
ದೇಶದ ಇಂಟರ್‌ನೆಟ್ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಿರುವ ಜಿಯೋ ಇದೀಗ ಮತ್ತೊಂದು ಸಿಹಿ ಸುದ್ದಿ ಹೊತ್ತು ತಂದಿದೆ.
ಈ ಹಿಂದೆ ಅಗ್ಗದ ದರಕ್ಕೆ ಮೊಬೈಲ್ ನೀಡಿದ್ದ ಜಿಯೋ ಈಗ ‘ಜಿಯೋಫೋನ್2’ ಹೆಸರಿನಲ್ಲಿ ಮತ್ತೊಂದು ಕಡಿಮೆ ಬೆಲೆಯ ಮೊಬೈಲ್ ನೀಡಲು ಮುಂದೆ ಬಂದಿದೆ.
ಆಗಸ್ಟ್ 16ರಿಂದ 2999 ರು. ಬೆಲೆಯ ಜಿಯೋಫೋನ್ 2 ಬುಕ್ಕಿಂಗ್ ಆರಂಭವಾಗಿದ್ದು, ಜಿಯೊ ಅಧಿಕೃತ ವೆಬ್‌ಸೈಟ್ (ಜಿಯೊ ಡಾಟ್ ಕಾಮ್) ನಲ್ಲಿ ಮೊಬೈಲ್ ಲಭ್ಯ.
ಫೇಸ್‌ಬುಕ್, ಯೂಟ್ಯೂಬ್ ಸೇವೆಗಳು ಈ ಮೊಬೈಲ್‌ನಲ್ಲಿ ಸಿಗಲಿದ್ದು, ಸದ್ಯದಲ್ಲಿಯೇ ವಾಟ್ಸಪ್ ಸೇವೆಯೂ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜುಲೈನಲ್ಲಿ ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು.
ಇದನ್ನೂ ಓದಿ: ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ?
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.