ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಫೋನ್ ಯಾವುದು? ಎಷ್ಟು ಪೀಸ್?

Published : Jul 30, 2019, 06:59 PM IST
ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಫೋನ್ ಯಾವುದು? ಎಷ್ಟು ಪೀಸ್?

ಸಾರಾಂಶ

ಜೂನ್‌ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕ ಅವಧಿಯ ವರದಿ; ಮೊಬೈಲ್ ಮಾರುಕಟ್ಟೆ ಕೊಂಚ ಡೌನ್, ಆದರೆ ಆತಂಕ ಪಡಬೇಕಾಗಿಲ್ಲ; ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳದ್ದೇ ಪಾರುಪತ್ಯ! ಇಲ್ಲಿದೆ ವಿವರ   

ಬೆಂಗಳೂರು (ಜು.30): ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಕೊಂಚ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆಯ ವರದಿಯೊಂದು ಹೇಳಿದೆ.

2018ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್ -ಜೂನ್) 33.1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಶಿಪ್ಪಿಂಗ್ ಆಗಿದ್ದುವು. ಅದಕ್ಕೆ ಹೋಲಿಸಿದಾಗ, ಈ ಬಾರಿ ಅದೇ ಅವಧಿಯಲ್ಲಿ ಆ ಸಂಖ್ಯೆ 33 ಮಿಲಿಯನ್‌ಗೆ ಸೀಮಿತವಾಗಿದೆ, ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಕ್ಯಾನಲಿಸ್ ಹೇಳಿದೆ.

ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ನಲ್ಲಿ 0.5 ಶೇ. ಕುಸಿತ ಕಂಡುಬಂದಿದ್ದು, ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ಗಳನ್ನು ಅಪ್ಗ್ರೇಡ್ ಮಾಡಿಲ್ಲ ಎಂದಿದೆ.

ಇದನ್ನೂ ಓದಿ | ಒಂದು ಕೈ ನೋಡೇ ಬಿಡೋಣ... WhatsAppಗೆ ಸೆಡ್ಡುಹೊಡೆಯಲು BSNL ಹೊಸ ಪ್ರಯೋಗ!

ಅಧ್ಯಯನದ ಪ್ರಕಾರ ಚೀನಾದ ಮೊಬೈಲ್ ದ್ಯೆತ್ಯ ಶ್ಯೋಮಿ ಎಂದಿನಂತೆ ಮುಂಚೂಣಿಯಲ್ಲಿದೆ. ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ, ಶ್ಯೋಮಿಯು 10.3 ಮಿಲಿಯನ್ (31%) ಯೂನಿಟ್‌ಗಳನ್ನು ಶಿಪ್‌ಮೆಂಟ್ ಮಾಡಿದೆ. ಕಳೆದ 8 ತ್ರೈಮಾಸಿಕ ಅವಧಿಯಿಂದ ಶ್ಯೋಮಿ ಮುನ್ನಡೆ ಕಾಯ್ದುಕೊಂಡು ಬಂದಿರುವುದು ಇನ್ನೊಂದು ವಿಶೇಷ.

ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಎರಡನೇ ಸ್ಥಾನದಲ್ಲಿದ್ದು, 7.3 ಮಿಲಿಯನ್ (22%) ಯೂನಿಟ್‌ಗಳನ್ನು ಶಿಪ್ಪಿಂಗ್ ಮಾಡಿದೆ.

ಈ ಅವಧಿಯಲ್ಲಿ ವಿವೋ 5.8 ಮಿಲಿಯನ್ (18%) ಯೂನಿಟ್‌ಗಳನ್ನು ಶಿಪ್ಪಿಂಗ್ ಮಾಡಿದ್ದರೆ, ಒಪ್ಪೋ 3 ಮಿಲಿಯನ್ (9%), ಮತ್ತು ರಿಯಲ್‌ಮಿ 2.7 ಮಿಲಿಯನ್ (8%) ಮಾಡಿ 5ನೇ ಸ್ಥಾನದಲ್ಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ