ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತೀ ಕಡಿಮೆ ಬೆಲೆಯ 3 ಕ್ಯಾಮೆರಾಗಳ ಫೋನ್!

By Web Desk  |  First Published Apr 4, 2019, 4:04 PM IST

ಕಡಿಮೆ ಬೆಲೆಗೆ ಮೂರು ಕ್ಯಾಮರಾಗಳ ಫೋನ್‌ | ಪವರ್‌ ಆಫ್‌ 3 | ಮಿಡ್‌ ನೈಟ್‌ ಬ್ಲ್ಯಾಕ್‌, ಬ್ಲೂ, ಗೋಲ್ಡ್‌ ಕಲರ್‌ಗಳಲ್ಲಿ ಲಭ್ಯ


ಈಗೆಲ್ಲಾ ಎರಡು, ಮೂರು, ನಾಲ್ಕು ಕ್ಯಾಮರಾಗಳ ಜಮಾನ. ಅದೂ ಹೈ ಕ್ವಾಲಿಟಿ ಕ್ಯಾಮರಾಗಳು. ಇವೆಲ್ಲಾ ನಿಮ್ಮ ಕಣ್ಮನ ಸೆಳೆಯುತ್ತಿದ್ದರೂ ಕೊಂಡುಕೊಳ್ಳಬೇಕು ಎಂದರೆ ಜೇಬು ಸ್ವಲ್ಪ ಭಾರವಾಗಿಯೇ ಇರಬೇಕು. 

ಆದರೆ ಇದನ್ನು ಸುಳ್ಳು ಮಾಡಲು ಬಂದಿದೆ Tecno Camon i4 . ‘ಪವರ್‌ ಆಫ್‌ 3’ ಎನ್ನುವ ಹೆಸರು ಹೊತ್ತುಕೊಂಡು ಮೂರು ಕ್ಯಾಮರಾಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಫೋನ್‌ ಬೆಲೆ 11,999.

Tap to resize

Latest Videos

undefined

ಇಷ್ಟುಕಡಿಮೆ ಬೆಲೆಗೆ ಮೂರು ಕ್ಯಾಮರಾ, 4GB ಪ್ಲಸ್‌ 64GB ಸಾಮರ್ಥ್ಯ ಹೊಂದಿರುವ ಮೊಟ್ಟಮೊದಲ ಫೋನ್‌ ಎನ್ನುವ ಹೆಗ್ಗಳಿಗೆ ಇದಕ್ಕೆ ಮತ್ತೊಂದು ಪ್ಲಸ್‌ ಪಾಯಿಂಟ್‌. 

ಇದನ್ನೂ ಓದಿ: gmailಗೆ ತುಂಬಿತು 15 ವರ್ಷ; ಹೇಗಿದ್ದಾ ಹೇಗಾದ ಗೊತ್ತಾ Google ಪುತ್ರ?

ಸದ್ಯ ಮಿಡ್‌ ನೈಟ್‌ ಬ್ಲ್ಯಾಕ್‌, ಬ್ಲೂ, ಗೋಲ್ಡ್‌ ಕಲರ್‌ಗಳಲ್ಲಿ ಲಭ್ಯವಾಗುತ್ತಿರುವ Tecno Camon i4 ವಿವಿಧ ಮೊಮೊರಿ ಪವರ್‌ ಮತ್ತು ಅದಕ್ಕೆ ತಕ್ಕಂತಹ ಬೆಲೆಗಳಲ್ಲಿ ದೊರೆಯುತ್ತದೆ.

* 2ಜಿಬಿ ಪ್ಲಸ್‌ 32ಜಿಬಿ ಬೆಲೆ: 9599 ರು.

* 3ಜಿಬಿ ಪ್ಲಸ್‌ 32ಜಿಬಿ ಬೆಲೆ: 10599 ರು.

* 4ಜಿಬಿ ಪ್ಲಸ್‌ 64ಜಿಬಿ ಬೆಲೆ: 11,999 ರು.

ಇವೆಲ್ಲವೂ ಕ್ರಮವಾಗಿ 13, 2, 8 ಎಂಪಿಯ ಮೂರು ಹಿಂಬದಿ ಕ್ಯಾಮರಾಗಳು ಮತ್ತು 16 ಎಂಪಿಯ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ.

click me!