
ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆಯಾದ Oneplus 7 Pro ಫೋನ್ ಹೇಗಿದೆ ಎಂಬುವುದನ್ನು ನೀವು ಓದಿದ್ದೀರಿ. ಅದರ ಜೊತೆಯಲ್ಲೇ Oneplus 7 ಕೂಡಾ ಬಿಡುಗಡೆಯಾಗಿದೆ.
ಬಹಳಷ್ಟು ವಿಚಾರದಲ್ಲಿ Oneplus 7 ಸ್ಮಾರ್ಟ್‌ಫೋನ್ Oneplus 7 Proನ ತದ್ರೂಪಿಯೆಂದೇ ಹೇಳಬಹುದು. ಆದರೆ Oneplus 7 Pro ನಲ್ಲಿರುವ ಪಾಪ್ ಅಪ್ ಕ್ಯಾಮೆರಾ, ಮತ್ತು ಹಿಂಬದಿಯಲ್ಲಿ 3 ಕ್ಯಾಮೆರಾ ಬದಲಿಗೆ 2 ಕ್ಯಾಮೆರಾಗಳಿವೆ.
ಅದೇ Qualcomm® Snapdragon™ 855 ಪ್ಲಾಟ್ ಫಾರ್ಮ್, ಯುಎಫ್‌ಎಸ್ 3.0, ಡಾಲ್ಬಿ ಅಟ್ಮೋಸ್ ಸ್ಟೀರಿಯೋ ಸ್ಪೀಕರ್‌ಗಳು, RAM ಬೂಸ್ಟ್, ಹೊಸ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನ, ಅಲ್ಟ್ರಾಶಾಟ್ ಇಂಜಿನ್ ಮತ್ತು ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದುವ ಮೂಲಕ Oneplus 7 ಅಷ್ಟೇ ಡಿಫರೆಂಟ್ ಆಗಿದೆ.
ಇದನ್ನೂ ಓದಿ | ಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ!
ಶಾರ್ಪರ್ ಮತ್ತು ಸ್ಪಷ್ಟ ಚಿತ್ರಗಳು
Oneplus 7 ಶಕ್ತಿಶಾಲಿ ಡ್ಯುಯೆಲ್-ಲೆನ್ಸ್ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅತ್ಯುತ್ತಮ ಫೋಟೋಗಳನ್ನು ತೆಗೆಯಲು ನೆರವಾಗಲಿದೆ. Oneplus 7 ವೈಶಿಷ್ಟ್ಯತೆಗಳಾದ ಸೋನಿಯ ಐಎಂಎಕ್ಸ್586, 48 ಮೆಗಾಪಿಕ್ಸೆಲ್, 1/2 ಇಂಚಿನ ಸೂಪರ್-ಗಾತ್ರದ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸಲ್ ಹೊಂದಿದ್ದು, ಒಟ್ಟಾರೆ ಕ್ಯಾಮೆರಾಗಳು ಹೊಸ ಅಲ್ಟ್ರಾಶಾಟ್ ಇಂಜಿನ್ ಅನ್ನು ಹೊಂದಿವೆ.
1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇರುವ 6.41 ಇಂಚಿನ (16.28 cm) ಪರದೆ, Android v9.0 (Pie) ಆಪರೇಟಿಂಗ್ ಸಿಸ್ಟಮ್, 6GB RAM ಮತ್ತು ಓಕ್ಟಾ ಕೋರ್ ಪ್ರೊಸೆಸರ್, 3700mAh ಬ್ಯಾಟರಿ ಈ ಫೋನ್ ನ ಇನ್ನಿತರ ವಿಶೇಷತೆಗಳು.
| Product | Configuration | Price | Availability (open sales) |
| OnePlus 7 Pro Almond | 8+ 256 GB | INR 52,999 | June |
| OnePlus 7 Mirror Gray | 6+128 GB, 8 + 256 GB | IINR 32,999, INR 37,999 | June |
| OnePlus 7 Red | 8+256 GB | INR 37,999 | June |
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.