HMD Global at CES 2022: Nokia C100, C200 ಮತ್ತು Nokia G100, G400 ಬಜೆಟ್ ಫೋನ್‌ಗಳು ಬಿಡುಗಡೆ!

By Suvarna News  |  First Published Jan 5, 2022, 12:13 AM IST

HMD ಗ್ಲೋಬಲ್‌ನ ಪೋರ್ಟ್‌ಫೋಲಿಯೊಗೆ ನಾಲ್ಕು ಹೊಸ ನೋಕಿಯಾ ಫೋನ್‌ಗಳನ್ನು ಸೇರಿಸಲಾಗಿದೆ. ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯೊಂದಿಗೆ ಫೋನ್‌ಗಳು ಕೈಗೆಟುಕುವ ಬೆಲೆಯಲ್ಲಿ ಸಿಗಲಿವೆ.


Tech Desk: HMD ಗ್ಲೋಬಲ್ ನಾಲ್ಕು ಹೊಸ  ನೋಕಿಯಾ ಫೋನ್‌ಗಳನ್ನು ಕಸ್ಟಮರ್ ಎಲೆಕ್ಟ್ರಾನಿಕ್ಸ್ ಶೋ (CES) 2022 ರಲ್ಲಿ ಅನಾವರಣಗೊಳಿಸಿದೆ. ಸಿಇಎಸ್‌ 2022 ಜನವರಿ 5 ರಂದು ಪ್ರಾರಂಭವಾಗುವ ಮೊದಲು ಟೆಕ್ ದೈತ್ಯರಿಂದ ಹಲವಾರು ಪ್ರಮುಖ ಪ್ರಕಟಣೆಗಳಿಗ ಸಾಕ್ಷಿಯಾಗಿದೆ. ಹೊಸ Nokia ಫೋನ್‌ಗಳು ಕಂಪನಿಯ ಬಜೆಟ್ ಶ್ರೇಣಿಯ ಭಾಗವಾಗಿದ್ದು ನಾಲ್ಕು ಫೋನ್‌ಗಳ ಬೆಲೆಯು  $250 ಅಥವಾ ಸುಮಾರು 18,600 ರೂ. ಗಿಂತ ಕಡಿಮೆ ಇದೆ. ಎಚ್‌ಎಮ್‌ಡಿ ಗ್ಲೋಬಲ್‌ನ ಎರಡು ಹೊಸ ಫೋನ್‌ಗಳು ಹೊಸ ನೋಕಿಯಾ C-ಸರಣಿಗೆ ಸೇರಿದ್ದ ಇತರ ಎರಡು Nokia G-ಸರಣಿಯ ಭಾಗವಾಗಿವೆ. ಇವುಗಳನ್ನು  Nokia C100, Nokia C200, Nokia G100, ಮತ್ತು Nokia G400 ಎಂದು ಹೆಸರಿಸಲಾಗಿದೆ . ಫೋನ್‌ಗಳು ಯುನೈಟೆಡ್ ಸ್ಟೇಟ್ಸ್‌ನ ಹೊರತುಪಡಿಸಿ ಜಾಗತಿಕ ಮಾರುಕಟ್ಟೆಯ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 

Nokia C100, Nokia C200 price and specifications

Tap to resize

Latest Videos

undefined

Nokia C100 ಮತ್ತು Nokia C200 ಎರಡೂ MediaTek Helio A22 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಎರಡು Nokia C ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ Nokia C200 ದೊಡ್ಡ 6.1-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹೆಚ್ಚು ಕಡಿಮೆ ಒಂದೇ ರೀತಿಯ ಬೆಲೆ ಟ್ಯಾಗ್‌ಗಳಿಂದ ಫೋನ್‌ಗಳ ಉಳಿದ ವಿವರಗಳು ಬಹುಮಟ್ಟಿಗೆ ಒಂದೇ ಆಗಿರಲಿವೆ. 

ಇದನ್ನೂ ಓದಿRs.47,000 ಬೆಲೆಯ ಮಿಲಿಟರಿ ದರ್ಜೆಯ Nokia XR20 ಫೋನ್ ಭಾರತದಲ್ಲಿ ಬಿಡುಗಡೆ!

Nokia C100 ಮತ್ತು C200 3GB RAM ಮತ್ತು 32GB ಸಂಗ್ರಹಣೆಯೊಂದಿಗೆ ಬರುತ್ತದೆ. C ಸರಣಿಯೂ Android 12 ಮೇಲೆ ರನ್ ಅಗುತ್ತವೆ ಮತ್ತು 4000mAh ಬ್ಯಾಟರಿ ಹೊಂದಿವೆ. ಹಿಂಭಾಗದಲ್ಲಿ ಸಿಂಗಲ್ ಲೆನ್ಸ್ ಕ್ಯಾಮೆರಾ ಸೆಟಪ್ ಇದೆ. Nokia C100 ಬೆಲೆ $99, ಅಥವಾ ಸುಮಾರು ರೂ.7,400, ಆದರೆ Nokia C200 $119 ಅಥವಾ ಸುಮಾರು ರೂ.9,000 ಆಗಿದೆ.

Nokia G100, Nokia G400 price and specifications

ನೋಕಿಯಾದಿಂದ G-ಸರಣಿಯ ಫೋನ್‌ಗಳಿಗೆ ಸಂಬಂಧಿಸಿದಂತೆ, Nokia G100 HD+ ರೆಸಲ್ಯೂಶನ್‌ನೊಂದಿಗೆ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು Qualcomm Snapdragon 615 ಚಿಪ್‌ಸೆಟ್‌ನೊಂದಿಗೆ ಬರುತ್ತದೆ ಮತ್ತು ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. 5,000 mAh ಬ್ಯಾಟರಿಯನ್ನು ಫೋನ್ ಬೆಂಬಲಿಸುತ್ತದೆ. ಫೋನ್‌ನ ಪವರ್ ಬಟನ್‌ನಲ್ಲಿಯೇ ಎಂಬೆಡ್ ಮಾಡಲಾದ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ.

ಇದನ್ನೂ ಓದಿ: Samsung Big TV Festival 2022: ಸ್ಮಾರ್ಟ್ ಟಿವಿ ಖರೀದಿ ಮೇಲೆ ₹95 ಸಾವಿರದ ಸೌಂಡ್‌ಬಾರ್ ಫ್ರಿ!

ಮತ್ತೊಂದೆಡೆ, Nokia G400, ಸೆಲ್ಫಿ ಕ್ಯಾಮೆರಾಕ್ಕಾಗಿ ವಾಟರ್‌ಡ್ರಾಪ್ ನಾಚ್ ಅನ್ನು ಹೊಂದಿರುವ 120Hz ಡಿಸ್‌ಪ್ಲೇಯನ್ನು ಹೊಂದಿರುತ್ತದೆ, ಆದರೂ ಇದರ ಡಿಸ್ಪ್ಲೇ ಗಾತ್ರವು ಇನ್ನೂ ಬಹಿರಂಗಗೊಂಡಿಲ್ಲ. ಈ ಫೋನ್ ಸ್ನಾಪ್‌ಡ್ರಾಗನ್ 480 5G ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಜೊತೆಗೆ 6GB RAM ಜೊತೆಗೆ 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಫೋನ್ 5G ನೆಟವರ್ಕಗೆ ಸಪೋರ್‌ ಕೂಡ ಮಾಡುತ್ತದೆ. ಹಾಗಾಗಿ ಇದು ಇದೀಗ HMD ಗ್ಲೋಬಲ್‌ನ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿ ಬರಲಿದೆ.

ಹಿಂಭಾಗದಲ್ಲಿ, Nokia G400 ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, 48-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, ಅಲ್ಟ್ರಾವೈಡ್ ಲೆನ್ಸ್ ಮತ್ತು ಮ್ಯಾಕ್ರೋ ಸೆನ್ಸರ್‌ ಹೊಂದಿದೆ. Nokia G100 ಬೆಲೆ $149 ಅಥವಾ ಸುಮಾರು ರೂ 11,000 ಆಗಿದ್ದರೆ, Nokia G400 ಬೆಲೆ $239 ಅಥವಾ ಸುಮಾರು 18,000 ರೂ. ಆಗಿದೆ. ಇವುಗಳನ್ನು ಹೊರತುಪಡಿಸಿ, ಕಂಪನಿಯು ನೋಕಿಯಾ 2760 ಫ್ಲಿಪ್ ಹೆಸರಿನ ಫ್ಲಿಪ್ ಫೋನ್ ಅನ್ನು ಸಹ ಬಹಿರಂಗಪಡಿಸಿದೆ. ಈ ಫೋನ್‌ಗಳು ಜಾಗತಿಕ ಮಾರುಕಟ್ಟೆಗಳಿಗೆ ಯಾವಾಗ ಬಿಡುಗಡೆಯಾಗಲಿವೆ  ಎಂಬುದನ್ನು ಕಾದು ನೋಡಬೇಕಾಗಿದೆ

click me!