ಒಂದೇ ರೀಚಾರ್ಜ್ ನಲ್ಲಿ ಎರಡೆರಡು ಲಾಭ! ‘ಏರ್‌ಟೆಲ್ ಥ್ಯಾಂಕ್ಸ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದರ ಮೂಲಕ ಹೊಸ ಹೊಸ ಸೌಲಭ್ಯ ಎಂಜಾಯ್ ಮಾಡೋ ಅವಕಾಶ!
Airtel ಇಂಡಿಯಾ ಈಗ ‘ಏರ್‌ಟೆಲ್ ಥ್ಯಾಂಕ್ಸ್’ ಎನ್ನುವ ಹೊಸ ಪ್ಲ್ಯಾನ್ ತರುತ್ತಿದೆ. ಹೊಸ ಪ್ಲಾನ್ ನಲ್ಲಿ Airtel ಪ್ರೀ ಪೇಯ್ಡ್ ಗ್ರಾಹಕರಿಗೆ ಡಬ್ಬಲ್ ಬೆನಿಫಿಟ್ ನೀಡಲು ಮುಂದಾಗಿದೆ.
1. 299 ರು. ರೀಚಾರ್ಜ್ ನೊಂದಿಗೆ 28 ದಿನಗಳ ಅನ್ ಲಿಮಿಟೆಡ್ ಕಾಲ್ ಸರ್ವಿಸ್ ಮತ್ತು ದಿನಕ್ಕೆ 100 ಎಸ್‌ಎಂಎಸ್.
2. ದಿನಕ್ಕೆ ಸಿಗುವ 2.5 ಜಿಬಿ ಇಂಟರ್‌ನೆಟ್‌ನೊಂದಿಗೆ ಅಮೆಜಾನ್ ಪ್ರೈಮ್‌ನ ಸೌಲಭ್ಯಗಳ ಬಳಕೆ.
ಇದನ್ನೂ ಓದಿ: 2000 ರು. ನೀಡಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್ ನಿಮ್ಮದಾಗಿಸಿಕೊಳ್ಳಿ!
ಹೀಗೆ ಒಂದೇ ರೀಚಾರ್ಜ್ ನಲ್ಲಿ ಎರಡು ಲಾಭವನ್ನು ಗಳಿಸಿಕೊಳ್ಳುವಂತಹ ಯೋಜನೆಯನ್ನು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ತರುತ್ತಿರುವುದು Airtel.
ಅಮೆಜಾನ್ ಪ್ರೈಮ್‌ನೊಂದಿಗೆ ಈಗಾಗಲೇ ಒಪ್ಪಂದ ಆಗಿದ್ದು, ಅದರಂತೆ 299 ರು. ರೀಚಾರ್ಜ್ ಮಾಡಿಸಿದ ಪ್ರೀ ಪೇಯ್ಡ್ ಗ್ರಾಹಕರು ‘ಏರ್‌ಟೆಲ್ ಥ್ಯಾಂಕ್ಸ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದರ ಮೂಲಕ ಪ್ರೈಮ್ ಮೂವಿ, ಪ್ರೈಮ್ ಮ್ಯೂಸಿಕ್, ಪ್ರೈಮ್ ರೀಡಿಂಗ್ ಮೊದಲಾದ ಸೌಲಭ್ಯಗಳನ್ನು ಎಂಜಾಯ್ ಮಾಡಬಹುದು.