ಚಿಂತೆ ಯಾಕೆ? Xiaomi ಸ್ಮಾರ್ಟ್‌ಫೋನ್‌ನಲ್ಲಿದೆ ‘ಹಿಡನ್’ ಸೌಲಭ್ಯ!

By Web DeskFirst Published Apr 4, 2019, 3:23 PM IST
Highlights

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ Xiaomi ಭಾರೀ ಜನಪ್ರಿಯವಾಗಿದೆ.  ಅಗ್ಗದ ಬೆಲೆಗೆ ಒಳ್ಳೆಯ ಪೋನ್ ಗಳನ್ನು ಮಾರುಕಟ್ಟೆಗೆ ಬಿಡುವ Xiaomiದು ಒಂದು ‘ಸಮಸ್ಯೆ’ ಇದೆ. ಅದಕ್ಕೆ ಪರಿಹಾರ ಇಲ್ಲವೆಂದಲ್ಲ...

Xiaomi ಫೋನ್‌ಗಳಾದ Redmi Note 7, Redme Note 7 Pro ಇತ್ಯಾದಿ ಫೋನ್‌ಗಳು ಭಾರಿ ಜನಪ್ರಿಯವಾಗಿದೆ. ಕಡಿಮೆ ಬೆಲೆಗೆ ಒಳ್ಳೆಯ ಫೀಚರ್‌ಗಳಿರುವ ಈ ಫೋನ್‌ಗಳನ್ನು ನೂರಾರು ಜನ ಪ್ರೀತಿಸುತ್ತಾರೆ. ಆದರೆ ಈ ಫೋನುಗಳಲ್ಲಿ ಭಾರಿ ಆ್ಯಡ್‌ ಕಾಟವೂ ಇರುತ್ತದೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಡಿಫಾಲ್ಟ್‌ ಆ್ಯಪ್‌ಗಳಾದ ಎಂಐ ಬ್ರೌಸರ್‌, ಎಂಐ ಮ್ಯೂಸಿಕ್‌, ಎಂಐ ವಿಡಿಯೋ ಇತ್ಯಾದಿಗಳಲ್ಲಿ ತುಂಬಾ ಜಾಹೀರಾತು ಬರುತ್ತಿರುತ್ತವೆ. ಈಗ ಆ ಜಾಹೀರಾತುಗಳನ್ನು ನೀವು ಬರದಂತೆ ತಡೆಯಬಹುದು. MIUI10 ಹೊಂದಿರುವ ಸ್ಮಾರ್ಟ್‌ಫೋನ್‌ ಹೊಂದಿರುವವರು ಕೆಳಗಿನ ಐಡಿಯಾ ಪಾಲಿಸಿ.

ಇದನ್ನೂ ಓದಿ: Whatsapp ಹೊಸ ಫೀಚರ್: ಇನ್ನು ತಲೆ ನೋವಿಲ್ಲ, ಗ್ರೂಪ್‌ಗೆ ಸೇರಲು 3 ಆಪ್ಷನ್‌!

ಆ್ಯಡ್‌ ರೆಕಮಂಡೇಷನ್‌ ಆಫ್‌ ಮಾಡುವ ವಿಧಾನ

1. ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ MIUI10 ಇದೆಯಾ ಎಂಬುದನ್ನು ನೋಡಿ. ಇರುವುದೇ ಆದರೆ ಇಂಟರ್‌ನೆಟ್‌ ಆನ್‌ ಮಾಡಿಕೊಳ್ಳಿ. ಆಫ್‌ಲೈನ್‌ನಲ್ಲಿ ಈ ತಂತ್ರ ಕೆಲಸ ಮಾಡಲ್ಲ.

2. ಸೆಟ್ಟಿಂಗ್ಸ್‌ನಲ್ಲಿ ಅಡಿಷನಲ್‌ ಸೆಟ್ಟಿಂಗ್ಸ್‌ ಆಪ್ಷನ್‌ ಇರುತ್ತದೆ. ಅಲ್ಲಿ ಅಥೋರೈಸೇಷನ್‌ ಆ್ಯಂಡ್‌ ರಿವೋಕೇಷನ್‌ ಆಯ್ಕೆ ಕ್ಲಿಕ್‌ ಮಾಡಿದರೆ ಅಲ್ಲಿ ಎಂಎಸ್‌ಎ ಎಂಬ ಆಯ್ಕೆಯನ್ನು ಆಫ್‌ ಮಾಡಬೇಕು.

3. 10 ಸೆಕೆಂಡ್‌ ಕಾದ ಮೇಲೆ ರಿವೋಕ್‌ ಎಂಬ ಆಯ್ಕೆಯನ್ನು ಒತ್ತಬೇಕು.

4. Couldn't revoke authorization ಎಂಬ ಮೆಸೇಜ್‌ ಕಾಣಿಸಿಕೊಳ್ಳುತ್ತದೆ. ನಾಲ್ಕೈದು ಸಾಲ ನೀವು ರಿವೋಕ್‌ ಆಪ್ಷನ್‌ ಕ್ಲಿಕ್‌ ಮಾಡಿದಾಗಲೂ ಈ ಮೆಸೇಜ್‌ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ಮೆಸೇಜ್‌ ಬರದೇ ಇರುವವರೆಗೂ ನೀವು ರಿವೋಕ್‌ ಆಯ್ಕೆ ಒತ್ತುತ್ತಲೇ ಇರಬೇಕು.

5. ಇದರ ನಂತರ ಮತ್ತೆ Settings> Additional Settings > Privacy > Adsevices Personalized As recommendations
 ಹೋಗಿ ಅಲ್ಲಿ ಆಫ್‌ ಮಾಡಬೇಕು.

ಇದನ್ನೂ ಓದಿ: ವಾಟ್ಸಾಪ್‌ಗೆ ಬಂದ ಸಂದೇಶ ನಿಜವಾ? ಈ ಸಂಖ್ಯೆಗೆ ಕಳಿಸಿ, ತಿಳ್ಕೊಳ್ಳಿ

ಎಂಐ ವಿಡಿಯೋ ಆ್ಯಪ್‌ನ ಜಾಹೀರಾತು ತೆಗೆಯುವ ವಿಧಾನ

1. ಎಂಐ ವಿಡಿಯೋ ಆ್ಯಪ್‌ ತೆರೆಯಿರಿ.

2. ಬಲಭಾಗದಲ್ಲಿ ಕೆಳಗೆ ಇರುವ ಅಕೌಂಟ್‌ ಆಪ್ಷನ್‌ ಕ್ಲಿಕ್‌ ಮಾಡಿ.

3. ಆನ್‌ಲೈನ್‌ ರೆಕಮಂಡೇಷನ್ಸ್‌ ಅಂತ ಇರತ್ತೆ. ಅದನ್ನು ಆಫ್‌ ಮಾಡಿ. ನಂತರ ಪುಶ್‌ ನೋಟಿಫಿಕೇಷನ್ಸ್‌ ಆಯ್ಕೆಗಳನ್ನೂ ಆಫ್‌ ಮಾಡಿ.

ಎಂಐ ಬ್ರೌಸರ್‌, ಎಂಐ ಮ್ಯೂಸಿಕ್‌, ಎಂಐ ಸೆಕ್ಯುರಿಟಿ ಆ್ಯಡ್‌ ನಿಲ್ಲಿಸುವ ವಿಧಾನ

ಸೆಟ್ಟಿಂಗ್ಸ್‌ನಲ್ಲಿ ಸಿಸ್ಟಂ ಆ್ಯಪ್‌ ಸೆಟ್ಟಿಂಗ್ಸ್‌ ಅಂತ ಇರತ್ತೆ. ಅಲ್ಲಿ ಕ್ರಮವಾಗಿ ಮ್ಯೂಸಿಕ್‌, ಸೆಕ್ಯುರಿಟಿ ಮತ್ತು ಬ್ರೌಸರ್‌ ಆಯ್ಕೆಗಳು ಇರುತ್ತವೆ. ಎಂಐ ಸೆಕ್ಯುರಿಟಿ ಮತ್ತು ಎಂಐ ಮ್ಯೂಸಿಕ್‌ನಲ್ಲಿ ರಿಸೀವ್‌ ರೆಕಮಂಡೇಷನ್ಸ್‌ ಅನ್ನು ಆಫ್‌ ಮಾಡಿದರೆ ಸಾಕು. ಬ್ರೌಸರ್‌ನ ಪ್ರೈವೆಸಿ ಆ್ಯಂಡ್‌ ಸೆಕ್ಯುರಿಟಿ ಆಪ್ಷನ್‌ಗೆ ಹೋಗಿ ಅಲ್ಲಿ ರಿಸೀವ್‌ ರೆಕಮಂಡೇಷನ್ಸ್‌ ಅನ್ನು ಆಫ್‌ ಮಾಡಬೇಕು.

click me!