ವಿಜ್ಞಾನಿಗಳ ನಿದ್ದೆಗಡೆಸಿದ್ದ ಸ್ಮೈಲಿಂಗ್ ಎಮೋಜಿ ರಹಸ್ಯ ಬಯಲು! ಬ್ರಹ್ಮಾಂಡದಲ್ಲಿ ನಾವು ಬಳಸುವ ಸ್ಮೈಲಿಂಗ್ ಎಮೋಜಿ ಹುಟ್ಟಿದ್ದೇಗೆ?! ಎರಡು ಗ್ಯಾಲಕ್ಸಿಗಳ ಉಗಮ ಮತ್ತು ಬೆಳಕಿನ ಪ್ರತಿಫಲನ ಎಂದ ನಾಸಾ!
ಒಂದಕ್ಕೊಂದು ಸುರುಳಿಯಾಕಾರದಲ್ಲಿ ಸುತ್ತುತ್ತಿರುವ ಪುಟ್ಟ ಗ್ಯಾಲಕ್ಸಿಗಳು
ವಾಷಿಂಗ್ಟನ್(ನ.6): ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.
ಹೌದು, ಇತ್ತೀಚಿಗೆ ಹಬಲ್ SDSS J0952+3434 ಎಂಬ ಗ್ಯಾಲಕ್ಸಿ ವಲಯದ ಫೋಟೋವೊಂದನ್ನು ಕ್ಲಿಕ್ಕಿಸಿತ್ತು. ಇದರಲ್ಲಿ ನಾವು ಬಳಸುವ ಸ್ಲೈಲಿಂಗ್ ಎಮೋಜಿ ರೀತಿಯದ್ದೇ ಚಿತ್ರವೊಂದು ಕಾಣಿಸಿಕೊಂಡಿತ್ತು.
undefined
ಈ ಫೋಟೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಗೆಯ ಚರ್ಚೆಗಳು ನಡೆಯತೊಡಗಿದವು. ಆಗಸದಲ್ಲಿ ಸ್ಮೈಲಿಂಗ್ ಎಮೋಜಿ ಕಾಣಿಸಿಕೊಂಡಿದ್ದೇಗೆ ಎಂದು ಎಲ್ಲರೂ ಪ್ರಶ್ನಿಸಲಾರಂಭಿಸಿದರು.
ಸದ್ಯ ಈ ಸ್ಮೈಲಿಂಗ್ ಎಮೋಜಿ ರಹಸ್ಯ ಬಿಚ್ಚಿಟ್ಟಿರುವ ನಾಸಾ, SDSS J0952+3434 ಎಂಬ ಗ್ಯಾಲಕ್ಸಿ ವಲಯದಲ್ಲಿ ಎರಡು ಹೊಸ ಗ್ಯಾಲಕ್ಸಿಗಳು ಜನ್ಮ ತಾಳುತ್ತಿದ್ದು, ಒಂದರ ಪಕ್ಕ ಒಂದು ಸುರುಳಿಯಂತೆ ಸುತ್ತುತ್ತಿದೆ. ಇದು ನೋಡಲು ಮಾನವನ ಕಣ್ಣುಗಳಂತಿದ್ದು, ಅದರ ಕೆಳಗಡೆ ಅಗಾಧವಾದ ಬೆಳಕಿನ ಕಿರಣಗಳು ಹರಡಿದ ಪರಿಣಾಮ ನಗುತ್ತಿರುವ ರೀತಿ ಭಾಸವಾಗುತ್ತಿದೆ ಎಂದು ನಾಸಾ ಹೇಳಿದೆ.
ಸಾಮಾನ್ಯವಾಗಿ ಗ್ಯಾಲಕ್ಸಿಗಳ ಉಗಮದ ಸಂದರ್ಭದಲ್ಲಿ ಅಗಧವಾದ ಅನಿಲ ಹೊರಸೂಸುತ್ತದೆ. ಅದರಂತೆ ಬಾಲ್ಯಾವಸ್ಥೆಯಲ್ಲಿರುವ ಈ ಗ್ಯಾಲಕ್ಸಿಗಳು ಒಂದುಕ್ಕೊಂದು ಸುರುಳಿಯಾಕಾರದಲ್ಲಿ ಸುತ್ತುತ್ತಿವೆ. ಇದೇ ಕಾರಣಕ್ಕೆ ಮಾನವನ ಕಣ್ಣುಗಳ ರೂಪದಲ್ಲಿ ಅವು ಗೋಚರವಾಗುತ್ತಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.