ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ: ರಾಜೀವ್ ಚಂದ್ರಶೇಖರ್

By Suvarna News  |  First Published May 31, 2020, 3:45 PM IST

ಸೋಶಿಯಲ್ ಮೀಡಿಯಾ ಕಂಪನಿ ಬಳಸುತ್ತಿರುವ ಅಲ್ಗಾರಿದಂ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಗರಂ| ದಿಗ್ಗಜ ಕಂಪನಿಗಳು ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ| ಈ ನಿಯಮಗಳಿಂದ ಚುನಾವಣೆ ಮಾತ್ರವಲ್ಲ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ


ಬೆಂಗಳೂರು(ಮೇ.31): ಸೋಶಿಯಲ್ ಮೀಡಿಯಾ ಕಂಪನಿಗಳು ಜನರ ಅಭಿವ್ಯಕ್ತಿ ಸ್ವಾತಂತ್ಯ್ರ ಕಸಿದುಕೊಳ್ಳುವ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಹಾಗೂ ಫೇಸ್‌ಬುಕ್‌ನಂತಹ ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಥರ್ಡ್‌ ಪಾರ್ಟಿ ಬಳಕೆದಾರರ ಕಾರಣ ಕೊಟ್ಟು ಪಡೆಯುತ್ತಿರುವ ಸಂರಕ್ಷಣೆಯನ್ನು ಅಂತ್ಯಗೊಳಿಸುವ ಕುರಿತು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಇದರಿಂದ ಮತ್ತೊಂದು ಬಾರಿ ಸೋಶಿಯಲ್ ಮೀಡಿಯಾ ಕಂಪನಿಗಳು ಅವುಗಳು ತಮಗಿಷ್ಟ ಬಂದಂತೆ ತಮ್ಮ ಪ್ಲಾಟ್‌ಫಾರಂನಲ್ಲಿ ಕಂಟೆಂಟ್ ಫಿಲ್ಟರ್ ಅಥವಾ ಪ್ರಚಾರ ಮಾಡುವ  ಸಿದ್ಧಾಂತ ಹಾಗೂ ನಿಯಮಗಳ ಮೇಲೆ ಜನರು ಚಿತ್ತ ಹರಿಸುವಂತೆ ಮಾಡಿದೆ ಎಂದಿದ್ದಾರೆ.

ಸಂಸದ ರಾಜೀವ್ ಚಂದ್ರಶೇಖರ್​ಗೆ ಜನ್ಮದಿನದ ಶುಭಾಶಯ ಕೋರಿದ ಸಿಎಂ!

Tap to resize

Latest Videos

ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್ ಈ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ಅಲ್ಗಾರಿದಂ ಬಳಸುವ ನೆಪದಲ್ಲಿ ದೀರ್ಘ ಸಮಯದವರೆಗೆ ತನಿಖೆಯಿಂದ ನುಣುಚಿಕೊಳ್ಳುತ್ತವೆ. ಆದರೆ ಇವುಗಳನ್ನು ತನಿಖೆಗೊಳಪಡಿಸಬೇಕು. ಯಾಕೆಂದರೆ ಇವುಗಳ ಅಲ್ಗಾರಿದಂ ಸಂವಿಧಾನ ನೀಡಿರುವ ಮೂಲಭೂತ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿವೆ ಎಂದಿದ್ದಾರೆ.

ಅಲ್ಗಾರಿದಂನಿಂದ ಮೂಲಭೂತ ಹಕ್ಕುಗಳ ನಾಶ

ಯಾವ ರೀತಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ನಮ್ಮನ್ನು ತಡೆಯುತ್ತಿವೆಯೋ ಅದು ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ಟ್ವಿಟರ್‌ನಲ್ಲಿ, ನಮ್ಮ ಭಾರತೀಯ ಸಂವಿಧಾನ ಮಾತನಾಡುವ ಹಕ್ಕನ್ನು ಮೂಲಭೂತ ಹಕ್ಕಾಗಿ ನೀಡಿದೆ. ಇದು ಕೇವಲ ವಿಶೇಷ ಸಮಯದಲ್ಲಷ್ಟೇ ಅಂದರೆ ಆರ್ಟಿಕಲ್ 19(2) ಅಡಿಯಲ್ಲಷ್ಟೇ ಪ್ರತಿಬಂಧಿಸಬಹುದಾಗಿದೆ. ಆದರೀಗ ಸೋಶಿಯಲ್ ಮೀಡಿಯಾ ರೂಪಿಸಿರುವ ಅಲ್ಗಾರಿದಂ ಅನ್ವಯ ಯಾವುದೇ ಸಂದೇಶವನ್ನು ಅತಿ ಹೆಚ್ಚು ಪ್ರಚಾರ ಮಾಡಬಹುದು, ಇಲ್ಲವೇ ಒಬ್ನ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು ಎಂದಿದ್ದಾರೆ.

ಕಂಟೆಂಟ್‌ನಲ್ಲಿ ಸೋಶಿಯಲ್ ಮೀಮಿಡಿಯಾ ಕಂಪನಿಗಳ ಪಾತ್ರ

ಈಟಿವಿ ಭಾರತ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್ ಇದೊಂದು ತನ್ನಷ್ಟಕ್ಕೇ ಹುಟ್ಟಿಕೊಂಡ ಸಮಸ್ಯೆಯಲ್ಲ, ಆದರೆ ಅಲ್ಗಾರಿದಂ ಅಂದ್ರೆ ಏನು? ಇದನ್ನು ರೂಪಿಸಿದವರು ಯಾರು? ಸದ್ಯ ಅಲ್ಗಾರಿದಂ ರೂಪಿಸಿದವರು ಉತ್ತರಿಸಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.

ಮೋದಿ 2.0: ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕ!

ರಾಜೀವ್ ಚಂದ್ರಶೇಖರ್ ಈ ಮೊದಲು ಕೂಡಾ ಸೋಶಿಯಲ್ ಮೀಡಿಯಾ ಕಂಪನಿಗಳ ಸಿದ್ಧಾಂತಗಳಲ್ಲಿರುವ ಪಾರದರ್ಶಕತೆ ಕುರಿತು ಧ್ವನಿ ಎತ್ತಿದ್ದಾರೆ. ಅಲ್ಲದೇ ಸಂದೇಶವೊಂದನ್ನು ತಡೆಹಿಡಿಯುವ ಅಥವಾ ಪ್ರಸಾರ ಮಾಡುವ ನಿರ್ಧಾರ ಸೋಶಿಯಲ್ ಮೀಡಿಯಾ ಕಂಪನಿ ಮಾಡದೇ, ಸಾಫ್ಟ್‌ವೇರ್ ಮಾಡುವ ನಿಯಮವನ್ನು ಅವರು ಕಟುವಾಗಿ ವಿರೋಧಿಸಿದ್ದಾರೆ. 

ಅಲ್ಗಾರಿದಂ ಮಾಡುವವರು ಪೂರ್ವಾಗ್ರಹ ಪೀಡಿತರಾಗಿರಬಹುದು

ನಾವಿದನ್ನು ಮಾಡುತ್ತಿಲ್ಲ ಎಂಬುವುದು ಸೂಕ್ತ ಕಾರಣವಲ್ಲ. ಇದರ ಹಿಂದೆ ಅಲ್ಗಾರಿದಂ ಇದೆ. ಅದರಿಂದಲೇ ಎಲ್ಲವೂ ನಡೆಯುತ್ತದೆ. ಆದರೆ ಅಲ್ಗೋರಿತಂ ಮಾಡಿದ್ದು ಕೂಡಾ ಮನುಷ್ಯರೇ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಅಲ್ಗಾರಿದಂ ರೂಪಿಸಿದ ವ್ಯಕ್ತಿ ಪೂರ್ವಾಗ್ರಹಪೀಡಿತರಾಗಿದ್ದರೆ, ಅಲ್ಗಾರಿದಂ ಕೂಡಾ ಪೂರ್ವಾಗ್ರಹಪೀಡಿತವಾಗಿರುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಉದ್ಯಮದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಾಜೀವ್ ಚಂದ್ರಶೇಖರ್ 'ಸೋಶಿಯಲ್ ಮೀಡಿಯಾ ಹಾಗೂ ಇಂಟರ್ನೆಟ್‌ ಪ್ಲಾಟ್‌‌ಫಾರಂಗಳಾದ ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಲಿಂಕ್ಡಿನ್‌ನಂತಹ ಸಾಫ್ಟ್‌ವೇರ್ ಪ್ರೋಗ್ರಾಂ ತನಿಖೆ ನಡೆಸಲು ಭಾರತದಲ್ಲಿ ರೆಗುಲೇಟ್‌ಮಾಡುವ ಕೆಲಸ ನಿರ್ವಹಿಸುವವರು ಕ್ಷಮತೆ ಹೊಂದಿರಬೇಕು' ಎಂದಿದ್ದಾರೆ.

ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಮೂಲಕ ಬಳಸಲಾಗುವ ನಿಯಮ ಹಾಗೂ ಪ್ರೋಗ್ರಾಂ ಮಾಡುವ ಪಕ್ಷಪಾತ ಸಂಬಂಧ ಅಮೆರಿಕದಲ್ಲಿ ಸದ್ಯ ಚರ್ಚೆಯೊಂದು ಆರಂಭವಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ಮಾಧ್ಯಮ ಸಂಘಟನೆಗಳು ಹಾಗೂ ಸೋಶಿಯಲ್ ಮೀಡಿಯಾ ಕಂಪನಿಗಳ ಮೇಲೆ ಸಾರ್ವಜನಿಕವಾಗಿ ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಆರೋಪ ಮಾಡಿದ್ದಾರೆ.

ಇವುಗಳು ಚುನಾವಣೆ ಮಾತ್ರವಲ್ಲ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ

ಸೋಶಿಯಲ್ ಮೀಡಿಯಾಗಳು ತನಿಖೆಯಿಂದ ಸಾಕಷ್ಟು ಮುಕ್ತವಾಗಿವೆ. ಜನರು ಇದನ್ನು ತಾಂತ್ರಿಕ ಆವಿಷ್ಕಾರ ಎಂದು ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಕೆಲ ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಿವೆ. ಇವುಗಳು ಕೇವಲ ಚುನಾವಣಾ ಫಲಿತಾಂಶ ಬದಲಾಯಿಸುವಲ್ಲಿ ಮಾತ್ರವಲ್ಲ, ಬದಲಾಗಿ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ. ಇವು ಬಹಳ ಶಕ್ತಿಶಾಲಿ ಎಂದು ಹೇಳಿದ್ದಾರೆ. 

ಹೀಗಾಗಿ ಭಾರತೀಯವಾಗಿರಲಿ ಅಥವಾ ವಿದೇಶೀ ಸೋಶಿಯಲ್ ಮೀಡಿಯಾಗಳಾಗಿರಲಿ ನಾವು ಈ ಪ್ಲಾಟ್‌ಫಾರಂಗಳ ಮೇಲೆ ನಾವು ನಮ್ಮದೇ ಆದ ನಿಗಾ ವಹಿಸಬೇಕು. ಇವುಗಳು ಯಾವುದಾದರೂ ಕುಕೃತ್ಯದಲ್ಲಿ  ಭಾಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಗಾ ವಹಿಸುವುದು ಅಗತ್ಯ ಎಂದಿದ್ದಾರೆ.

click me!