ವಾಟ್ಸಪ್ ತನ್ನ ಬಳಕೆದಾರರ ಅನುಕೂಲ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ದೀಪಾವಳಿ ಪ್ರಯುಕ್ತ ವಾಟ್ಸಪ್ ಬಳಕೆದಾರರಿಗೆ ಹೊಸದೊಂದು ಫೀಚರ್ ಲಭ್ಯವಿದೆ.
ದೀಪಾವಳಿ ಶುಭಾಶಯ ಕೋರಲು ಹೊಸ ಸ್ಟಿಕರ್ ವೊಂದನ್ನು ಪರಿಚಯಿಸಲಾಗಿದ್ದು, ಇಮೋಜಿ, ಇಮೇಜ್ ಅಥವಾ ವಿಡಿಯೋ ತರಹ ಇದನ್ನೂ ಕಳುಹಿಸಬಹುದು.ಈ ಫಿಚರ್ ಅನುಕೂಲವೇನೆಂದರೆ, ಇದು ಇಮೇಜ್ ಅಥವಾ ವಿಡಿಯೋ ಫೈಲ್ ನಂತೆ ಹೆಚ್ಚು ಮೆಮೊರಿ ತೆಗೆದುಕೊಳ್ಳಲ್ಲ. ಆ ಮೂಲಕ ನಿಮ್ಮ ಗ್ಯಾಲರಿಯ ಹೆಚ್ಚು ಸ್ಪೇಸ್ ಉಳಿಯಲಿದೆ.
undefined
ಆಸಕ್ತ ಡೆವಲಪರ್ ಗಳು ಥರ್ಡ್ ಪಾರ್ಟಿ ಸ್ಟಿಕರ್ ಗಳನ್ನು ಸೃಷ್ಟಿಸಬಹುದಾಗಿದ್ದು, ಇತರ ವಾಟ್ಸಪ್ ಬಳಕೆದಾರರು ಅದನ್ನು ಬಳಸಬಹುದಾಗಿದೆ. ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಫೋನ್ ಗಳಲ್ಲಿ ಲಭ್ಯವಿದ್ದರೂ, ಕೇವಲ ಸೀಮಿತ ಬಳಕೆಗೆ ಲಭ್ಯವಿದೆ. ಕ್ರಮೇಣವಾಗಿ ಎಲ್ಲಾ ಬಳಕೆದಾರರಿಗೂ ಇದು ಸಿಗಲಿದೆ ಎಂದು ಬಿಜಿಆರ್.ಇನ್ ವರದಿ ಮಾಡಿದೆ.
ಈ ಆಯ್ಕೆಯನ್ನು 2 ರೀತಿಯಲ್ಲಿ ಬಳಸಬಹುದು. ಒಂದೋ ನೀವು ವಾಟ್ಸಪ್ ಬೀಟಾ ಆವೃತ್ತಿಯನ್ನು ಬಳಸಬೇಕು ಅಥವಾ ವಾಟ್ಸಪ್ ನ್ನು ನಿಮ್ಮ ಫೋನ್ ನಿಂದ ಅನ್ ಇನ್ಸ್ಟಾಲ್ ಮಾಡಿ ರೀ ಇನ್ಸ್ಟಾಲ್ ಮಾಡಿಕೊಳ್ಳಬೇಕು. [ ಈ ರೀತಿ ಮಾಡುವಾಗ ನಿಮ್ಮ ವಾಟ್ಸಪ್ ಮಾಹಿತಿಗಳ ಬ್ಯಾಕಪ್ ತೆಗೆದುಕೊಳ್ಳಲು ಮರೆಯದಿರಿ]
ಬಳಿಕ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ “Diwali Stickers for WhatsApp, WAStickerApps” ಅಥವಾ bit.ly/2yT9k0M - ಈ ಲಿಂಕನ್ನು ಕ್ಲಿಕ್ ಮಾಡಿ. ಅಲ್ಲಿ ಸಿಗುವ ಆ್ಯಪನ್ನು ಇನ್ಸ್ಟಾಲ್ ಮಾಡಿ. ಈ ಆ್ಯಪ್ ಬರೇ 5.4MB ಯಷ್ಟಿದೆ.
ಈ ಆ್ಯಪ್ ಇನ್ಸ್ಟಾಲ್ ಮಾಡಿದ ಬಳಿಕ, ನಿಮ್ಮ ಮುಂದೆ, ದೀಪಾವಳಿ ಸ್ಟಿಕ್ಕರ್ಸ್ [0.95MB] ಮತ್ತು ಕ್ರ್ಯಾಕರ್ ಸ್ಟಿಕರ್ಸ್ [577KB] ಎಂಬ 2 ಆಯ್ಕೆಗಳಿರುವುದು. ಬಲಬದಿಯಲ್ಲಿರುವ + ಚಿಹ್ನೆಯನ್ನು ಪ್ರೆಸ್ ಮಾಡುವ ಮೂಲಕ ಅದನ್ನು ವಾಟ್ಸಪ್ ಗೆ ಸೇರಿಸಬಹುದು
ನಂತರ, ವಾಟ್ಸಪ್ ಓಪನ್ ಮಾಡಿ. ಚಾಟ್ ಮಾಡುವಾಗ ಇಮೋಜಿ ಸಂಕೇತಗಳನ್ನು ಓಪನ್ ಮಾಡಿ ಅಲ್ಲಿಂದ ಸ್ಟಿಕ್ಕರ್ಸ್ಗಳನ್ನು ಆಯ್ದುಕೊಂಡು ತಮ್ಮ ಗೆಳೆಯರಿಗೆ- ಸಂಬಂಧಿಕರಿಗೆ ಶುಭಾಶಯ ಕೋರಬಹುದು.