ಬಂದಿದೆ ಬರೋಬ್ಬರಿ 491 MBಯ ಹೊಸ PUBG ಲೈಟ್‌!

By Web DeskFirst Published Aug 2, 2019, 7:27 PM IST
Highlights

400 MBಗಳಷ್ಟು ಕಡಿಮೆ ಪ್ರಮಾಣದ ಡೌನ್‌ಲೋಡ್‌ ಹಾಗೂ 2 GB ರಾರ‍ಯಮ್‌ಗಿಂತಲೂ ಕಡಿಮೆ ಸ್ಪೇಸ್‌ ಇರುವ ಮೊಬೈಲ್‌ಗಳಲ್ಲೂ ತಡೆರಹಿತ PUBG ಆಡಬಹುದು

ಇಷ್ಟು ದಿನ PUBG ಆಡುವ ಆಸೆ ಇರುವವರೂ ಕೂಡ ಅದರ 2GB ಗಾತ್ರವನ್ನು ನೋಡಿ ನಮಗೆ PUBG ಸಹವಾಸ ಬೇಡ ಅಂತ ದೂರವಿದ್ದರು. ಆದರೆ ಅದಕ್ಕೊಂದು ಪರಿಹಾರವನ್ನು PUBG ಕಂಪನಿ ಕಂಡುಕೊಂಡಿದೆ. PUBG ಲೈಟ್‌ ಎಂಬ ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಇದರ ಗಾತ್ರ 491 MB ಮಾತ್ರ.

ಬಹಳ ಇಂಟೆರೆಸ್ಟಿಂಗ್‌ ಆಗಿ PUBG ಆಡ್ತಿರುವಾಗ ನೆಟ್‌ವರ್ಕ್ ಹೋಯ್ತು ಅಂತಲೋ, ನೆಟ್‌ಪ್ಯಾಕ್‌ ಖಾಲಿ ಆಯ್ತು ಅಂತಾನೋ ಹೇಳೋ ಪ್ರಮೇಯ ಇನ್ಮೇಲೆ ಬರಲಿಕ್ಕಿಲ್ಲ. ಏಕೆಂದರೆ PUBG, ತನ್ನ ಗೇಮ್‌ ಪ್ರಿಯರಿಗಾಗಿ ‘PUBG ಮೊಬೈಲ್‌ ಲೈಟ್‌’ ಎಂಬ ಸುಲಭ ಮಾರ್ಗ ಕಲ್ಪಿಸಿದೆ. 

ಇದನ್ನೂ ಓದಿ | ಟ್ರೂಕಾಲರ್ ಬಳಕೆದಾರರಿಗೆ ‘ಬ್ಯಾಂಕ್’ ಶಾಕ್!

ಈ ಆ್ಯಪ್‌ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡ್ಕೊಂಡ್ರೆ ರೋಚಕ ಗೇಮಿಂಗ್‌ ಮಧ್ಯ ಯಾವುದೇ ಅಡೆತಡೆ ಬರೋದಿಲ್ವಂತೆ. ಜೊತೆಗೆ ಕಡಿಮೆ ಸಾಮರ್ಥ್ಯದ ಡಿವೈಸ್‌ಗಳಲ್ಲೂ ರಸಭಂಗವಾಗದಂತೆ PUBG ಗೇಮ್‌ ಆಡಬಹುದಂತೆ. ಅಂದರೆ 400 MBಗಳಷ್ಟು ಕಡಿಮೆ ಪ್ರಮಾಣದ ಡೌನ್‌ಲೋಡ್‌ ಹಾಗೂ 2 GB ರಾರ‍ಯಮ್‌ಗಿಂತಲೂ ಕಡಿಮೆ ಸ್ಪೇಸ್‌ ಇರುವ ಮೊಬೈಲ್‌ಗಳಲ್ಲೂ ತಡೆರಹಿತ PUBG ಆಡಬಹುದು ಎಂಬ ಆಶ್ವಾಸನೆ ಕಂಪೆನಿ ಕಡೆಯಿಂದ ಬಂದಿದೆ.

ಇತ್ತೀಚೆಗೆ ಫೇಸ್‌ಬುಕ್‌ ಸಹ ಫೇಸ್‌ಬುಕ್‌ ಲೈಟ್‌ ಎಂಬ ಆ್ಯಪ್‌ ಬಿಡುಗಡೆ ಮಾಡಿತ್ತು. ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ಫೇಸ್‌ಬುಕ್‌ ಓಪನ್‌ ಆಗುವಂತೆ ಮಾಡುವ, ಕಡಿಮೆ ಪ್ರಮಾಣದ ಇಂಟರ್‌ನೆಟ್‌ನ್ನಷ್ಟೇ ಉಪಯೋಗಿಸಿ ಹೆಚ್ಚು ಕಾಲ ಬಳಸುವ ಅವಕಾಶ ಇದರಲ್ಲಿತ್ತು. ಮೇಲ್ನೋಟಕ್ಕೆ PUBG ಮೊಬೈಲ್‌ ಲೈಟ್‌ ಆ್ಯಪ್‌ ಸಹ ಇದೇ ರೀತಿಯಾಗಿ ಕಾಣುತ್ತದೆ.

PUBG ಮೊಬೈಲ್‌ ಲೈಟ್‌, 60 ಆಟಗಾರರ ಸಣ್ಣ ಮ್ಯಾಪ್‌ನಂತಹ ವೈಶಿಷ್ಟ್ಯತೆಯನ್ನು ಹೊಂದಿದೆ. ಇದು ಸಾಂಪ್ರದಾಯಿಕ PUBG ಸ್ಟೈಲ್‌ನ ಆಟದ ಮಾದರಿಯಲ್ಲಿದೆ. ಹಲವು ರಿವಾರ್ಡ್‌ಗಳ ಆಫರ್‌ಗಳು ಇದರಲ್ಲಿವೆ. ‘PUBG ಮೊಬೈಲ್‌ ಲೈಟ್‌’ ಮೂಲಕ ನೆಕ್‌ವರ್ಕ್ ಸಮಸ್ಯೆಯನ್ನು ಮೀರಿ ಗೇಮಿಂಗ್‌ ಅನುಭವವಾಗಲಿದೆ.

click me!