Starlink Pre Order Refund: 3 ತಿಂಗಳ ಹಿಂದಷ್ಟೇ ಕಂಪನಿ ಸೇರಿದ್ದ ಇಂಡಿಯಾ ಹೆಡ್ ಸಂಜಯ್ ಭಾರ್ಗವ ರಾಜೀನಾಮೆ!

By Suvarna News  |  First Published Jan 5, 2022, 7:57 PM IST

ಸ್ಟಾರ್‌ಲಿಂಕ್ ಇಂಡಿಯಾ ನಿರ್ದೇಶಕ ಸಂಜಯ್ ಭಾರ್ಗವ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ಸ್ಟಾರ್‌ಲಿಂಕ್ ಇಂಡಿಯಾದ ದೇಶದ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದೇನೆ ಎಂದು ಅವರು ಹೇಳಿದ್ದಾರೆ. 
 


Tech Desk: ಸ್ಟಾರ್‌ಲಿಂಕ್ ಇಂಡಿಯಾ ಕಂಟ್ರಿ ನಿರ್ದೇಶಕ ಸಂಜಯ್ ಭಾರ್ಗವ ( Sanjay Bhargava) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತಿಚೆಗೆ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡುವ ಎಲಾನ್‌ ಮಸ್ಕ್‌ (Elon Musk) ಒಡೆತನದ ಸ್ಟಾರ್‌ ಲಿಂಕ್‌ (Starlink) ಕಂಪನಿ ಭಾರತೀಯರಿಂದ ಪಡೆದುಕೊಂಡಿದ್ದ ಮುಂಗಡ ಹಣವನ್ನು ಮರು ಪಾವತಿ ಮಾಡುವುದಾಗಿ ಹೇಳಿತ್ತು.ಈ ಯೋಜನೆಗೆ ಪರವಾನಗಿ ಸಿಗುವ ಮೊದಲೇ ಸ್ಟಾರ್‌ ಲಿಂಕ್‌ ಜನರಿಂದ ಮುಂಗಡವಾಗಿ ಹಣ ವಸೂಲಿ ಮಾಡಿತ್ತು. ಹಾಗಾಗಿ ಮರುಪಾವತಿ ಮಾಡುವಂತೆ ಭಾರತೀಯ ಟೆಲಿಕಾಂ ಸಂಸ್ಥೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಸಂಜಯ್ ಭಾರ್ಗವ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. 

 "ನಾನು ವೈಯಕ್ತಿಕ ಕಾರಣಗಳಿಗಾಗಿ ಸ್ಟಾರ್‌ಲಿಂಕ್ ಇಂಡಿಯಾದ ದೇಶದ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದೇನೆ. ನನ್ನ ಕೊನೆಯ ಕೆಲಸದ ದಿನ ಡಿಸೆಂಬರ್ 31, 2021." ಎಂದು ಮಂಗಳವಾರ ಸಂಜೆ ಲಿಂಕ್ಡ್‌ಇನ್ (LinkedIn) ಪೋಸ್ಟ್‌ನಲ್ಲಿ ಭಾರ್ಗವ  ಹೇಳಿದ್ದಾರೆ. ನವೆಂಬರ್‌ನಲ್ಲಿ, ಟೆಲಿಕಾಂ ಇಲಾಖೆಯು ಸ್ಟಾರ್‌ಲಿಂಕ್‌ಗೆ ಉಪಗ್ರಹ ಆಧಾರಿತ ಸಂವಹನ ಸೇವೆಗಳನ್ನು ನೀಡಲು ನಿಯಮಗಳನ್ನು ಅನುಸರಿಸಲು ಮತ್ತು "ತಕ್ಷಣದಿಂದ ಜಾರಿಗೆ ಬರುವಂತೆ" ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಬುಕಿಂಗ್/ರೆಂಡರ್ ಮಾಡುವುದನ್ನು ತಡೆಯಲು ಕೇಳಿಕೊಂಡಿತ್ತು.

Tap to resize

Latest Videos

undefined

ಮರುಪಾವತಿ ಮಾಡುವುದಾಗಿ ಸ್ಟಾರ್‌ಲಿಂಕ್‌ ಇ-ಮೇಲ್‌ 

ಈ ಹಿನ್ನೆಲೆಯಲ್ಲಿ ಮುಂಗಡ ಪಾವತಿಸಿದವರಿಗೆ ಹಣ ಮರುಪಾವತಿ (Refund) ಮಾಡುವುದಾಗಿ ಸ್ಟಾರ್‌ಲಿಂಕ್‌ ಇ-ಮೇಲ್‌ (E-mail) ಮಾಡುತ್ತಿದೆ. ಭಾರತದಲ್ಲಿ ಪರವಾನಗಿ ಸಿಕ್ಕಿಲ್ಲ ಮತ್ತು ಹಲವಾರು ತಾಂತ್ರಿಕ ಕಾರಣಗಳಿಂದ ಹಣ ಮರುಪಾವತಿ ಮಾಡುತ್ತಿದ್ದೇವೆ. ಶೀಘ್ರವೇ ಭಾರತದಲ್ಲಿ ಪರವಾನಗಿ ಪಡೆದು ಯೋಜನೆ ಆರಂಭಿಸುತ್ತೇವೆ ಎಂದು ಕಂಪನಿ ಇ-ಮೇಲ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: Elon Musk Starlinkಗೆ ಕೇಂದ್ರ ಸರ್ಕಾರ ಚಾಟಿ: ಪ್ರಿ ಆರ್ಡರ್‌ ಹಣ ವಾಪಸ್ ನೀಡಲಿರುವ ಕಂಪನಿ !

ಭಾರತದಲ್ಲಿ ಸ್ಟಾರ್‌ ಲಿಂಕ್‌ ಇಂಟರ್‌ನೆಟ್‌ ಸೇವೆ ಆರಂಭಿಸಲು ಅಗತ್ಯವಿರುವ ವಾಣಿಜ್ಯ ಪರವಾನಗಿಗೆ ಜ.31ರೊಳಗೆ ಅರ್ಜಿ ಸಲ್ಲಿಸುವುದಾಗಿ ಕಂಪನಿ ಈ ಹಿಂದೆ ಹೇಳಿತ್ತು. ಭಾರತದಲ್ಲಿ ಈ ಯೋಜನೆಗೆ ಅನುಮತಿ ಪಡೆದುಕೊಂಡು ಆರಂಭಿಸುತ್ತೇವೆ. 2022ರ ಅಂತ್ಯದ ವೇಳೆಗೆ 2 ಲಕ್ಷ ಸ್ಟಾರ್‌ಲಿಂಕ್‌ ಡಿವೈಸ್‌ಗಳನ್ನು ಭಾರತದಲ್ಲಿ ಅಳವಡಿಸುವ ಗುರಿ ಹೊಂದಿದ್ದೇವೆ ಎಂದು ಕಂಪನಿಯ ಭಾರತೀಯ ಅಧಿಕಾರಿ ಸಂಜಯ್‌ ಭಾರ್ಗವ ಹೇಳಿದ್ದಾರೆ. ಕಂಪನಿಯು ಭಾರತದಲ್ಲಿ ಹತ್ತು ಗ್ರಾಮೀಣ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ ಎಂದು ಹೇಳಲಾಗಿತ್ತು. ಭಾರತವನ್ನು ಸ್ಟಾರ್‌ಲಿಂಕ್ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದೆಂದು ಪರಿಗಣಿಸಿದೆ.

ವೇಗದ ಇಂಟರ್ನೆಟ್ ಸಂಪರ್ಕದ ಭರವಸೆ!

ಸ್ಟಾರ್‌ಲಿಂಕ್ ಕಂಪನಿಯು ಅನೇಕ ದೇಶಗಳಲ್ಲಿ ವೇಗದ ಇಂಟರ್ನೆಟ್ (Fast Internet) ಸಂಪರ್ಕದ ಸೌಲಭ್ಯವನ್ನು ಒದಗಿಸುತ್ತದೆ. ಅದೇ ಸಮಯದಲ್ಲಿ, ಕಂಪನಿಯು ಭಾರತದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಸ್ಟಾರ್‌ಲಿಂಕ್ ಉಪಗ್ರಹವು ಲೋ ಅರ್ಥ್‌ ಆರ್ಬಿಟ್‌ ನೆಟ್‌ವರ್ಕ್‌ (Low Earth Orbit Network) ಒದಗಿಸಲಿದ್ದು ಇದು ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಕಂಪನಿಯು ತನ್ನ ಇಂಟರ್ನೆಟ್ ಸೇವೆಗಳು ಅತ್ಯುತ್ತಮ ಮತ್ತು ವೇಗವಾಗಿರುತ್ತದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

ಭಾರತದಲ್ಲಿ 200,000 ಸ್ಟಾರ್‌ಲಿಂಕ್ ಸಾಧನಗಳು

ಡಿಸೆಂಬರ್‌ನಲ್ಲಿ, ಸ್ಟಾರ್‌ಲಿಂಕ್ ಕಂಟ್ರಿ ಡೈರೆಕ್ಟರ್ ಸಂಜಯ್ ಭಾರ್ಗವ (Sanjay Bhargava) ಕಂಪನಿಯು ಜನವರಿ 31 ಅಥವಾ ಅದಕ್ಕಿಂತ ಮೊದಲು ವಾಣಿಜ್ಯ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಆಶಿಸುತ್ತಿದೆ ಎಂದು ಹೇಳಿದ್ದಾರೆ. ಭಾರ್ಗವ ಅವರು ತಳಿಸಿದ ಪ್ರಕಾರ ಕಂಪನಿಯು ಡಿಸೆಂಬರ್ 2022 ರ ವೇಳೆಗೆ ಭಾರತದಲ್ಲಿ 200,000 ಸ್ಟಾರ್‌ಲಿಂಕ್ ಸಾಧನಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. 

click me!