ನೂತನ ರಾಯಲ್ ಎನ್‌ಫೀಲ್ಡ್ ಸ್ಕ್ರಾಂಬ್ಲರ್ ಬೈಕ್ ಹೇಗಿದೆ ಗೊತ್ತಾ?

First Published Jun 4, 2018, 5:50 PM IST
Highlights

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನೂತನ ಸ್ಕ್ರಾಂಬ್ಲರ್ ಬೈಕ್ ಆಫ್ ರೋಡ್ ಸವಾರಿಗೆ ಹೇಳಿ ಮಾಡಿಸಿದಂತಿದೆ. ಇಂಜಿನ್ ಸಾಮರ್ಥ್ಯ ಹಾಗೂ ನೂತನ  ಶೈಲಿ ಈ ಬೈಕ್‌ನ ವಿಶೇಷತೆ.

ಬೆಂಗಳೂರು(ಜೂನ್.4): ನೂತನ ರಾಯಲ್ ಎನ್‌ಫೀಲ್ಡ್ ಸ್ಕ್ರಾಂಬ್ಲರ್ ಬೈಕ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹೊಸ ವಿನ್ಯಾಸ ಹಾಗೂ ಹಲವು ವಿಶಿಷ್ಠತೆಗಳೊಂದಿಗೆ ಆಫ್ ರೋಡ್ ಬೈಕ್ ಸ್ಕ್ರಾಂಬ್ಲರ್ ಇದೀಗ ಮೋಡಿ ಮಾಡೋದರಲ್ಲಿ ಅನುಮಾನವಿಲ್ಲ.

ಆಫ್ ರೋಡ್‌ಗೆ ತಕ್ಕಂತೆ ನೂತನ ಸ್ಕ್ರಾಂಬ್ಲರ್ ಬೈಕ್‌ನ್ನ ವಿನ್ಯಾಸಗೊಳಿಸಲಾಗಿದೆ. ರೌಂಡ್ ಶೇಪ್ ಹೆಡ್‌ಲೈಟ್, ಟ್ಯಾಂಕ್ ಹಾಗೂ ಟೈಯರ್ ಈ ಬೈಕ್‌ನ ವಿಶೇಷತೆ.  ಆಫ್ ರೋಡ್‌ಗೆ ಸಹಕಾರಿಯಾಗುವಂತೆ ಗ್ರೀಪ್ ಟಯರ್‌ಗಳನ್ನ ಬಳಸಲಾಗಿದೆ.  

ನೂತನ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಮೋಟರ್ ಬೈಕ್‌ನಲ್ಲಿದೆ ಹಲವು ವಿಶೇಷತೆ

ಸ್ಕ್ರಾಂಬ್ಲರ್ ಬೈಕ್‌ನ ಬಹುತೇಕ ಬಿಡಿಭಾಗಗಳು ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಬ್ಲಾಕ್ ಫೋರ್ಕ್, ರಾ ಲುಕ್ ಹಾಗು ಪವರ್‌ಫುಲ್ ಇಂಜಿನ್ ಹೊಂದಿರುವ ಸ್ಕ್ರಾಂಬ್ಲರ್, ಬೈಕ್ ಪ್ರೀಯರನ್ನ ಮೋಡಿ ಮಾಡಲಿದೆ. 

350 ಸಿಸಿ ಇಂಜಿನ್ ಹಾಗೂ 500 ಸಿಸಿ ಇಂಜಿನ್‌ಗಳಲ್ಲಿ ಸ್ಕ್ರಾಂಬ್ಲರ್ ಬೈಕ್ ಲಭ್ಯವಿದೆ. ಸೈಲೆನ್ಸರ್ ಕೂಡ ವಿಶಿಷ್ಟರೀತಿಯಲ್ಲಿದ್ದೂ ಸ್ಪೋರ್ಟೀವ್ ಲುಕ್ ನೀಡಲಾಗಿದೆ. ನೂತನ ರಾಯಲ್ ಎನ್‌ಫೀಲ್ಡ್ ಸ್ಕ್ರಾಂಬ್ಲರ್ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಲಿದೆ. 

ನೂತನ ಸ್ಕ್ರಾಂಬ್ಲರ್ ಬೈಕ್‌ನ ಬೆಲೆ ಹಾಗೂ ಇತರ ಅಂಶಗಳು ಇನ್ನು ಬಯಲಾಗಿಲ್ಲ. ಆದರೆ ಶೀಘ್ರದಲ್ಲೇ ರಾಯಲ್ ಎನ್‌ಫೀಲ್ಡ್ ನೂತನ ಬೈಕನ್ನ ಭಾರತದ ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸುತ್ತಿದೆ.

click me!