ಮಿತಿ ಮೀರಿ ಫಾಸ್ಟ್ ಫುಡ್ ತಿಂತೀರಾ..?ನಿಮ್ಮನ್ನ ಕಂಟ್ರೋಲ್ ಮಾಡಲು ಆಗುತ್ತಿಲ್ಲವೇ.? ಹಾಗಾದ್ರೆ ನಿಮ್ಮನ್ನು ಕಂಟ್ರೋಲ್ ಮಾಡೋಕೆ ಇಲ್ಲೊಬ್ಬರಿದ್ದಾರೆ.
ಬೆಂಗಳೂರು (ಜೂ.17) : ನೀವು ತೂಕ ಇಳಿಸಿಕೊಳ್ಳಬೇಕೆ. ಹೆಚ್ಚು ಆಹಾರ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆಯಾ. ಇನ್ನುಮುಂದೆ ಇದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಇದಕ್ಕೊಂದು ಪರಿಹಾರ ಇಲ್ಲಿದೆ.
ಇ ಕಾಮರ್ಸ್ ಕ್ಷೇತ್ರದ ದೈತ್ಯ ಕಂಪನಿ ಅಮೆಜಾನ್ ಬ್ರೇಸ್ ಲೆಟ್ ಒಂದನ್ನು ಮಾರಾಟ ಮಾಡುತ್ತಿದೆ. ನೀವು ಫಾಸ್ಟ್ ಫುಡ್ ಸೇವನೆ ಮಾಡುತ್ತಿರುವಾಗ ಅದರ ಮಿತಿ ಮೀರಿದಾಗ ಈ ಬೆಲ್ಟ್ ಎಚ್ಚರಿಸುತ್ತದೆ. ಇದರಿಂದ ವಿದ್ಯುತ್ ಶಾಕ್ ಹೊಡೆಯುತ್ತದೆ.
ಫಾಸ್ಟ್ ಫುಡ್ ಸೇವನೆಯನ್ನು ಈ ಮೂಲಕ ಬೆಲ್ಟ್ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಬರುವ ಆ್ಯಪ್ ಕೂಡ ಬಳಕೆ ಮಾಡಲು ಅವಕಾಶ ಇದ್ದು, ಇದನ್ನು ಕುಟಂಬಸ್ಥರು ಡೌನ್ ಲೋಡ್ ಮಾಡಿಕೊಳ್ಳಬಹುದು. ಆಗ ಅವರು ಸೇವಿಸಿದ ಆಹಾರದ ಕ್ಯಾಲೋರಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಸೇವಿಸುತ್ತಿರುವ ಕ್ಯಾಲೋರಿ ಹೆಚ್ಚಾಗುತಿದ್ದಂತೆ ಅಲರ್ಟ್ ಮಾಡುತ್ತದೆ.
ಕೇವಲ ಆಹಾರ ಸೇವನೆಗೆ ಮಾತ್ರವಲ್ಲದೇ ಈ ಬೆಲ್ಟ್ ಬಳಕೆಯು ನಿಮ್ಮ ಇಂಟರ್ನೆಟ್ ಬಳಕೆ, ಟಿ ವಿ ವೀಕ್ಷಣೆ, ವಿಡಿಯೋ ಗೇಮ್ ಮೇಲೆಯೂ ನಿಗಾ ಇರಿಸುತ್ತದೆ. ಆಗಲೂ ಮಿತಿ ಮೀರಿದೆ ಎಂದಾಗ ಎಚ್ಚರಿಕೆ ನಿಡುತ್ತದೆ.
ಈಗಾಗಲೇ ಕೆಲ ಬಳಕೆದಾರರು ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದು, ಇದರಿಂದ ಅವರ ಡಯೆಟ್ ಮೇಲೆ ಸಾಕಷ್ಟು ನಿಯಂತ್ರಣ ತಂದಿರುವುದಾಗಿ ಹೇಳಿದ್ದಾರೆ. ಆದರೆ ಕೆಲವರಿಂದ ಈ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಇನ್ನು ಈ ಡಿವೈಸ್ ಬೆಲೆ 13,900 ರು.ಗಳಾಗಿದೆ.