ಬಿಎಸ್ಎನ್ಎಲ್ ತನ್ನ 499 ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚುವರಿ ಡೇಟಾ ನೀಡುತ್ತಿದೆ. ಈ ಪ್ಲಾನ್ 75 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕರೆಗಳು ಮತ್ತು ಇತರ ಪ್ರಯೋಜನಗಳನ್ನು ಹೊಂದಿದೆ.
ನವದೆಹಲಿ: ಖಾಸಗಿ ಕಂಪನಿಗಳ ಬಳಿಕ ಬಿಎಸ್‌ಎನ್ಎಲ್ ಸಹ ಧಮಾಕಾ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಎರಡು ದಿನದ ಹಿಂದೆಯಷ್ಟೇ ಬಿಎಸ್‌ಎನ್ಎಲ್ ತನ್ನ ಒಂದು ವರ್ಷದ ಪ್ಲಾನ್ ಮೇಲೆ 100 ರೂಪಾಯಿ ಡಿಸ್ಕೌಂಟ್ ಅನೌನ್ಸ್ ಮಾಡಿತ್ತು. ಈ ಆಫರ್ ನವೆಂಬರ್ 7ರವರೆಗೆ ಮಾತ್ರ ಇರಲಿದೆ. ಇದೀಗ 499 ರೂಪಾಯಿ ಆಫರ್ ಮೇಲೆ ಹೆಚ್ಚುವರಿ ಡೇಟಾ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಆದ್ರೆ ಈ ಹೆಚ್ಚುವರಿ ಡೇಟಾ ಪಡೆದುಕೊಳ್ಳಲು ರೀಚಾರ್ಜ್ ಮಾಡಿಕೊಳ್ಳುವ ವಿಧಾನವನ್ನು ನೀವು ಬದಲಿಸಿಕೊಳ್ಳಬೇಕು.
BSNL RS 499 Plan
ಬಿಎಸ್‌ಎನ್‌ಎಲ್ 499 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಹೆಚ್ಚುವರಿಯಾಗಿ 3GB ನೀಡುವುದಾಗಿ ಘೋಷಿಸಿದೆ. ಆದ್ರೆ ಗ್ರಾಹಕರು BSNL self Care App ಮೂಲಕ ರಿಚಾರ್ಜ್ ಮಾಡಿಕೊಳ್ಳಬೇಕು. ಈ ಆಪ್‌ನಿಂದ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿಯಾಗಿ 3GB ಡೇಟಾ ಸಿಗಲಿದೆ. ಈ ಪ್ಲಾನ್ 75 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಉಚಿತ ಲೋಕಲ್/ಎಸ್‌ಟಿಡಿ ಅನ್‌ಲಿಮಿಟೆಡ್ ಕಾಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಪ್ರತಿದಿ 2GB ಡೇಟಾ ಜೊತೆಯಲ್ಲಿ 100 ಎಸ್‌ಎಂಎಸ್ ಕಳುಹಿಸಬಹುದು. ಬಿಎಸ್‌ಎನ್‌ಎಲ್ ಟ್ಯೂನ್ ಮತ್ತು GAMEIUM Premium ಸಹ ಲಭ್ಯವಾಗುತ್ತದೆ.
undefined
BSNLನ 4G ಸ್ಯಾಚುರೇಶನ್ ಯೋಜನೆಗಳ ಅಡಿಯಲ್ಲಿ 5,000 4G ಸೈಟ್‌ಗಳು ಈಗ ಕಾರ್ಯನಿರ್ವಹಿಸುತ್ತಿವೆ. ಈ ಹೆಜ್ಜೆ ಸಂಪರ್ಕವಿಲ್ಲದವರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಯಾವುದೇ ಹಳ್ಳಿ, ಎಷ್ಟೇ ದೂರದಲ್ಲಿದ್ದರೂ, ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಹಿಂದುಳಿದಿಲ್ಲ ಎಂದು ಬಿಎಸ್‌ಎನ್‌ಎಲ್ ಹೇಳಿದೆ.
ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್
BSNL RS 699 Plan
ಬಿಎಸ್‌ಎನ್‌ಎಲ್ ಗ್ರಾಹಕರು 699 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ ಪ್ರತಿ ದಿನ 2 ಜಿಬಿ ಡೇಟಾ, ಬರೋಬ್ಬರಿ 105 ದಿನ ವ್ಯಾಲಿಟಿಡಿ ಅಂದರೆ ಮೂರೂವರೆ ತಿಂಗಳು ರೀಚಾರ್ಜ್ ತಲೆಬಿಸಿ ಇಲ್ಲ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ ಹೈಸ್ಪೀಡ್ 2 ಜಿಬಿ ಡೇಟಾ ಸಿಗಲಿದೆ. ಇನ್ನು ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ.
ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ
ಬಿಎಸ್‌ಎನ್‌ಎಲ್ ದಿನದಿಂದ ದಿನಕ್ಕೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಖಾಸಗಿ ಕಂಪನಿಗಳ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ಲಾಭವನ್ನಾಗಿ ಮಾಡಿಕೊಳ್ಳುವಲ್ಲಿ ಬಿಎಸ್‌ಎನ್‌ಎಲ್ ಯಶಸ್ವಿಯಾಗಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮೂರು ಖಾಸಗಿ ಕಂಪನಿಗಳು ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬೆಲೆಗಳನ್ನು ಶೇ.15ರಷ್ಟು ಹೆಚ್ಚಿಸಿವೆ. ಜನಸಾಮಾನ್ಯರ ಜೇಬಿಗೆ ಹಿತವಾಗುವ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ನೀಡುತ್ತಿರೋದರಿಂದ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ.
ಇದನ್ನೂ ಓದಿ: 600 GB ಡೇಟಾ, 365 ದಿನ ವ್ಯಾಲಿಡಿಟಿಯ ಪ್ಲಾನ್ ಮೇಲೆ ಡಿಸ್ಕೌಂಟ್ ಘೋಷಿಸಿ ದೀಪಾವಳಿ ಆಫರ್ ಕೊಟ್ಟ ಬಿಎಸ್‌ಎನ್ಎಲ್
App-solutely Unbelievable!
Recharge with the and get 3GB extra data on the ₹499 plan. Don’t miss out—grab the offer today! pic.twitter.com/pcf8PUjhYQ
We are proud to announce that 5,000 4G sites are now operational under 's 4G Saturation Projects! This initiative aims to connect the unconnected, ensuring that no village, no matter how remote, is left behind in India’s digital revolution. … pic.twitter.com/i5E90niMs5
— BSNL India (@BSNLCorporate)