ಟೆಲಿಕಾಂ ಕ್ಷೇತ್ರದಲ್ಲಿ ಉಳಿಯಬೇಕೆಂದರೆ ಪೈಪೋಟಿ ಎದುರಿಸಲೇ ಬೇಕು. ಬದಲಾಗುತ್ತಿರುವ ವ್ಯಾಪಾರ ಲೆಕ್ಕಾಚಾರಗಳು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಹಕರನ್ನು ಖುಷಿಪಡಿಸೋದು ದೊಡ್ಡ ಸವಾಲು. BSNL ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್‌ವೊಂದನ್ನು ಬಿಡುಗಡೆ ಮಾಡಿದೆ.
ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಲ್ಲಿ ಸರ್ಕಾರಿ ಸ್ವಾಮ್ಯದ BSNL ಹಿಂದೆ ಬಿದ್ದಿಲ್ಲ. ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್‌ವೊಂದನ್ನು BSNL ಬಿಡುಗಡೆ ಮಾಡಿದೆ. ಅಭಿನಂದನ್ ಹೆಸರಿನ ಈ ಪ್ಲಾನ್ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಹೊತ್ತುಕೊಂಡು ಬಂದಿದೆ.
ಅಭಿನಂದನ್ 151 ಪ್ಲಾನ್ ಅನ್ವಯ, ₹151 ರೀಚಾರ್ಜ್ ಮಾಡಿಸಿದರೆ, ಬಳಕೆದಾರರಿಗೆ ಅನಿಯಮಿತ ಕರೆ, 24 ದಿನಗಳವರೆಗೆ ಪ್ರತಿನಿತ್ಯ 100 SMS ಲಭ್ಯವಿರಲಿದೆ. ಇದೆಲ್ಲಾ ಬಿಡಿ... ಡೇಟಾ ಎಷ್ಟು ಸಿಗುತ್ತೆ ಹೇಳಿ ಎಂಬೋದು ನಿಮ್ಮ ಪ್ರಶ್ನೆಯಲ್ವಾ? ಅಭಿನಂದನ್ ಪ್ಲಾನ್‌ನಲ್ಲಿ ಪ್ರತಿದಿನ 1GB ಡೇಟಾ ಕೂಡಾ ಸಿಗಲಿದೆ!
ಇದನ್ನೂ ಓದಿ | ಗಮನಿಸಿ.. BSNLನ ಪ್ರಮುಖ ಎರಡು ಪ್ಲ್ಯಾನ್ ಸ್ಥಗಿತ
ದೇಶಾದ್ಯಂತ BSNLನ ಎಲ್ಲಾ ವಲಯಗಳಲ್ಲಿ ಈ ಪ್ಲಾನ್ ಲಭ್ಯವಿದ್ದು, ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಅನಿಯಮಿತ ಕರೆ, STD ಮತ್ತು ರೋಮಿಂಗ್ ಕಾಲ್ ಸೌಲಭ್ಯ ಲಭ್ಯವಿದೆ.
ಅಂದ ಹಾಗೆ, ಈ ಅಭಿನಂದನ್ ಪ್ಲಾನ್ 180 ದಿವಸಗಳ ವ್ಯಾಲಿಡಿಟಿ ಹೊಂದಿದೆಯಾದರೂ, ಆಫರ್‌ಗಳು 24 ದಿನಗಳಿಗೆ ಮಾತ್ರ ಸೀಮಿತ. ಬಳಿಕ ನೀವು ಮತ್ತೆ ₹151 ರೀಚಾರ್ಜ್ ಮಾಡಿಸಿಕೊಳ್ಳಬೇಕು.