Tesla in India: ಟೆಸ್ಲಾ ಜೊತೆ ಪಾಲುದಾರಿಕೆಗೆ ತೆಲಂಗಾಣ ಸಿದ್ಧ: ಎಲಾನ್‌ ಮಸ್ಕ್‌ಗೆ ಕೆಟಿಆರ್‌ ಆಹ್ವಾನ!

By Suvarna News  |  First Published Jan 15, 2022, 12:05 PM IST

*ಭಾರತದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ಎಲಾನ್‌ ಮಸ್ಕ್
*ಟೆಸ್ಲಾ ಜೊತೆ ಪಾಲುದಾರಿಕೆಗೆ ತೆಲಂಗಾಣ ಸಿದ್ಧ‌ ಎಂದು ಕೆಟಿಆರ್‌
*ಉದ್ಯಮ ಸ್ಥಾಪಿಸಲು ಆಹ್ವಾನ ನೀಡಿದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ


Tech Desk: ವಿಶ್ವದ ಅತೀ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ಟೆಸ್ಲಾ ಕಾರು(Tesla Car) ಭಾರತದಲ್ಲಿ ಬಿಡುಗಡೆ ಮಾಡಲು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದೆ. ಆದರೆ ಇನ್ನು ಕಾರು ಭಾರತ ತಲುಪಿಲ್ಲ. ಈ ಬೆನ್ನಲ್ಲೇ ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಇತ್ತಿಚೆಗೆ ಟ್ವೀಟ್‌ ಮೂಲಕ ಭಾರತದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು. ಈ ಮಧ್ಯೆ  ಹೊಸ ಬೆಳವಣಿಗೆ ಕಂಡುಬಂದಿದೆ. ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕಲ್ವಕುಂಟ್ಲಾ ತಾರಕ ರಾಮರಾವ್ (K T Rama Rao) ಟೆಸ್ಲಾ ಜೊತೆ ಪಾಲುದಾರಿಕೆಗೆ ತಮ್ಮ ರಾಜ್ಯ ಸಿದ್ದವಾಗಿದೆ ಎಂದು ಎಲಾನ್‌ ಮಸ್ಕ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲಿ ಕಾರು ಬಿಡುಗಡೆ ಪ್ರಯತ್ನಗಳು ನಡೆಯುತ್ತಿದೆ. ಆದರೆ ಸರ್ಕಾರದ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೆಟಿಆರ್‌ "ಹೇ ಎಲೋನ್, ನಾನು ಭಾರತದಲ್ಲಿ ತೆಲಂಗಾಣ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ. ಭಾರತ/ತೆಲಂಗಾಣದಲ್ಲಿ ಟೆಸ್ಲಾ ಸ್ಥಾಪಿಸಲು ಇರುವ ಸವಾಲುಗಳನ್ನು ಎದುರಿಸುವಲ್ಲಿ ಕೆಲಸ ಮಾಡಲು ಟೆಸ್ಲಾ ಜತೆ ಪಾಲುದಾರರಾಗಲು ಸಿದ್ದರಿದ್ದೇವೆ.  ನಮ್ಮ ರಾಜ್ಯವು ಸುಸ್ಥಿರತೆಯ ಉಪಕ್ರಮಗಳಲ್ಲಿ (sustainability) ಚಾಂಪಿಯನ್ ಆಗಿದೆ ಮತ್ತು ಭಾರತದಲ್ಲಿ ಉನ್ನತ ದರ್ಜೆಯ ವ್ಯಾಪಾರ ತಾಣವಾಗಿದೆ" ಎಂದು ಹೇಳಿದ್ದಾರೆ. ಈ ಮೂಲಕ ತೆಲಂಗಾಣ  ಟೆಸ್ಲಾಗೆ ಎಲಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಕೆಟಿಆರ್‌ ಸ್ಪಷ್ಟಪಡಿಇದ್ದಾರೆ. 2016 ರಲ್ಲಿ, ರಾವ್ ಭಾರತದಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಅನ್ನು ಪರೀಕ್ಷಿಸಿದ್ದರು ಮತ್ತು ಮಸ್ಕ್ ಅನ್ನು ಹೊಗಳಿದ್ದರು.

Tap to resize

Latest Videos

undefined

 

Hey Elon, I am the Industry & Commerce Minister of Telangana state in India

Will be happy to partner Tesla in working through the challenges to set shop in India/Telangana

Our state is a champion in sustainability initiatives & a top notch business destination in India https://t.co/hVpMZyjEIr

— KTR (@KTRTRS)

 

ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಎಲಾನ್‌!

 ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈ ಹಿಂದೆ ಪ್ರಣಯ್ ಪಾಥೋಲ್ ಅವರ ಟ್ವೀಟ್‌ಗೆ ಉತ್ತರಿಸಿದ್ದರು, ಅವರು ಭಾರತದಲ್ಲಿ ಟೆಸ್ಲಾ ಬಿಡುಗಡೆಗೆ ಸಂಬಂಧಿಸಿದ ಪ್ರಶ್ನೆಯನ್ನು ಪೋಸ್ಟ್ ಮಾಡಿದ್ದಾರೆ - “yo @elonmusk ಭಾರತದಲ್ಲಿ ಟೆಸ್ಲಾವನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬುದರ ಕುರಿತು ಯಾವುದೇ ಹೆಚ್ಚಿನ Updateಇದೆಯೇ? ಟೆಸ್ಲಾ ಬಹಳ ಅದ್ಭುತವಾಗಿದೆ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಇರಲು ಅರ್ಹ!" ಎಂದು ಪೋಸ್ಟ್‌ ಮಾಡಿದ್ದರು

ಇದನ್ನೂ ಓದಿ: Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

ಇದಕ್ಕೆ ಉತ್ತರಿಸಿದ ಮಸ್ಕ್, "ಇನ್ನೂ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳ ಮೂಲಕ ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದ್ದರು.  ರಾಯಿಟರ್ಸ್‌ಗೆ ಹೇಳಿದಂತೆ ಕಂಪನಿಯು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಇವಿಗಳ (EV) ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸುವಂತೆ ಮಸ್ಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ವಾಸ್ತವವಾಗಿ, ಭಾರತವು ಆಮದು ಮಾಡಿದ ಕಾರುಗಳ ಮೇಲೆ 60 ಪ್ರತಿಶತದಿಂದ 100 ಪ್ರತಿಶತದವರೆಗೆ ಕಸ್ಟಮ್ಸ್ ಸುಂಕವನ್ನು ಹೊಂದಿದೆ.

 

Yo any further update as to when Tesla's will launch in India? They're pretty awesome and deserve to be in every corner of the world! pic.twitter.com/J7fU1HMklE

— Pranay Pathole (@PPathole)

 

ಭಾರತದಲ್ಲಿನ ತೆರಿಗೆಗಳು ವಿಶ್ವದಲ್ಲೇ ಅತ್ಯಧಿಕವಾಗಿದೆ ಮತ್ತು ಆದ್ದರಿಂದ ಭಾರತೀಯ ಇವಿ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಅವುಗಳನ್ನು ಕಡಿತಗೊಳಿಸಬೇಕೆಂದು ಮಸ್ಕ್ ಹೇಳಿದರು. ಇದು ಬಹಳಷ್ಟು ಭಾರತೀಯ ಆಟೋಮೊಬೈಲ್ ತಯಾರಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ  ಇದು ಸ್ಥಳೀಯ ಉತ್ಪಾದನೆಯಲ್ಲಿ ಹೂಡಿಕೆಯನ್ನು ನಿರುತ್ಸಾಹಗೊಳಿಸಬಹುದು ಎಂದು ಅವರು ಹೇಳಿದ್ದರು.

ಮೂರು ಎಲೆಕ್ಟ್ರಿಕ್ ವಾಹನಗಳಿಗೆ ಅನುಮೋದನೆ!

ಇದಲ್ಲದೆ, ಮಸ್ಕ್ ಒಡೆತನದ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳ ಮೂರು ಟ್ರಿಮ್‌ಗಳಿಗೆ ಅನುಮೋದನೆಯನ್ನು ಪಡೆದಿದೆ, ಒಟ್ಟು ಏಳು ಆವೃತ್ತಿಗಳನ್ನು ದೇಶದಲ್ಲಿ ಅನುಮೋದಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ಟೆಸ್ಲಾ ಇಂಡಿಯಾ ದೇಶದಲ್ಲಿ ಇನ್ನೂ ಮೂರು ವಾಹನಗಳಿಗೆ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಟೆಸ್ಲಾರಾಟಿ (Teslarati) ಈ ಹಿಂದೆ ವರದಿ ಮಾಡಿದೆ.

ಇದನ್ನೂ ಓದಿ: Starlink Pre Order Refund: 3 ತಿಂಗಳ ಹಿಂದಷ್ಟೇ ಕಂಪನಿ ಸೇರಿದ್ದ ಇಂಡಿಯಾ ಹೆಡ್ ಸಂಜಯ್ ಭಾರ್ಗವ ರಾಜೀನಾಮೆ!

ಆಗಸ್ಟ್‌ನಲ್ಲಿ, ಟೆಸ್ಲಾ ತನ್ನ ನಾಲ್ಕು ಕಾರು ಮಾದರಿಗಳಿಗೆ ಹೋಮೋಲೋಗೇಶನ್ ಪ್ರಮಾಣಪತ್ರಗಳನ್ನು ಪಡೆದುಕೊಂಡಿತು. ಇನ್ನೂ ಮೂರು ಪ್ರಮಾಣಪತ್ರಗಳೊಂದಿಗೆ, ಎಲೆಕ್ಟ್ರಿಕ್ ವಾಹನ ತಯಾರಕರು ಈಗ ಭಾರತದಲ್ಲಿ ಏಳು ವಾಹನಗಳನ್ನು ಅನುಮೋದಿಸಿದ್ದಾರೆ. ಅನುಮೋದನೆಯನ್ನು ಪಡೆದ ನಿಖರವಾದ ಟೆಸ್ಲಾ ರೂಪಾಂತರಗಳನ್ನು ನಿರ್ದಿಷ್ಟಪಡಿಸಲಾಗಿಲ್ಲ. ಆದಾಗ್ಯೂ, ಭಾರತೀಯ ರಸ್ತೆಗಳಲ್ಲಿ ಮಾಡೆಲ್ 3s ಮತ್ತು ಮಾಡೆಲ್ Ysಗಳು ಕಂಡುಬಂದಿವೆ ಎಂದು ವರದಿ ಹೇಳಿದೆ.

ಹೋಮೋಲೋಗೇಶನ್ ಪ್ರಮಾಣಪತ್ರಗಳನ್ನು ಹೊಂದಿರುವ ಇತ್ತೀಚಿನ ಮೂರು ವಾಹನಗಳನ್ನು ಹೆಸರಿಸಲಾಗಿಲ್ಲ ಎಂದು ವರದಿ ತಿಳಿಸಿದೆ. ಕೆಲವು ಟೆಸ್ಲಾ ಪರೀಕ್ಷಾ ಘಟಕಗಳು ಭಾರತದಲ್ಲಿ ಸ್ಥಳೀಯ ರಸ್ತೆಗಳ ಮೂಲಕ ನಿಯಮಿತವಾಗಿ ನ್ಯಾವಿಗೇಟ್ ಮಾಡುತ್ತಿವೆ ಎಂದು ತಿಳಿದು ಬಂದಿದೆ.

click me!