ಭದ್ರತಾ ದೃಷ್ಟಿಯಿಂದ ಈ ಮೊಬೈಲ್ ನೆಟ್ವರ್ಕ್ ಬ್ಯಾನ್

By Web DeskFirst Published Aug 23, 2018, 1:38 PM IST
Highlights

ಭದ್ರತಾ ದೃಷ್ಟಿಯಿಂದ ಈ ಮೊಬೈಲ್ ನೆಟ್ವರ್ಕ್ ಬ್ಯಾನ್ ಮಾಡಲಾಗುತ್ತಿದೆ.  ತಮ್ಮ 5 ಜಿ ಸೇವೆಯನ್ನು ಒದಗಿಸಲು ನೆಟ್ವರ್ಕ್ ವ್ಯವಸ್ಥೆ ನಿರ್ಮಾಣಕ್ಕೆ ಹುವಾಯ್ ಸಜ್ಜಾಗಿತ್ತು. ಆದರೆ ಆಸ್ಟ್ರೇಲಿಯಾ ಸರ್ಕಾರ ಇದಕ್ಕೆ ತಡೆ ಒಡ್ಡಿದೆ.

ಸಿಡ್ನಿ :  ಆಸ್ಟ್ರೇಲಿಯಾ ಸರ್ಕಾರವೂ ಚೀನಾದ ಪ್ರಮುಖ ಟೆಲಿಕಾಂ ಘಟಕವಾದ ಹುವಾಯ್ ಟೆಕ್ನಾಲಜಿಯ 5ಜಿ ನೆಟ್ ವರ್ಕ್ ಸೇವೆಯನ್ನು ನಿರ್ಮಾಣ ಮಾಡಲು ಪರಿಕರಗಳ ಆಮದು ಮಾಡಿಕೊಳ್ಳುವುದನ್ನು ಬ್ಯಾನ್ ಮಾಡಿದೆ. 

ಪ್ರಮುಖ ನೆಟ್ ವರ್ಕ್ಗಳು ಹ್ಯಾಕ್ ಆಗುವ ಭಯದಿಂದ ಈ ರೀತಿಯಾದ ಕ್ರಮ ಕೈಗೊಂಡಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಸಲಕರಣೆಗಳು ದೇಶಕ್ಕೆ ಪೂರೈಕೆ ಮಾಡಿಕೊಳ್ಳದಿರಲು ನಿರ್ಧರಿಸಿದೆ. 

ಭದ್ರತಾ ಸಂಸ್ಥೆಗಳು ನೀಡಿದ ಎಚ್ಚರಿಕೆಯ ಪರಿಣಾಮ ಈ ಪ್ರಮುಖ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಈಗಾಗಲೇ ಹುವಾಯ್ ನೆಟ್ ವರ್ಕ್ ಗೆ ಯುಎಸ್ ನಲ್ಲೂ ಕೂಡ ನಿರ್ಬಂಧ ವಿಧಿಸಲಾಗಿದೆ. 

ಈ ಬಗ್ಗೆ ಈಗಾಗಲೇ ಈ ಮೇಲ್ ಮೂಲಕ ಈ ಬಗ್ಗೆ ತಿಳಿಸಲಾಗಿದೆ. ಭದ್ರತಾ ದೃಷ್ಟಿಕೋನದಿಂದ ಕೆಲ ಕಟ್ಟು ಪಾಡುಗಳನ್ನು ವಿಧಿಸಲಾಗುತ್ತಿರುವುದಾಗಿ ಮಾಹಿತಿ ನೀಡಲಾಗಿದೆ.  ರಾಷ್ಟ್ರೀಯ ನೆಟ್ವರ್ಕ್ ವ್ಯವಸ್ಥೆಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವುದರಿಂದ ಹುವಾಯ್ 5ಜಿ ನೆಟ್ವರ್ಕ್ ವ್ಯವಸ್ಥೆಗೆ ತಡೆ ಒಡ್ಡಲಾಗುತ್ತಿದೆ ಎಂದು ಹೇಳಿದೆ.

click me!