Russia Ukraine Crisis: ಉಕ್ರೇನ್ ಬರೀ ದೇಶವಲ್ಲ, ಹೊಸ ಯಗದ ತಂತ್ರಜ್ಞಾನ ಕಂಪನಿಗಳ ಬೇರು!

By Suvarna NewsFirst Published Feb 25, 2022, 4:14 PM IST
Highlights

ಟೆಕ್ನಾಲಜಿಯ ದೈತ್ಯ ಕಂಪನಿಗಳು ಹುಟ್ಟಿದ್ದು ಉಕ್ರೇನ್ ನಲ್ಲಿ

ವ್ಯಾಟ್ಸ್ ಆಪ್, ಪೇಪಾಲ್ ನಂಥ ಕಂಪನಿಗಳ ಅನ್ವೇಷಕರು ಉಕ್ರೇನ್ ಮೂಲದವರು

ಹೊಸ ಯಗದ ಅತ್ಯಂತ ಪ್ರಸಿದ್ಧ ತಂತ್ರಜ್ಞಾನ ಕಂಪನಿಗಳ ಸೃಷ್ಟಿಕರ್ತರ ಮೂಲ ಉಕ್ರೇನ್

ಬೆಂಗಳೂರು (ಫೆ.25): ಸಾರ್ವಭೌಮ ರಾಷ್ಟ್ರ ಉಕ್ರೇನ್ ನ (Ukraine) ಮೇಲೆ ರಷ್ಯಾದ (Russia ) ಆಕ್ರಮಣವನ್ನುಇಂದು ಜಗತ್ತು ಸುಮ್ಮನೆ ನೋಡುತ್ತಿದೆ. ಹೋರಾಟ ಮಾಡಿ ಸಹಾಯಕ್ಕೆ ಬರ್ತೇವೆ ಎಂದಿದ್ದ ಅಮೆರಿಕ, ಉಕ್ರೇನ್ ನೆಲದಲ್ಲಿ ರಷ್ಯಾ ಪಡೆಗಳೊಂದಿಗೆ ಯುದ್ಧ ಸಾಧ್ಯವಿಲ್ಲ. ನ್ಯಾಟೋ (NATO) ದೇಶಗಳಲ್ಲಿ ರಷ್ಯಾ ಉಪಟಳ ತೋರಿದರೆ ಯುದ್ಧಕ್ಕೆ ಬರುತ್ತೇವೆ ಎಂದು ಹೇಳಿದೆ. ಅದರೊಂದಿಗೆ ಉಕ್ರೇನ್ ಇಡೀ ಯುದ್ಧದಲ್ಲಿ ಏಕಾಂಗಿಯಾಗಿ ಬಲಿಷ್ಠ ರಷ್ಯಾ ಸೇನೆಯ ಆಕ್ರಮಣವನ್ನು ಎದುರಿಸುತ್ತಿದೆ. ಆದರೆ, ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ, ಈ ಯುದ್ಧ ಕೇವಲ ಉಕ್ರೇನ್ ನ ಮೇಲೆ ಮಾತ್ರವಲ್ಲ. ನಮ್ಮೆಲ್ಲ ಪ್ರತಿನಿತ್ಯದ ಜೀವನದ ಮೇಲೆ ಆಗುತ್ತಿರುವ ಯುದ್ಧ. ಅದಕ್ಕೆ ಕಾರಣವೂ ಇದೆ.


ಆಧುನಿಕ ಜಗತ್ತಿನಲ್ಲಿ ಇಂದು ಎಲ್ಲವೂ ಮೊಬೈಲ್ ನಲ್ಲಿಯೇ (Mobile) ಕೆಲಸಗಳು ನಡೆಯುತ್ತವೆ. ಅದಕ್ಕೆ ಬೇಕಾದಷ್ಟು ಭಿನ್ನ ಭಿನ್ನ ಅಪ್ಲಿಕೇಶನ್ ಗಳು (Apps) ಲಭ್ಯವಿದೆ. ಆದರೆ, ನೆನಪಿರಲಿ ಇಂದು ಜಗತ್ತಿನಲ್ಲಿ ಈಗಾಗಲೇ ಪ್ರಖ್ಯಾತಿ ಪಡೆದುಕೊಂಡಿರುವ ಬಹುತೇಕ ಅಪ್ಲಿಕೇಶನ್ ಗಳ ಮೂಲ ಉಕ್ರೇನ್. ಒಂದೋ ಉಕ್ರೇನ್ ನಲ್ಲಿ ಅಥವಾ ಉಕ್ರೇನ್ ಮೂಲದ ವ್ಯಕ್ತಿಗಳಿಂದ ಸೃಷ್ಟಿಯಾದ ಟೆಕ್ನಾಲಜಿಗಳನ್ನು ನಾವೆಲ್ಲ ಉಪಯೋಗಿಸುತ್ತಿದ್ದೇವೆ. ಇಂದು ಜನರ ಭಾಗವಾಗಿರುವ ವ್ಯಾಟ್ಸ್ ಆಪ್, ಪೇಮೆಂಟ್ ಜಗತ್ತಿನ ದೈತ್ಯ ಪೇ ಪಾಲ್, ಸ್ಯಾಪ್ ಚಾಟ್, ಇಂಗ್ಲೀಷ್ ಬರದ ಅದಷ್ಟೋ ವ್ಯಕ್ತಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿರುವ "ಗ್ರಾಮರ್ಲಿ" ಅಪ್ಲಿಕೇಶನ್ ಇವೆಲ್ಲವುಗಳು ಮೊದಲು ಹುಟ್ಟಿದ್ದು ಉಕ್ರೇನ್ ನಲ್ಲಿ. ಅಂಥದ್ದೊಂದು ಹೆಮ್ಮೆಯನ್ನು ಈ ದೇಶ ಇತಿಹಾಸದ ಪುಟಗಳಲ್ಲಿ ಉಳಿಸಿಕೊಳ್ಳಲಿದೆ.

ವ್ಯಾಟ್ಸ್ ಆಪ್ (WhatsApp): ಇಂದು ರಷ್ಯಾದ ರಾಕೆಟ್ ಗಳು ವ್ಯಾಪಕವಾಗಿ ಧ್ವಂಸ ಮಾಡುತ್ತಿರುವ ಫಾಸ್ಟೀವ್ ಪ್ರದೇಶದಲ್ಲಿ ಹುಟ್ಟಿದವರು ಜಾನ್ ಕೌಮ್ (Jan Koum). ಈ ಜಾನ್ ಕೌಮ್ ಯಾರು ಗೊತ್ತಾ, ಇಂದು ಫೇಸ್ ಬುಕ್ ನ ಅಧೀನದಲ್ಲಿರುವ ವ್ಯಾಟ್ಸ್ ಆಪ್ ಅಪ್ಲಿಕೇಶನ್ ನ ಸೃಷ್ಟಿಕರ್ತ. ಉಕ್ರೇನ್ ಗೆ ವಲಸಿಗರಾಗಿ ಬಂದು ನೆಲೆಸಿದ್ದ ಅವರೀಗ ಅಮೆರಿಕದಲ್ಲಿ ವಾಸವಿದ್ದಾರೆ.

ಪೇಪಾಲ್ (PayPal): ಎಲ್ಲರೂ ಅಂದುಕೊಂಡಿರುವಂತೆ ಪೇಮೆಂಟ್ ಜಗತ್ತಿನ ದೈತ್ಯ ಪೇಪಾಲ್ ಎಲಾನ್ ಮಸ್ಕ್ ಕಂಪನಿಯಲ್ಲ ಇದರ ಸಹಸಂಸ್ಥಾಪಕ ಮ್ಯಾಕ್ಸ್ ಲೆವ್ಚಿನ್ (Max Levchin). ಉಕ್ರೇನ್ ಮೂಲದ ವ್ಯಕ್ತಿ ಈಗ ಅಮೆರಿಕದ ಪ್ರಜೆ. ಬಿಎನ್ಪಿಎಲ್ ಸರ್ವೀಸ್ ಅಫ್ಫರಿಮ್ ಇವರ ಹೊಸ ಕಂಪನಿ.

ಕ್ಲೀನ್ ಮೈ ಮ್ಯಾಕ್ (CleanMyMac): ಉಕ್ರೇನ್ ರಾಜಧಾನಿ ಕೈವ್ ಮೂಲದ ಕಂಪನಿ ಮ್ಯಾಕ್ ಪಾವ್ ನಿರ್ಮಿಸಿದ ಅಪ್ಲಿಕೇಶನ್ ಕ್ಲೀನ್ ಮೈ ಮ್ಯಾಕ್. ನೀವು ಮ್ಯಾಕ್ ಕಂಪ್ಯೂಟರ್ ಅನ್ನು ಹೊಂದಿದ್ದರೆ, ಈ ಅಪ್ಲಿಕೇಶನ್ ಎಷ್ಟು ಉಪಯುಕ್ತ ಎನ್ನುವುದು ನಿಮಗೆ ಅರ್ಥವಾಗುತ್ತದೆ.

ಸ್ಪಾರ್ಕ್ ಮೇಲ್ (SparkMail): ಫ್ಯಾನ್ಸಿ ಈಮೇಲ್ ಹಾಗೂ ಕ್ಯಾಲೆಂಡರ್ ಗಳನ್ನು ನೀವು ಇಷ್ಟಪಡ್ತೀರಾ ಎಂದಾದಲ್ಲಿ ಸ್ಪಾರ್ಕ್ ಮೇಲ್ ಅಪ್ಲಿಕೇಶನ್ ನಿಮ್ಮಲ್ಲಿ ಇದ್ದಿರಲೇಬೇಕು. ಇದರ ನಿರ್ಮಿಸಿದ ರಿಯಾಡ್ಡಲ್ ಹುಟ್ಟಿದ್ದು ಈಗ ರಷ್ಯಾ ದಾಳಿಯಿಂದ ಧ್ವಂಸವಾಗಿರುವ ಪಟ್ಟಣ ಒಡೆಸ್ಸಾದಲ್ಲಿ. ಒಡೆಸ್ಸಾದಲ್ಲಿ ನೀವು ಇಂಥ ಸಾಕಷ್ಟು ತಂತ್ರಜ್ಞಾನದ ಮೈಲಿಗಲ್ಲು ನೆಟ್ಟ ವ್ಯಕ್ತಿಗಳನ್ನು ಕಾಣಬಹುದು.

ಸ್ನ್ಯಾಪ್ ಚಾಟ್ (Snap Chat): ಸ್ನ್ಯಾಪ್ ಚಾಟ್ ಅಪ್ಲಿಕೇಶನ್ ಯಾರಿಗೆ ಗೊತ್ತಿಲ್ಲ. ಲುಕ್ಸರಿ ಕಂಪನಿಯು ಇದನ್ನು ನಿರ್ಮಾಣ ಮಾಡಿದೆ. ಇದರ ಸ್ಥಾಪಕ ಯೂರಿ ಮೊನಾಸ್ಟಿರ್ಶಿನ್ (Yuri Monastyrshin). ಸ್ನ್ಯಾಪ್ ಚಾಟ್ ನ ಕೇಂದ್ರ ಕಚೇರಿ ಈಗಲೂ ಕೈವ್ ಮತ್ತು ಜಪೋರಿಜಾ ಪಟ್ಟಣದಲ್ಲಿದೆ.

ಅಪ್ಪ ಅಮ್ಮ ಐ ಲವ್‌ ಯೂ... ಉಕ್ರೇನ್‌ನ ಯುವ ಯೋಧನ ಭಾವುಕ ವಿಡಿಯೋ ವೈರಲ್‌
ಗ್ರಾಮರ್ಲಿ (grammarly): ಇಂಗ್ಲೀಪ್ ಬರದ ವ್ಯಕ್ತಿಗಳಿಗೂ ವ್ಯಾಕರಣ ಬದ್ಧವಾಗಿ ಇಂಗ್ಲೀಷ್ ಬರೆಯಲು ಸಾಧ್ಯವಾಗುವಂಥ ಗ್ರಾಮರ್ಲಿ ಅಪ್ಲಿಕೇಶನ್ ನ ಮೂಲ ಕೂಡ ಉಕ್ರೇನ್. ಇಂದು 13 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕಂಪನಿ ಇದಾಗಿದೆ.  ಮೂವರು ಉಕ್ರೇನಿಯನ್ ಪ್ರಜೆಗಳಿಂದ ರಚಿತವಾದ ಈ ಅಪ್ಲಿಕೇಶನ್, ಕೈವ್ ನಲ್ಲಿ ಈಗಲೂ ತನ್ನ ಅತೀದೊಡ್ಡ ಕಚೇರಿಯನ್ನು ಹೊಂದಿದೆ.

ರಿವೋಲ್ಟ್ (Revoult App): ಹಣಕಾಸು ವಿಚಾರವನ್ನು ಮ್ಯಾನೇಜ್ ಮಾಡುವ ರಿವೋಲ್ಟ್ ಅಪ್ಲಿಕೇಶನ್ ನ ಸಹಸಂಸ್ಥಾಪಕ ವಾಲ್ಡ್ ಯತ್ಸೆಂಕೋ. ಅವರು ಮೈಕೋಲೈವ್‌ನಿಂದ ಬಂದವರು, ಇದು ಈಗ ರಷ್ಯಾದ ಆಕ್ರಮಣದ ಬಿಸಿಯಲ್ಲಿದೆ.

Russia Ukraine War: ರಷ್ಯಾ ಸೇನೆ ತಡೆಯಲು ಕೀವ್ ಗಡಿಯಲ್ಲಿ ಬ್ರಿಡ್ಜ್ ಸ್ಪೋಟಿಸಿದ ಉಕ್ರೆನ್
ರಿಂಗ್ ಕ್ಯಾಮೆರಾ (Ring Camera):
ಅಮೇಜಾನ್ ನಲ್ಲಿ ರಿಂಗ್ ಕ್ಯಾಮೆರಾವನ್ನು ಇಷ್ಟಪಡ್ತೀರಾ? ಇದರ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಗಳು ಹುಟ್ಟಿದ್ದು ಕೈವ್ ನಲ್ಲಿ. ಪ್ರಸ್ತುತ ಈ ಕಂಪನಿಯಲ್ಲಿ 1 ಸಾವಿರಕ್ಕೂ ಅಧಿಕ ಜನರಿದ್ದಾರೆ. 

click me!