ತಳೆದಿತ್ತು. ಹಿಗಿದ್ದರೂ ಭಾರತೀಯರ ಕುತೂಹಲ ಮಾತ್ರ ಜೀವಂತವಾಗಿತ್ತು. ಇದೀಗ ಸುಮಾರು 17 ದಿನಗಳ ಬಳಿಕ ಮತ್ತೆ ಟ್ವೀಟ್ ಮಾಡಿರುವ ಇಸ್ರೋ ವಿಕ್ರಮ್ ಲ್ಯಾಂಡರ್ ಗಾಗಿ ಕುತೂಹಲದಿಂದ ಕಾದು, ಇಸ್ರೋ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದೆ. 'ನಮ್ಮೊಂದಿಗೆ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು. ಜಗತ್ತಿನಾದ್ಯಂತ ಇರುವ ಭಾರತೀಯರ ಈ ಭರವಸೆ ಮತ್ತು ಕನಸುಗಳನ್ನು ನಾವು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗುತ್ತೇವೆ' ಎಂದು ಟ್ವೀಟ್ ಮಾಡಿದೆ.
Thank you for standing by us. We will continue to keep going forward — propelled by the hopes and dreams of Indians across the world! pic.twitter.com/vPgEWcwvIa
— ISRO (@isro)
undefined
ಚಂದ್ರಯಾನ 2 ಏನಾಗಿತ್ತು?
ಸೆಪ್ಟೆಂಬರ್ 7 ರಂದು ರಾತ್ರಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್, ಚಂದ್ರನನ್ನು ತಲುಪಲು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸೇಫಾಗಿದೆ ಎಂಬ ಚಿತ್ರನ್ನು ಆರ್ಬಿಟರ್ ಕಳುಹಿಸಿದ ಬಳಿಕ ಅದು ಮತ್ತೆ ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು. ಇಸ್ರೋನ ಈ ಸಾಹಸಕ್ಕೆ ನಾಸಾ ಕೂಡಾ ಸಹ ಕೈಜೋಡಿಸಿದೆ. ಇಂದು ಮಂಗಳವಾರ ನಾಸಾದ ಆರ್ಬಿಟರ್ ವಿಕ್ರಮ್ ಇರುವ ಜಾಗದ ಸುತ್ತ ಹಾರಾಡಿ ಮಾಹಿತಿ ಕಲೆ ಹಾಕಲಿದೆ ಎಂದು ಸಂಸ್ಥೆ ತಿಳಿಸಿದೆ.
ಚಂದ್ರಯಾನ 2: ೆಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ