ಹೊಸ ವರ್ಷದಲ್ಲೂ Samsung ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಮುಂದಿನ ವಾರ ಕೈಗೆಟಕುವ 2 ಮೊಬೈಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು Samsung ಸಿದ್ಧತೆ ನಡೆಸಿದೆ.
Galaxy M ಸರಣಿಯ ಈ ಸ್ಮಾರ್ಟ್‌ಫೋನ್‌ಗಳು ಜ. 28ಕ್ಕೆ ಪದಾರ್ಪಣೆ ಮಾಡಲಿವೆ. ಈ ಫೋನ್ ಗಳು Samsung ಆನ್‌ಲೈನ್ ಶಾಪ್ ಮತ್ತು ಅಮೇಜಾನ್‌ನಲ್ಲಿ ಫೆ.05ರಿಂದ ಖರೀದಿಗೆ ಲಭ್ಯವಾಗಲಿವೆ.
ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!
Infinity-V ತಂತ್ರಜ್ಞಾನಾಧಾರಿತ ಪರದೆಯುಳ್ಳ ಈ ಹೊಸ ಸೀರಿಸ್ Galaxy M10 ಮತ್ತು Galaxy M20 ಫೋನ್‌ಗಳನ್ನು ಭಾರತದಲ್ಲಿ ಮೊತ್ತಮೊದಲು ಬಿಡುಗಡೆಮಾಡಲಾಗುತ್ತಿದೆ.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, Samsung ಹೊಸ ಸೀರಿಸ್ ಪೈಕಿ M20 ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದರೆ, M10 ಫೋನ್ 3500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ ಎಂದು ಹೇಳಲಾಗಿದೆ. M10 ಫೋನ್ 6.2 ಇಂಚಿನ HD+ (720x1520 pixels) ಪರದೆಯನ್ನು ಹೊಂದಿದೆ. ಈ ಫೋನ್ Octa-core Exynos ಪ್ರೊಸೆಸರ್ ಹೊಂದಿದ್ದು, 2GB ಅಥವಾ 3GB RAM ಹೊಂದಿದೆ.
ಅದಲ್ಲದೇ, ಫೋನ್ ಹಿಂಭಾಗದಲ್ಲಿ 13MP ಮತ್ತು 5MP ಇರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುವ Samsung Galaxy M10 ಫೋನ್, ಆ್ಯಂಡ್ರಾಯಿಡ್ 8.1 ಒರಿಯೋ OS ಹೊಂದಿದೆ. 7.7 mm ಇರುವ ಈ ಫೋನ್ ಬರೇ 160 ಗ್ರಾಂ ಭಾರವಿದೆ ಎಂಬ ಮಾಹಿತಿಯೂ ಸೋರಿಕೆಯಾಗಿದೆ.
ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್
ಅಂದ ಹಾಗೇ, ಬೆಲೆ ಎಷ್ಟೆಂದು ನೀವು ಯೋಚಿಸುತ್ತಿದ್ದೀರಾ? ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ Samsung Galaxy M10 ಬೆಲೆ ಬರೇ ₹7,990, Samsung Galaxy M20 ₹10,990 ಎಂದು ಅಂದಾಜಿಸಲಾಗಿದೆ.