ಒಂದಲ್ಲ ಎರಡಲ್ಲ... ಬರೋಬ್ಬರಿ 5 ಕ್ಯಾಮೆರಾ ಹೊಂದಿರುವ ನೋಕಿಯಾ ಹೊಸ ಫೋನ್ ಮಾರುಕಟ್ಟೆಗೆ. ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ...
ಬೆಂಗಳೂರು (ಜು.10): Nokia 9 PureView ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದನ್ನು ಸುವರ್ಣನ್ಯೂಸ್.ಕಾಂ ಕಳೆದ ವಾರ ವರದಿ ಮಾಡಿತ್ತು.
ಹಿಂಬದಿ ಪ್ಯಾನೆಲ್‌ನಲ್ಲಿ 5 ಕ್ಯಾಮೆರಾ ಹೊಂದಿರುವ ಈ ವಿಶಿಷ್ಟ ಫೋನ್ ಕೊನೆಗೂ ಭಾರತದ ಮೊಬೈಲ್ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ.
undefined
Nokia ಕಂಪನಿಯ ಈ ಹೊಸ ಫೋನ್ 6 ಇಂಚಿನ ಪರದೆ, 18.5:9 ಆ್ಯಸ್ಪೆಕ್ಟ್ ರೇಶ್ಯೋ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದೆ.
ಇದನ್ನೂ ಓದಿ | ಅನ್‌ಇನ್ಸ್ಟಾಲ್ ಮಾಡದೇ WhatsAppನಿಂದ ಮಾಯವಾಗುವ (ಕು)ತಂತ್ರ ಇದು!
6GB RAM, 128GB ಸ್ಟೋರೆಜ್ ಇರುವ Nokia 9 PureView ಫೋನ್, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿರುವ 3,320mAh ಬ್ಯಾಟರಿಯನ್ನು ಹೊಂದಿದೆ.
ಹಿಂಬದಿಯಲ್ಲಿ ಬರೋಬ್ಬರಿ 5 ಕ್ಯಾಮೆರಾ ಹಾಗೂ ಸೆಲ್ಫಿ ಪ್ರಿಯರಿಗೆ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರುವುದು Nokia 9 PureViewನ ವಿಶೇಷತೆ.
ಕಳೆದ ಫೆಬ್ರವರಿಯಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019ರಲ್ಲಿ ಇದನ್ನು ಮೊದಲ ಬಾರಿಗೆ ಪ್ರದರ್ಶನಕ್ಕಿಡಲಾಗಿತ್ತು.
ಲಭ್ಯತೆ:
ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಇಂದಿನಿಂದ (ಜು.10) ಫ್ಲಿಪ್‌ಕಾರ್ಟ್ ಮತ್ತು ನೋಕಿಯಾ ವೆಬ್‌ಸೈಟ್‌ನಲ್ಲಿ Nokia 9 PureView ಮಾರಾಟ ಆರಂಭವಾಗಿದೆ. ಆಫ್‌ಲೈನ್ ಗ್ರಾಹಕರಿಗೆ ಜು.17ರಿಂದ ಮೊಬೈಲ್ ಸ್ಟೋರ್‌ಗಳಲ್ಲಿ ಈ ಫೋನ್ ಲಭ್ಯವಾಗಲಿದೆ.
ಬೆಲೆ?
ಮಿಡ್‌ನೈಟ್ ಬ್ಲೂ ಕಲರ್‌ನಲ್ಲಿ ಲಭ್ಯವಿರುವ Nokia 9 PureView ಬೆಲೆ ಭಾರತದಲ್ಲಿ ಬರೋಬ್ಬರಿ 49,999 ರೂಪಾಯಿ.