ಹಾರುವ ಗುಟುಕು ನೀರನ್ನು ಹಾರಿಯೇ ಕುಡಿಯಬೇಕು: ಮಕ್ಕಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ತೋರಿಸಿರೋ ವಿಡಿಯೋ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧ್ಯನಯಕ್ಕೆ ಹೋಗಿರುವ ಖಗೋಳ ವಿಜ್ಞಾನಿ ಸುನಿತಾ ವಿಲಿಯಮ್ಸ್ ಕಳೆದ ಜೂನ್ 5ರಂದು ವಾಪಸಾಗಬೇಕಿತ್ತು. ಆದರೆ, ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ಅವರು ಮುಂದಿನ ವರ್ಷ ವಾಪಸಾಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ. ಆದರೆ ಇದುವರೆಗೂ ಅವರು ಬದುಕಿರುವುದೇ ಕಷ್ಟ ಎನ್ನುವ ಬಗ್ಗೆ ವಾದಗಳೂ ಹುಟ್ಟಿಕೊಂಡಿವೆ. ಇದರ ನಡುವೆಯೇ ಸುನೀತಾ, ಅವರ ಬಾಹ್ಯಾಕಾಶದ ಜೀವನದ ಒಂದೊಂದೇ ವಿಡಿಯೋಗಳು ವೈರಲ್ ಆಗುತ್ತಿವೆ. ಸುನಿತಾ ವಿಲಿಯಮ್ಸ್ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯೊಬ್ಬರು ಬಾಹ್ಯಾಕಾಶದಲ್ಲಿ ನೀರನ್ನು ಹೇಗೆ ಕುಡಿಯುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಸುನಿತಾ ಅವರ ಪ್ರದರ್ಶಿಸಿ ತೋರಿಸಿದ್ದಾರೆ.
ಮ್ಯಾಸಚೂಸೆಟ್ಸ್‌ನ ನೀಧಮ್‌ನಲ್ಲಿ ತಮ್ಮ ಹೆಸರಿನ ಸುನಿತಾ ವಿಲಿಯಮ್ಸ್ ಎಲಿಮೆಂಟರಿ ಸ್ಕೂಲ್ ಆಯೋಜಿಸಿದ್ದ ವರ್ಚುವಲ್ ಸೆಷನ್‌ನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ನಿನ್ನೆ ಅಂದ್ರೆ ಡಿಸೆಂಬರ್ 8 ರಂದು ನಡೆದ ಈ ಆಕರ್ಷಕವಾದ ಕಾರ್ಯಕ್ರಮದಲ್ಲಿ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿನ ಜೀವನದ ಅನನ್ಯ ಸವಾಲುಗಳು ಮತ್ತು ಗಗನಯಾತ್ರಿಗಳು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ಎದುರಿಸುವ ಸಂಕೀರ್ಣತೆಗಳಿಗೆ ಯುವ ಮನಸ್ಸುಗಳನ್ನು ಪರಿಚಯಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿತ್ತು. ಈ ಸಂದರ್ಭದಲ್ಲಿ, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದ್ರವವನ್ನು ಹೇಗೆ ಕುಡಿಯುತ್ತಾರೆ ಎಂಬುದನ್ನು ಸುನಿತಾ ಪ್ರದರ್ಶಿಸಿದಾಗ ಎಲ್ಲರೂ ಅಚ್ಚರಿಗೊಂಡರು.
ಬಾಹ್ಯಾಕಾಶದ ಜೀವನ ಹೇಗಿರುತ್ತೆ? ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸುನೀತಾ ವಿವರಿಸಿರೋ ವಿಡಿಯೋ ವೈರಲ್
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳು ಹಾರುತ್ತಲೇ ಇರುತ್ತವೆ. ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ, ನೀರು ಕೂಡ ಸುರಿಯುವುದಿಲ್ಲ, ಬದಲಿಗೆ ಹಾರುತ್ತವೆ. ಆದ್ದರಿಂದ ಒಂದು ಹನಿ ನೀರು ಕುಡಿಯಲು ಸಾಕಷ್ಟು ಸರ್ಕಸ್ ಮಾಡಬೇಕಾಗಿರುವ ಬಗ್ಗೆ ಸುನಿತಾ ವಿವರಿಸಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಚೀಲಗಳಲ್ಲಿ ಸ್ಟ್ರಾಗಳನ್ನು ಇರಿಸಿಕೊಳ್ಳಲಾಗುತ್ತದೆ. ಇದರನ್ನು ಅವರು ಸಿಪ್ ಮಾಡುತ್ತಾರೆ. ಅಷ್ಟರಲ್ಲಿಯೇ ನೀರಿನ ಬಿಂದು ಮೇಲಕ್ಕೆ ಹಾರಿ ಹೋಗುತ್ತದೆ. ಅದನ್ನು ಸುನಿತಾ ಅವರು ಹಾರಿ ಕುಡಿಯುವುದನ್ನು ತೋರಿಸಿದ್ದಾರೆ. ಬಾಹ್ಯಾಕಾಶದಲ್ಲಿನ ಸ್ಥಿತಿ ಹೇಗಿದೆ, ಅಲ್ಲಿ ಒಂದು ಕ್ಷಣವನ್ನೂ ಕಳೆಯುವುದು ಎಷ್ಟು ಕಷ್ಟ ಎಂಬ ಬಗ್ಗೆ ಇದನ್ನು ನೋಡಿದರೆ ತಿಳಿದುಬರುತ್ತದೆ. ಅಷ್ಟಕ್ಕೂ, ಭೂಮಿಯಿಂದ 254 ಮೈಲಿ ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಇವರು, ತಮ್ಮ ಮೂತ್ರ ಹಾಗೂ ಬೆವರನ್ನು ಸಂಸ್ಕರಣೆ ಮಾಡಿ ಅದರಿಂದ ನೀರನ್ನು ತೆಗೆದುಕೊಳ್ಳಲಾಗುತ್ತಿದೆ. ಅದೇ ನೀರಿನಿಂದ ಮಾಡಿದ ಸೂಪ್ ಸೇವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸುನಿತಾ ಅವರು ತಮ್ಮ 59ನೇ ಹುಟ್ಟುಹಬ್ಬವನ್ನು ಸೆಪ್ಟೆಂಬರ್ 19 ರಂದು ಬಾಹ್ಯಾಕಾಶದಲ್ಲಿಯೇ ಆಚರಿಸಿಕೊಂಡಿದ್ದರು. ಇವರ ಹಿನ್ನೆಲೆ ಹೇಳುವುದಾದರೆ, , 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಡಾ. ದೀಪಕ್ ಮತ್ತು ಬೋನಿ ಪಾಂಡ್ಯ ದಂಪತಿಗೆ ಜನಿಸಿದರು. ಅವರು ನೀಧಮ್ ಹೈಸ್ಕೂಲ್, ನೀಧಮ್, ಮ್ಯಾಸಚೂಸೆಟ್ಸ್, 1983 ರಲ್ಲಿ ವ್ಯಾಸಂಗ ಮಾಡಿದರು ಮತ್ತು 1987 ರಲ್ಲಿ ಅಮೆರಿಕದ ನೇವಲ್ ಅಕಾಡೆಮಿಯ ಭೌತಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪಡೆದರು. ಅವರು ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 1995 ರಲ್ಲಿ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದರು.
ಬಾಹ್ಯಾಕಾಶದಿಂದಲೇ ಸುನೀತಾ ವಿಲಿಯಮ್ಸ್- ಬುಚ್ ಸುದ್ದಿಗೋಷ್ಠಿ: ಅಲ್ಲಿಂದಲೇ ಮತ ಚಲಾವಣೆ!
A student gets a demonstration from astronaut, Sunita Williams on how to drink liquids in space. Williams and Barry "Butch" Wilmore hit the six-month mark in space after becoming the first to ride Boeing's new Starliner capsule on what was supposed to be a week-long test flight.… pic.twitter.com/1UQSgvcHsN
— Francynancy (@FranMooMoo)