ಅಡುಗೆ ಮಾಡುವಾಗ ಯಾವುದಾದರೂ ಪದಾರ್ಥ ತಳ ಹಿಡಿದರೆ ಹೊಗೆ ಮನೆ ತುಂಬಾ ಆವರಿಸಿಬಿಡುತ್ತೆ. ಹೊಗೆ ಹೊರ ಹೋಗಲು ಸಾಧ್ಯವಾಗದಂಥಾ ಸ್ಥಿತಿ ಅದು.
ಇದರಿಂದ ಹೊರಬರಲು ಪ್ರೆಸ್ಟೀಜ್ ಕಂಪನಿಯು ಮೋಷನ್ ಸೆನ್ಸಾರ್‌ನ ಹೊಸ ಸಾಧನವನ್ನು ಪರಿಚಯಿಸಿದೆ.
ಹೊಗೆ ತುಂಬಿದ ಅಡುಗೆ ಮನೆಯಲ್ಲಿ ಒಮ್ಮೆ ಕೈಯನ್ನು ಅತ್ತಿಂದಿತ್ತ ಚಲಿಸಿದರೆ ಸಾಕು. ಚಲನೆಯನ್ನು ಗ್ರಹಿಸಿ ತುಂಬಿದ್ದ ಹೊಗೆಯೆಲ್ಲಾ ಕ್ಲಿಯರ್ ಮಾಡುತ್ತೆ.
ಇದನ್ನೂ ಓದಿ: ಮಾರುಕಟ್ಟೆಗೆ ಡೈಕಿನ್‌ನ ಹೊಸ ಏರ್‌ಕಂಡೀಶನರ್
ಕೋನೀಯ ಹೀರುವಿಕೆ ತಂತ್ರಜ್ಞಾನ, ಪದಾರ್ಥಗಳ ಹೊಗೆ, ಹಬೆ, ಘಾಟುಗಳನ್ನು ನೇರವಾಗಿ ಹೊರಗೆ ಹಾಕುತ್ತೆ.
ಈ ಕಾರ್ಯಾಚರಣೆಗಾಗಿ ಇದರಲ್ಲಿ 1100ಎಂ3 ಸಾಮರ್ಥ್ಯದೊಂದಿಗೆ ಸ್ವಯಂಚಾಲಿತ ಶುದ್ಧೀಕರಣ ತಂತ್ರಜ್ಞಾನ, ಶಾಖ ನಿರೋಧಕ ಟ್ಯಾಂಪರ್ಡ್ ಗ್ಲಾಸ್, ಸದ್ದು ರಹಿತ ಕೆಲಸ ಮಾಡುವ ಉಪಕರಣ ಇದಾಗಿದೆ. ಜೀವಿತಾವಧಿ ವಾರಂಟಿ ಇದೆ.
ಆರಂಭಿಕ ಬೆಲೆ 31,995 ರು.