ಸ್ಮಾರ್ಟ್ ಕನ್ನಡಕ, ಜಗತ್ತು ಬದಲಿಸುವ ಸಿದ್ಧತೆಯಲ್ಲಿ SAMSUNG; ಜನವರಿಯಲ್ಲಾಗಲಿದೆ ಅತಿದೊಡ್ಡ ಘೋಷಣೆ?

By Mahmad Rafik  |  First Published Dec 10, 2024, 2:12 PM IST

ಸ್ಯಾಮ್‌ಸಂಗ್ XR ಗ್ಲಾಸ್ ಎಂದು ಕರೆಯಲಾಗುವ ಸ್ಮಾರ್ಟ್ ಕನ್ನಡಕವನ್ನು ಜನವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. Galaxy S25 ಸರಣಿಯೊಂದಿಗೆ ಈ ಕನ್ನಡಕವನ್ನು ಬಿಡುಗಡೆ ಮಾಡಬಹುದು ಎಂದು ವರದಿಗಳು ಸೂಚಿಸುತ್ತಿವೆ. ಮೆಟಾ ಗ್ಲಾಸ್‌ಗಳ ಯಶಸ್ಸಿನ ನಂತರ ಸ್ಮಾರ್ಟ್ ಕನ್ನಡಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗುವ ನಿರೀಕ್ಷೆಯಿದೆ.


ನವದೆಹಲಿ: ಕಳೆದ ಕೆಲ ವರ್ಷಗಳಿಂದ  ಸ್ಯಾಮ್‌ಸಂಗ್ ಕಂಪನಿ  ವಿಶೇಷ  ತಂತ್ರಜ್ಞಾನ ಆಧರಿತ  ಕನ್ನಡಕ ಹೊರತರುವಲ್ಲಿ ನಿರತವಾಗಿದೆ ಎಂದು  ವರದಿಯಾಗುತ್ತಲೇ ಇದೆ. ಈ ಸಂಬಂಧ  ಸ್ಯಾಮ್‌ಸಂಗ್ ಅಂಗಳದಿಂದ ಹೊಸ  ನ್ಯೂಸ್ ಹೊರ ಬಂದಿದ್ದು, ಮಂದಿನ ವರ್ಷ ಜನವರಿಯಲ್ಲಿ ಸ್ಮಾರ್ಟ್‌  ಗ್ಲಾಸ್‌ಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಆದ್ರೆ ಈ ಬಗ್ಗೆ ಸ್ಯಾಮ್‌ಸಂಗ್  ಕಂಪನಿಯಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.  ಈ ಹೊಸ ಕನ್ನಡಕಗಳಿಗೆ Samsung XR Glass ಎಂದು ಕರೆಯಲಾಗುತ್ತೆ ಎಂದು ಹೇಳಲಾಗುತ್ತಿದೆ.

ಸ್ಯಾಮ್‌ಸಂಗ್ ಈ  ಸ್ಮಾರ್ಟ್‌ಗ್ಲಾಸ್‌ಗಳನ್ನು Samsung Galaxy S25 ಸರಣಿಯ ಸ್ಮಾರ್ಟ್‌ಫೋನ್ ಜೊತೆಯಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ. ಫೇಸ್‌ಬುಕ್  ಮೂಲ  ಕಂಪನಿಯ ಮೆಟಾ ಗ್ಲಾಸ್‌ಗಳ ಜನಪ್ರಿಯತೆ ಮಾರುಕಟ್ಟೆಯಲ್ಲಿ ಅಧಿಕವಾಗಿದೆ. ಹೀಗಾಗಿ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ ಕನ್ನಡಕಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಸ್ಮಾರ್ಟ್‌ ಕನ್ನಡಕಗಳ ಬೇಡಿಕೆ ಹೆಚ್ಚಿದೆ.

Tap to resize

Latest Videos

ಈ  ಹಿಂದೆ ಆಪಲ್ ವಿಷನ್ ಪ್ರೋ ಸಹ ಮಾರುಕಟ್ಟೆಗೆ ತನ್ನ ಸ್ಮಾರ್ಟ್‌ ಕನ್ನಡಕಗಳನ್ನು ಬಿಡುಗಡೆಗೊಳಿಸಿತ್ತು. ಆದ್ರೆ  ಮಾರುಕಟ್ಟೆಯಲ್ಲಿ  ನಿರೀಕ್ಷಿತ ಬೇಡಿಕೆ ಸಿಕ್ಕಿರಲಿಲ್ಲ. ಆದರೆ ಮೆಟಾ  ಗ್ಲಾಸ್‌ಗಳಿಗೆ ನಿರೀಕ್ಷೆಗಿಂತ ಹೆಚ್ಚು  ಬೇಡಿಕೆ  ಸೃಷ್ಟಿಯಾಯ್ತು. ಸದ್ಯ ಸ್ಮಾರ್ಟ್‌ ಗ್ಲಾಸ್‌ಗಳಲ್ಲಿ ಸ್ಪರ್ಧೆ ಕಡಿಮೆ ಇದ್ದು, ಈ ಅವಕಾಶದ  ಸದ್ಬಳಕೆಯನ್ನು ಮಾಡಿಕೊಳ್ಳಲು ಸ್ಯಾಮ್‌ಸಂಗ್ ಮುಂದಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಸ್ಯಾಮ್‌ಸಂಗ್ ಕಂಪನಿಯ ಸ್ಮಾರ್ಟ್‌ ಕನ್ನಡಕಗಳು ಸಂಪೂರ್ಣವಾಗಿ ಬಿಡುಗಡೆಗೆ ಸಿದ್ಧವಾಗಿಲ್ಲ. ಜನವರಿ-2025ರಲ್ಲಿ ಸ್ಯಾಮ್‌ಸಂಗ್ ಕಂಪನಿಯ ಬೃಹತ್ ದೊಡ್ಡ ಕಾರ್ಯಕ್ರಮವೊಂದು ನಡೆಯಲಿದೆ. ಈ  ಕಾರ್ಯಕ್ರಮದಲ್ಲಿ  ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಕನ್ನಡಕಗಳ ಘೋಷಣೆ ಮಾಡುವ ಸಾಧ್ಯತೆಗಳಿವೆ. ಇದೇ ವೇಳೆ Samsung XR Glass ಫೋಟೋಗಳು ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ದಿನವೇ  ಸ್ಮಾರ್ಟ್ ಕನ್ನಡಕದ ವೈಶಿಷ್ಟ್ಯತೆ ಮತ್ತು ಬೆಲೆ ಅಧಿಕೃತವಾಗಿ ಪ್ರಕಟವಾಗಲಿದೆ ಎನ್ನಲಾಗಿದೆ.

ಇದೇ ವರ್ಷ ಅಂದ್ರೆ ಜನವರಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಪರಿಚಯಿಸಿತ್ತು. ಈ ರಿಂಗ್ ಫೋಲ್ಸ್ ಮತ್ತು  ಫ್ಲಿಪ್‌ನೊಂದಿಗೆ  ವಿನ್ಯಾಸಗೊಳಿಸಲಾಗಿತ್ತು. ಇದೀಗ ಸ್ಯಾಮ್‌ಸಂಗ್ ಸ್ಮಾರ್ಟ್‌ ಗ್ಲಾಸ್‌ಗಳ ತಯಾರಿಕೆಯ ವಲಯಕ್ಕೆ ಕಾಲಿಟ್ಟಿದೆ. ಈ ಹಣಕಾಸಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಗ್ಲಾಸ್‌ಗಳ  ತಯಾರಿಕೆಯ ಕುರಿತ  ಮಹತ್ವದ  ನೀಡಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೆಡ್‌ಮಿಯ 200MP ಕ್ಯಾಮೆರಾ, 5000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ 8 ಸಾವಿರ ರೂಪಾಯಿ ಇಳಿಕೆ

ಜುಲೈನಲ್ಲಿ ಸ್ಮಾರ್ಟ್‌ಗ್ಲಾಸ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕನ್ನಡಕದ ತೂಕ  50ಗ್ರಾಂ ಹೊಂದಿರಲಿದೆ. ಕನ್ನಡಕದ ಗ್ಲಾಸ್ ಸಾಮಾನ್ಯ ಗಾಜಿನಂತೆ ಕಂಡರೂ,  AI ತಂತ್ರಜ್ಞಾನ ಒಳಗೊಂಡಿರಲಿದೆ ಎಂದು  ಊಹಿಸಲಾಗಿದೆ.

Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ ಗ್ಲಾಸ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ

click me!