600 GB ಡೇಟಾ, 365 ದಿನ ವ್ಯಾಲಿಡಿಟಿಯ ಪ್ಲಾನ್ ಮೇಲೆ ಡಿಸ್ಕೌಂಟ್ ಘೋಷಿಸಿ ದೀಪಾವಳಿ ಆಫರ್ ಕೊಟ್ಟ ಬಿಎಸ್‌ಎನ್ಎಲ್

By Mahmad RafikFirst Published Oct 30, 2024, 9:36 PM IST
Highlights

ಖಾಸಗಿ ಟೆಲಿಕಾಂ ಕಂಪನಿಗಳ ಬಳಿಕ ಬಿಎಸ್‌ಎನ್‌ಎಲ್ ಸಹ ದೀಪಾವಳಿಯ ಆಫರ್ ಘೋಷಣೆ ಮಾಡಿದೆ. 600 GB ಡೇಟಾ, 365 ದಿನ ವ್ಯಾಲಿಡಿಟಿಯ ಪ್ಲಾನ್ ಮೇಲೆ ಡಿಸ್ಕೌಂಟ್ ಘೋಷಿಸಲಾಗಿದೆ.

ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟಲ್ ಮತ್ತು ವೊಡಾಫೋನ್ ಐಡಿಯಾ ದೀಪಾವಳಿ ಹಿನ್ನೆಲೆ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಸರ್ಕಾರಿ ಕಂಪನಿಯಾಗಿರುವ ಬಿಎಸ್‌ಎನ್ಎಲ್ ತನ್ನ ಸೂಪರ್ ಪ್ಲಾನ್ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. ಖಾಸಗಿ ಕಂಪನಿಗಳು ಬೆಲೆ ಏರಿಕೆ ಮಾಡಿದ್ದರೂ ಬಿಎಸ್ಎನ್‌ಎಲ್ ಯಾವುದೇ ದರ ಹೆಚ್ಚಳವನ್ನು ಮಾಡಿಲ್ಲ. ಆದರೂ ಈಗ 600 ಜಿಬಿ, 365 ದಿನದ ವ್ಯಾಲಿಡಿಟಿ ಮೇಲೆ ಬಿಎಸ್‌ಎನ್‌ಎಲ್ ಡಿಸ್ಕೌಂಟ್ ಘೋಷಣೆ ಮಾಡಿದ್ದು,  ಇದು ದೀಪಾವಳಿಯ ಗಿಫ್ಟ್ ಎಂದು ಕರೆಯಲಾಗುತ್ತಿದೆ. 

ಈ ಡಿಸ್ಕೌಂಟ್ ಆಫರ್ ಕೆಲವೇ ದಿನಗಳಿಗೆ ಸೀಮಿತವಾಗಿದೆ. ಈ ಸಮಯದಲ್ಲಿ ಗ್ರಾಹಕರು ರೀಚಾರ್ಜ್ ಮಾಡಿಸಿಕೊಳ್ಳುವ ಮೂಲಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹೌದು, ಬಿಎಸ್‌ಎನ್‌ಎಲ್‌ ತನ್ನ 1,999 ರೂಪಾಯಿ ರೀಚಾರ್ಜ್ ಪ್ಲಾನ್ ಮೇಲೆ 100 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹಾಗಾಗಿ ಸೀಮತ ಅವಧಿಯವರಗೆ ಈ ಆಫರ್ 1,899 ರೂಪಾಯಿಗೆ ಲಭ್ಯವಾಗಲಿದೆ. 28ನೇ ಅಕ್ಟೋಬರ್‌ನಿಂದ ಆರಂಭವಾಗಿದ್ದು, 7ನೇ ನವೆಂಬರ್ 2024ಕ್ಕೆ ಕೊನೆಯಾಗಲಿದೆ. ಈ ಅವಧಿ ನಡುವೆ 100 ರೂಪಾಯಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ.

Latest Videos

BSNL Rs 1999 (Rs 1899) Plan
ಬಿಎಸ್‌ಎನ್‌ಎಲ್‌ 1899 ರೂಪಾಯಿ ಪ್ಲಾನ್ ವ್ಯಾಲಿಡಿಟಿ 365 ದಿನಗಳಾಗಿರುತ್ತದೆ. ಇದು ಪ್ರಿಪೇಯ್ಡ್ ಪ್ಲಾನ್ ಆಗಿದ್ದು, ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ನೀಡಲಾಗಿದೆ. ಇದರ ಜೊತೆಯಲ್ಲಿ ಪ್ರತಿದಿನ ಉಚಿತ 100 ಎಸ್ಎಂಎಸ್ ಕಳುಹಿಸಬಹುದು. ಇಡೀ ವರ್ಷಕ್ಕೆ ಒಟ್ಟು 365 ಜಿಬಿ ಡೇಟಾ ಸಹ ಗ್ರಾಹಕರಿಗೆ ಸಿಗುತ್ತದೆ. ಬಿಎಸ್‌ಎನ್‌ಎಲ್ ನೀಡುತ್ತಿರುವ ಕಡಿಮೆ ಬೆಲೆಯ ದೀರ್ಘಾವಧಿಯ ಬೆಸ್ಟ್ ಪ್ಲಾನ್ ಇದಾಗಿದೆ.

ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್

Jio 1899 Plan Details
ರಿಲಯನ್ಸ್ ಜಿಯೋ 1,899 ರೂಪಾಯಿಲ್ಲಿ 365 ದಿನದ ಬದಲಾಗಿ 336 ದಿನ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ 24 ಜಿಬಿ ಡೇಟಾ, ಫ್ರೀ ಕಾಲಿಂಗ್ ಮತ್ತು 3,600 ಎಸ್‌ಎಂಎಸ್ ಕಳುಹಿಸುವ  ಅವಕಾಶ ನೀಡಲಾಗಿದೆ. ಈ ರೀಚಾರ್ಜ್ ಜೊತೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾ ಆಪ್‌ಗಳ ಆಕ್ಸೆಸ್ ಉಚಿತವಾಗಿ ಸಿಗಲಿದೆ. 

Airtel 1999 Plan Details
ಇನ್ನು ಏರ‌ಟೆಲ್ 365 ದಿನ ವ್ಯಾಲಿಡಿಟಿಯ ಪ್ಲಾನ್‌ನ್ನು 1,999 ರೂಪಾಯಿಯಲ್ಲಿ ನೀಡುತ್ತಿದೆ. 24 ಜಿಬಿ ಡೇಟಾ ಒಳಗೊಂಡಿರುವ ಈ ಪ್ಲಾನ್‌ನಲ್ಲಿ ಪ್ರತಿದಿನ 100 ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಲಾಭವೂ ದೊರಕಲಿದೆ. ಹೆಚ್ಚುವರಿಯಾಗಿ ಅಪೋಲೋ 24/7, ವಿಂಕ್ ಮ್ಯೂಸಿಕ್, ಸ್ಪ್ಯಾಮ್ ಪ್ರೊಟೆಕ್ಷನ್ ಮತ್ತು ಎಕ್ಸ್‌ಟ್ರೀಂ ಪ್ಲೇ ಸೇರಿದಂತೆ ಹೆಚ್ಚುವರಿ ಬೆನೆಫಿಟ್‌ಗಳು ಗ್ರಾಹಕರಿಗೆ ಲಭ್ಯವಾಗುತ್ತದೆ.

Vi 1999 Plan Details
ವೊಡಾಫೋನ್ ಐಡಿಯಾ ಸಹ ಒಂದು ವರ್ಷದ ಪ್ಲಾನ್ ಹೊಂದಿದೆ. ಪ್ರಿಪೇಯ್ಡ್ ಬಳಕೆದಾರರಿಗೆ ಈ ಪ್ಲಾನ್ ತರಲಾಗಿದೆ. ಈ ಪ್ಲಾನ್‌ನಡಿ ಗ್ರಾಹಕರಿಗೆ 24 ಜಿಬಿ ಡೇಟಾ, 3600 ಎಸ್‌ಎಂಎಸ್, ಪ್ರೀ ಕಾಲಿಂಗ್ ಬೆನೆಫಿಟ್ ಸಿಗಲಿದೆ.

ಇದನ್ನೂ ಓದಿ: ಏರ್‌ಟೆಲ್‌ನಿಂದ 84 ದಿನಗಳ ವ್ಯಾಲಿಡಿಟಿ ಪ್ಲಾನ್, ಜಿಯೋಗಿಂತ ದುಬಾರಿಯೇ?

click me!