ಗೂಗಲ್ ಅಭಿವೃದ್ಧಿ ಪಡಿಸಿರುವ ನೂತನ ಇ-ಮೇಲ್ ಯಾವುದು?ಅದರ ವಿಶೇಷತೆ ಏನು?

First Published Jun 3, 2018, 10:23 PM IST
Highlights

ಗೌಪ್ಯ ಸಂದೇಶವನ್ನ ರವಾನಿಸಲು ಜಿ-ಮೇಲ್ ಇದೀಗ ನೂತನ ಕಾನ್ಫಿಡೆನ್ಶಲ್ ಮೂಡ ಮೇಲ್ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಅದೆಷ್ಟೇ ಗೌಪ್ಯ ವಿಚಾರಗಳನ್ನ ಹಂಚಿಕೊಳ್ಳಬಹುದು. ನಿಗಧಿತ ಸಮಯದ ಬಳಿಕ ಸಂದೇಶ ತನ್ನಷ್ಟಕ್ಕೆ ಡಿಲೀಟ್ ಆಗಲಿದೆ.

ಬೆಂಗಳೂರು(ಜೂನ್.3): ಜಗತ್ತು ಈಗ ಡಿಜಿಟಲ್ ಮಯವಾಗಿದೆ. ಅದೆಷ್ಟೇ ಗೌಪ್ಯ ಮಾಹಿತಿಯಾದರೂ, ಇ-ಮೇಲ್ ಮೂಲಕವೇ ರವಾನೆಯಾಗುತ್ತೆ. ಇದೀಗ ಗೂಗಲ್ ತನ್ನ ಜಿ-ಮೇಲ್‌ನ್ನ ಅಭಿವೃದ್ಧಿ ಪಡಿಸಿದೆ. ಗೌಪ್ಯ ವಿಚಾರಗಳನ್ನ ರವಾನಿಸಲು ನೂತನ ಜಿ-ಮೇಲ್‌ನಲ್ಲಿ  ಇದೀಗ ನೂತನ ಕಾನ್ಫಿಡೆನ್ಶಲ್ ಮೂಡ್ ಜಾರಿಗೆ ತಂದಿದೆ.

ಕಾನ್ಫಿಡೆನ್ಶಿಯಲ್ ಮೂಡ್ ಇ-ಮೇಲ್ ಮೂಲಕ ಯಾವುದೇ ಗೌಪ್ಯ ವಿಚಾರಗಳನ್ನ ಹಂಚಿಕೊಳ್ಳಬಹುದು. ಇದರ ವಿಶೇಷತೆ ಅಂದರೆ, ಈ ಇ-ಮೇಲ್ ನಿಗಧಿತ ಸಮಯದ ಬಳಿಕ ತನ್ನಷ್ಟಕ್ಕೆ ಡಿಲೀಟ್ ಆಗಲಿದೆ. ಸಂದೇಶ ಕಳುಹಿಸುವ ವ್ಯಕ್ತಿ ನಿರ್ಧಿಷ್ಠ ಸಮಯದವರೆಗೆ ಇ-ಮೇಲ್ ಇರುವಂತೆ ಸೆಟ್ ಮಾಡಬುಹುದು. ಬಳಿಕ ತನ್ನಷ್ಟಕ್ಕೆ ಡಿಲೀಟ್ ಆಗಲಿದೆ. ಇಷ್ಟೇ ಅಲ್ಲ, ಇ-ಮೇಲ್ ಸಂದೇಶವನ್ನ ಕಾಪಿ,ಡೌನ್‌ಲೋಡ್, ಫಾರ್ವಡ್ ಹಾಗು ಪ್ರಿಂಟ್ ಮಾಡಲು ಸಾಧ್ಯವಿಲ್ಲ. ಕಾನ್ಫಿಡೆನ್ಶಿಯಲ್ ಇ-ಮೇಲ್ ಸ್ವೀಕರಿಸುವಾತ ನಿಗಧಿತ ಪಾಸ್ ಕೋಡ್ ಮೂಲಕವೇ ಮೇಲ್‌ನ್ನ ಓಪನ್ ಮಾಡಬುಹುದು.

ಈ ಕಾನ್ಫಿಡೆನ್ಶಿಯಲ್ ಮೇಲ್ ಸಿಸ್ಟಮ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್ ಓಪನ್ ಮಾಡಿದವರಿಗೆ ಲಭ್ಯವಾಗಲಿದೆ. ಆದರೆ ಆಂಡ್ರಾಯ್ಡ್ ಹಾಗೂ ಐಓಸಿ ಆ್ಯಪ್‌ನಲ್ಲಿ ಲಭ್ಯವಿಲ್ಲ. ನೂತನ ಕಾನ್ಫಿಡೆನ್ಶಿಯಲ್ ಮೂಡ್ ಮೇಲ್‌ ಮಾಡುವುದು ಬಹಳ ಸುಲುಭ. 

ಕಾನ್ಫಿಡೆನ್ಶಿಯಲ್ ಮೂಡ್ ಮೇಲ್  :

ಮೊದಲು ನೀವು ಜಿ-ಮೇಲ್ ಅಕೌಂಟ್ ಓಪನ್ ಮಾಡಿ, ಸೆಟ್ಟಿಂಗ್ ವಿಭಾಗಕ್ಕೆ ಹೋಗಬೇಕು. ಇಲ್ಲಿ ಟ್ರೈ ನ್ಯೂ ಜಿ-ಮೇಲ್ ಮೇಲೆ ಕ್ಲಿಕ್ ಮಾಡಬೇಕು. ರಿಲೋಡಿಂಗ್ ಬಳಿಕ ನಿಮಗೆ ಕಾನ್ಫಿಡೆನ್ಶಿಯಲ್ ಮೇಲ್ ಕಳುಹಿಸಲು ಸಾಧ್ಯ. 

ಕಾನ್ಫಿಡೆನ್ಶಿಯಲ್ ಮೂಡ್ ಮೇಲ್ ಕಳುಹಿಸುವ ವಿಧಾನ :

ಹೆಜ್ಜೆ 1 : ಕಂಪೋಸ್ ಮೇಲೆ ಕ್ಲಿಕ್ ಮಾಡಿ

ಹೆಜ್ಜೆ 2 : ಕಂಪೋಸ್ ಮೇಲ್ ನೂ ಬಲಭಾಗದಲ್ಲಿ ಟರ್ನ್ ಆನ್ ಕಾನ್ಫಿಡೆನ್ಶಿಯಲ್ ಮೂಡ್ ಕ್ಲಿಕ್ ಮಾಡಬೇಕು

ಹೆಜ್ಜೆ 3 : ನಿಮ್ಮ ಸಂದೇಶವನ್ನ ಲಾಕ್ ಮಾಡಲು ಕ್ಲಾಕ್/ಲಾಕ್ ಐಕಾನ್ ಕ್ಲಿಕ್ ಮಾಡಬೇಕು

ಹೆಜ್ಜೆ 4 : ನಿಗಧಿತ ದಿನಾಂಕ ಹಾಗೂ ಪಾಸ್ ಕೋಡ್ ಸೆಟ್ ಮಾಡಬೇಕು

ನಾಲ್ಕು ಹೆಜ್ಜೆ ಬಳಿಕ ನೀವು ಗೌಪ್ಯ ಸಂದೇಶವನ್ನ ರವಾನಿಸಬಹುದು. ನೀವು ಸೆಟ್ ಮಾಡಿರೋ ದಿನಾಂಕದ ವರೆಗೆ ಮಾತ್ರ ಸಂದೇಶ ಇರುತ್ತೆ. ಬಳಿಕ ತನ್ನಷ್ಟಕ್ಕೆ ಡಿಲೀಟ್ ಆಗಲಿದೆ. ಇಷ್ಟೇ ಅಲ್ಲ ಸೆಟ್ ಪಾಸ್ ಕೋಡ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಅಥವಾ ಜಿ-ಮೇಲ್ ಅಕೌಂಟ್‌ಗೆ ಪಾಸ್‌ವರ್ಡ್ ಸಿಗಲಿದೆ. ಈ ಪಾಸ್ ವರ್ಡ್ ಮೂಲಕವೇ ಕಾನ್ಫಿಡೆನ್ಶಿಯಲ್ ಮೇಲ್ ತೆರೆಯಬಹುದು.

click me!