ಆನ್`ಲೈನ್`ನಲ್ಲಿ ಬುಕ್ ಮಾಡಿ ಮನೆಗೇ ತರಿಸಿಕೊಳ್ಳಿ ಕ್ಯಾಶ್

Published : Dec 22, 2016, 04:33 AM ISTUpdated : Apr 11, 2018, 12:55 PM IST
ಆನ್`ಲೈನ್`ನಲ್ಲಿ ಬುಕ್ ಮಾಡಿ ಮನೆಗೇ ತರಿಸಿಕೊಳ್ಳಿ ಕ್ಯಾಶ್

ಸಾರಾಂಶ

ಮನೆಗೇ ಕ್ಯಾಶ್ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ತಮ್ಮ ಮೊಬೈಲಿನಲ್ಲಿ ಸ್ನ್ಯಾಪ್ ಡೀಲ್ ಆಪ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಲೊಕೇಶನ್ ಡೇಟಾ ಮೂಲಕ ನಿಮ್ಮ ಏರಿಯಾದಲ್ಲಿ ಹಣ ಲಭ್ಯತೆ ಬಗ್ಗೆ ಆಪ್ ಮಾಹಿತಿ ಕಲೆ ಹಾಕುತ್ತದೆ. ಬಳಿಕ ನಿಮಗೆ ಪುಶ್ ನೋಟಿಫಿಕೇಶನ್ ಮತ್ತು ಎಸ್ಎಂಎಸ್ ನೋಟಿಫಿಕೇಶನ್ ಬರಲಿದೆ. ಬಳಿಕ ಾರ್ಡರ್ ಪೇಜ್ ಡಿಸ್ಪ್ಲೇ ಆಗುತ್ತೆ.

ಬೆಂಗಳೂರು(ಡಿ22): ಆನ್`ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್ ಡೀಲ್, ಹಣಕ್ಕಾಗಿ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ನಿಂತು ನಿಂತು ಬೇಸರಗೊಂಡಿರುವ ಜನರಿಗೆ 2000 ರೂಪಾಯಿಯ ನೋಟುಗಳನ್ನ ಕ್ಯಾಶ್ ಡೆಲಿವರಿ ಮಾಡುವ Cash@Home ಎಂಬ ಹೊಸ ವ್ಯವಸ್ಥೆಯನ್ನ ಕಲ್ಪಿಸಿದೆ.

ಕ್ಯಾಶ್ ಅಟ್ ಹೋಮ್ ಹೇಗೆ ಕೆಲಸ ಮಾಡುತ್ತೆ..?

ಮನೆಗೇ ಕ್ಯಾಶ್ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ತಮ್ಮ ಮೊಬೈಲಿನಲ್ಲಿ ಸ್ನ್ಯಾಪ್ ಡೀಲ್ ಆಪ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಲೊಕೇಶನ್ ಡೇಟಾ ಮೂಲಕ ನಿಮ್ಮ ಏರಿಯಾದಲ್ಲಿ ಹಣ ಲಭ್ಯತೆ ಬಗ್ಗೆ ಆಪ್ ಮಾಹಿತಿ ಕಲೆ ಹಾಕುತ್ತದೆ. ಬಳಿಕ ನಿಮಗೆ ಪುಶ್ ನೋಟಿಫಿಕೇಶನ್ ಮತ್ತು ಎಸ್ಎಂಎಸ್ ನೋಟಿಫಿಕೇಶನ್ ಬರಲಿದೆ. ಬಳಿಕ ಾರ್ಡರ್ ಪೇಜ್ ಡಿಸ್ಪ್ಲೇ ಆಗುತ್ತೆ.

ಈ ಸೇವೆಗಾಗಿ ನೀವು ಫ್ರೀಚಾರ್ಜ್ ಅಥವಾ ಡೆಬಿಟ್ ಕಾರ್ಡ್ ಮೂಲಕ 1 ರೂಪಾಯಿ ಶುಲ್ಕ ಪಾವತಿಸಬೇಕು. ಮರು ದಿನ ಸ್ನ್ಯಾಪ್ ಡೀಲ್ ಎಕ್ಸಿಕ್ಯೂಟಿವ್ಸ್ POS ಮೆಶಿನ್ ಜೊತೆಗೆ ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಕಾರ್ಡ್ ಅನ್ನ POS ಮೆಶಿನ್ನಿನಲ್ಲಿ ಸ್ವೈಪ್ ಮಾಡಿ 2000 ರೂ. ನೋಟು ಪಡೆಯಬಹುದು. ದಿನವೊಂದಕ್ಕೆ 2000 ರೂಪಾಯಿಯ ಒಂದು ನೋಟು ಪಡೆಯಬಹುದು.  ಸದ್ಯ, ಬೆಂಗಳೂರು ಮತ್ತು ಗುರುಗ್ರಾಮ್`ನಲ್ಲಿ ಮಾತ್ರ ಈ ಸೇವೆ ಆರಂಭಿಸಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?