ಗ್ರೂಪ್ ವೀಡಿಯೋ ಮತ್ತು ವಾಯ್ಸ್ ಕಾಲಿಂಗ್, ಸ್ಟಿಕರ್ಸ್, ಪಾವತಿ ಸೇವೆ ಮುಂತಾದ ಹೊಸ ಫೀಚರ್ ಬಳಿಕ ವಾಟ್ಸಪ್‌ನಿಂದ ಇನ್ನೊಂದು ಹೊಸ ಸೌಲಭ್ಯ ಪ್ರೈವೇಟ್ ರಿಪ್ಲೈ. ಏನಿದು ಪ್ರೈವೇಟ್ ರಿಪ್ಲೈ, ಹೇಗಿದನ್ನು ಬಳಸಿಕೊಳ್ಳಬೇಕು? ಇಲ್ಲಿದೆ ಡೀಟೆಲ್ಸ್..
ಹಳ್ಳಿಯಿಂದ ಹಿಡಿದು ನಗರದವರೆಗೆ ವಾಟ್ಸಪ್ ಇಂದು ಸಂಹವನದ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ. ಬಳಕೆದಾರರ ಅವಶ್ಯಕತೆಗೆ ಅನುಗುಣವಾಗಿ ವಾಟ್ಸಪ್ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಂಡುಬಂದಿದೆಯಲ್ಲದೇ, ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾ ಬಂದಿದೆ.
ಕಳೆದೊಂದು ವರ್ಷದಲ್ಲಿ ವಾಟ್ಸಪ್ ತನ್ನ ಬಳಕೆದಾರರಿಗೆ, ಗ್ರೂಪ್ ವೀಡಿಯೋ ಮತ್ತು ವಾಯ್ಸ್ ಕಾಲಿಂಗ್, ಸ್ಟಿಕರ್ಸ್, ಪಾವತಿ ಸೇವೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿತ್ತು. ಕಳುಹಿಸಿದ ಮೆಸೇಜ್ ಗಳನ್ನು ಡಿಲೀಟ್ ಮಾಡುವ ಆಪ್ಷನ್ ಕೂಡಾ ಒದಗಿಸಿತ್ತು. ಅದರ ಹೊರತಾಗಿ, ಕಳೆದ ಮೂರು ತಿಂಗಳನಲ್ಲಿ ವಾಟ್ಸಪ್ ಪರಿಚಯಿಸಿರುವ ಫೀಚರ್ ಗಳಲ್ಲಿ, ಸ್ಟಿಕರ್ಸ್ ಹಾಗೂ ಪ್ರೈವೇಟ್ ರಿಪ್ಲೈ ಪ್ರಮುಖವಾದುದು.
ಪ್ರೈವೇಟ್ ರಿಪ್ಲೈ:
ವಾಟ್ಸಪ್ ಇತ್ತೀಚೆಗೆ ಪ್ರೈವೇಟ್ ರಿಪ್ಲೈ ಎಂಬ ಫೀಚರನ್ನು ಪರಿಚಯಿಸಿದೆ. ಆದರೆ ಇದು ಬೀಟಾ ಆವೃತ್ತಿ 2.18.355ಗೆ ಸೀಮಿತವಾಗಿದ್ದು, ಗ್ರೂಪ್ ನಲ್ಲಿ ಖಾಸಗಿ ಪ್ರತಿಕ್ರಿಯೆಗೆ ಅವಕಾಶ ಮಾಡಿಕೊಟ್ಟಿದೆ.
ಪ್ರೈವೇಟ್ ರಿಪ್ಲೈ ಫೀಚರ್ ಬಳಸಿ, ಗ್ರೂಪ್ ನಲ್ಲಿ ಇತರ ಸದಸ್ಯರ ಅರಿವಿಗೆ ಬಾರದಂತೆ ಯಾರಾದರೂ ಒಬ್ಬ ಸದಸ್ಯನ ಸಂದೇಶಕ್ಕೆ ಉತ್ತರಿಸಬಹುದು.
ಈ ಫೀಚರ್ ಬಳಸಿಕೊಳ್ಳಬೇಕಾದರೆ, ಯಾವ ಮೆಸೇಜ್ ಗೆ ರಿಪ್ಲೈ ಮಾಡಬೇಕೋ ಆ ಮೆಸೇಜನ್ನು ಒತ್ತಿಡಿ. ಬಳಿಕ ಟಾಪ್ ರೈಟ್ ಕಾರ್ನರ್ ನಲ್ಲಿರುವ ೩ ಚುಕ್ಕಿಗಳ ಮೆನುವನ್ನು ಓಪನ್ ಮಾಡಿ. ಾಲ್ಲಿ ನಿಮಗೆ ಪ್ರೈವೇಟ್ ರಿಪ್ಲೈ ಆಯ್ಕೆ ಸಿಗುತ್ತದೆ.
ನೀವು ಅದನ್ನು ಆಯ್ಕೆ ಮಾಡಿಕೊಂಡಾಗ, ನೀವು ಸೆಲೆಕ್ಟ್ ಮಾಡಿರುವ ಸದಸ್ಯನಿಗೆ ಪ್ರತ್ಯೇಕವಾಗಿ ಉತ್ತರಿಸಬಹುದಾಗಿದೆ.