ಅಂಬಾನಿಯ ನಿದ್ದೆಗೆಡಿಸಿದ Ideaದ ಈ ಹೊಸ 'ಐಡಿಯಾ'!: 1 ರೂಪಾಯಿಗೆ ಅನ್'ಲಿಮಿಟೆಡ್ 4ಜಿ ಇಂಟರ್ನೆಟ್

Published : Dec 19, 2016, 04:51 AM ISTUpdated : Apr 11, 2018, 12:51 PM IST
ಅಂಬಾನಿಯ ನಿದ್ದೆಗೆಡಿಸಿದ Ideaದ ಈ ಹೊಸ 'ಐಡಿಯಾ'!: 1 ರೂಪಾಯಿಗೆ ಅನ್'ಲಿಮಿಟೆಡ್ 4ಜಿ ಇಂಟರ್ನೆಟ್

ಸಾರಾಂಶ

ತನ್ನ ಹೊಸ ಆಫರ್ ಮೂಲಕ ಐಡಿಯಾ ತನ್ನ ಗ್ರಾಹಕರಿಗೆ ಒಂದು ರೂಪಾಯಿಗೆ ಅನ್'ಲಿಮಿಟೆಡ್ 4ಜಿ ಇಂಟರ್'ನೆಟ್ ನೀಡುತಯ್ತಿದೆ. ಸದ್ಯ ಈ ಆಫರ್ ಕೇವಲ ಒಂದು ಗಂಟೆಗೆ ಸೀಮಿತವಾಗಿದೆ. ಈ ಆಫರ್'ನ ಲಾಭ ಹಳೆಯ ಹಾಗೂ ಹೊಸ ಬಳಕೆದಾರರು ಪಡೆಯಬಹುದಾಗಿದೆ. ಈ ಆಫರ್'ನ್ನು ಬಳಸಿಕೊಳ್ಳಲು ಬಳಕೆದಾರರು 411 ನಂಬರ್'ಗೆ ಕರೆ ಮಾಡಬೇಕು. ಬಳಿಕ ಇಲ್ಲಿ ತಿಳಿಸುವ ಸೂಚನೆಗಳನ್ನು ಅನುಸರತಿಸಬೇಕು. ಆದರೆ ಕರೆ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್'ನಲ್ಲಿ 1 ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರಬೇಕು. ಈ ಆಫರ್ ಆ್ಯಕ್ಟಿವೇಟ್ ಆಗುತ್ತಿದ್ದಂತೆಯೇ ನಿಮ್ಮ ಬ್ಯಾಲೆನ್ಸ್'ನಲ್ಲಿ 1 ರೂಪಾಯಿ ಕಡಿತಗೊಳ್ಳುತ್ತದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ರಿಲಾಯನ್ಸ್ ಜಿಯೋ ಮಾತುಗಳು ಕೇಳಿ ಬರುತ್ತಿವೆ. ತನ್ನ ಅದ್ಭುತ ಆಫರ್'ನಿಂದ ದೇಶದಲ್ಲೇ ಸಂಚಲನ ಮೂಡಿಸಿದ್ದ ಜಿಯೋ ಇತರ ಟೆಲಿಕಾಂ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಕೆದಾರರು ಜಿಯೋ ಕಡೆ ಒಲವು ತೋರಿಸುವುದನ್ನು ಕಂಡ ಕಂಪೆನಿಗಳು ತಾವೂ ಆಕರ್ಷಕ ಆಫರ್'ಗಳನ್ನು ನೀಡಲಾರಂಭಿಸಿದವು. ಏರ್'ಟೆಲ್, ಏರ್'ಸೆಲ್, BSNL ಈಗಾಗಲೇ ಬಳಕೆದಾರರಿಗಾಗಿ ಆಕರ್ಷಕ ಆಫರ್'ಗಳನ್ನು ಪ್ರಸ್ತುತಪಡಿಸಿವೆ. ಇದೀಗ Idea ಕೂಡಾ ಈ ಸಾಲಿಗೆ ಸೇರಿಕೊಂಡಿದೆ. ಹೊಸ ಆಫರ್ ಒಂದನ್ನು ಗ್ರಾಹಕರಿಗಾಗಿ ತಂದಿದೆ. Idea ದ ಈ ಹೊಸ 'ಐಡಿಯಾ ಇತ್ತ ಗ್ರಾಹಕರಿಗೆ ಖುಷಿ ಕೊಟ್ಟರೆ ಅತ್ತ ಜಿಯೋಗೆ ಸ್ಪರ್ಧೆಯೊಡ್ಡಿದೆ.

ಏನು ಆ ಆಫರ್?

ತನ್ನ ಹೊಸ ಆಫರ್ ಮೂಲಕ ಐಡಿಯಾ ತನ್ನ ಗ್ರಾಹಕರಿಗೆ ಒಂದು ರೂಪಾಯಿಗೆ ಅನ್'ಲಿಮಿಟೆಡ್ 4ಜಿ ಇಂಟರ್'ನೆಟ್ ನೀಡುತಯ್ತಿದೆ. ಸದ್ಯ ಈ ಆಫರ್ ಕೇವಲ ಒಂದು ಗಂಟೆಗೆ ಸೀಮಿತವಾಗಿದೆ. ಈ ಆಫರ್'ನ ಲಾಭ ಹಳೆಯ ಹಾಗೂ ಹೊಸ ಬಳಕೆದಾರರು ಪಡೆಯಬಹುದಾಗಿದೆ. ಈ ಆಫರ್'ನ್ನು ಬಳಸಿಕೊಳ್ಳಲು ಬಳಕೆದಾರರು 411 ನಂಬರ್'ಗೆ ಕರೆ ಮಾಡಬೇಕು. ಬಳಿಕ ಇಲ್ಲಿ ತಿಳಿಸುವ ಸೂಚನೆಗಳನ್ನು ಅನುಸರತಿಸಬೇಕು. ಆದರೆ ಕರೆ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್'ನಲ್ಲಿ 1 ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರಬೇಕು. ಈ ಆಫರ್ ಆ್ಯಕ್ಟಿವೇಟ್ ಆಗುತ್ತಿದ್ದಂತೆಯೇ ನಿಮ್ಮ ಬ್ಯಾಲೆನ್ಸ್'ನಲ್ಲಿ 1 ರೂಪಾಯಿ ಕಡಿತಗೊಳ್ಳುತ್ತದೆ.

ಆದರೆ ಇದು ನೋಡಿದಷ್ಟು ಸರಳವಾದ ಆಫರ್ ಅಲ್ಲ. ಇದನ್ನು ಆ್ಯಕ್ಟಿವೇಟ್ ಮಾಡುವ ಮುನ್ನ ಕಂಪೆನಿಯ ಬಹುದೊಡ್ಡ ಶರತ್ತನ್ನು ಪಾಲಿಸಬೇಕಾಗುತ್ತದೆ. ಈ ಆಫರ್ ಈಗಿರುವ ಐಡಿಯಾ ಬಳಕೆದಾರರಿಗಷ್ಟೇ ಅನ್ವಯಿಸುತ್ತದೆ. ಇದರೊಂದಿಗೆ ಬಳಕೆದಾರರಲ್ಲಿ 4ಜಿ ಮೊಬೈಲ್ ಹಾಗೂ ಐಡಿಯಾದ 4ಜಿ ಸಿಮ್ ಇರುವುದು ಅಗತ್ಯ. ಅಲ್ಲದೆ ಈ ಒಂದು ಗಂಟೆಯ ಅವಕಾಶ ಕೇವಲ ಒಂದು ಬಾರಿಯಷ್ಟೇ ಬಳಸಲು ಸಾಧ್ಯ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?