ಇಂಟರ್ನೆಟ್ ಮೂಲಭೂತ ಹಕ್ಕು, ಬಡವರಿಗೆ ಉಚಿತ!| 1500 ಕೋಟಿ ರು. ವೆಚ್ಚದಲ್ಲಿ ‘ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್’ ಎಂಬ ಯೋಜನೆಯನ್ನು ಜಾರಿ
ತಿರುವನಂತಪುರಂ(ಮೇ.31): ಬಡವರಿಗೆ ಉಚಿತವಾಗಿ ಇಂಟರ್ನೆಟ್ ನೀಡಲು ಕೇರಳ ಸರ್ಕಾರ 1500 ಕೋಟಿ ರು. ವೆಚ್ಚದಲ್ಲಿ ‘ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್’ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ.
ಡಿಸೆಂಬರ್‌ನಿಂದ ಈ ಯೋಜನೆ ಜಾರಿಯಾಗಲಿದೆ. ಇಂಟರ್ನೆಟ್ ಅನ್ನು ನಾಗರಿಕರ ಮೂಲಭೂತ ಹಕ್ಕು ಎಂದು ಘೋಷಿಸಿರುವ ಕೇರಳ, ಬಡವರಿಗೆ ಉಚಿತವಾಗಿ ಹಾಗೂ ಇತರರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದೇಶದ ಯಾವುದೇ ರಾಜ್ಯ ಕೂಡ ಇಂತಹ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ತಿಳಿಸಿದೆ.
Fact Check: ಸಮ ಬೆಸ ಸಂಖ್ಯೆಯಲ್ಲಿ ಸ್ಕೂಲ್ ತೆರೆಯಲು ರಾಹುಲ್ ಸಲಹೆ!
ಲಾಕ್‌ಡೌನ್‌ನಿಂದ ವಿಳಂಬವಾಗಿದ್ದರೂ, ಡಿಸೆಂಬರ್‌ನೊಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಅನುಷ್ಠಾನ ಹೊಣೆ ಹೊತ್ತಿರುವ ಬಿಇಎಲ್ ತಿಳಿಸಿದೆ.