ವಾಟ್ಸಪ್...ವಾಟ್ಸಪ್... ವಾಟ್ಸಪ್.... ಸಾಕಾಗಿ ಹೋಯ್ತು ಎಂದು ಗೊಣಗದೇ ಇರುವವರು ಕಡಿಮೆ. ಕಳುಹಿಸಿದ ಮೆಸೇಜನ್ನೇ ಎಲ್ಲರೂ ಕಳಿಸೋದು, ಅದೇ ಮೆಸೇಜನ್ನು ಎಲ್ಲರೂ ಎಲ್ಲಾ ಗ್ರೂಪ್‌ಗಳಲ್ಲಿ ಹಾಕೋದು... ಕೆಲವು ‘ನಿಶಾಚರಿ’ ಜಾತಿಯ ಗೆಳೆಯರಿಗಂತೂ ದಿನ-ರಾತ್ರಿ ಎಂಬುವುದರ ಪರಿವೆಯೂ ಇರಲ್ಲ! ಮೆಸೇಜ್ ನೋಡಿ ನೋಡಿ, ಸಾಕಾಗಿದೆಯಾ?
ಸಂವಹನ ಕ್ಷೇತ್ರದಲ್ಲಿ ವಾಟ್ಸಪ್ ಒಂದು ವರ; ಆದರೆ ಹಲವರಿಗೆ ಅದು ಕೆಲವೊಮ್ಮೆ ಶಾಪದಂತೆ ಅನಿಸುವುದೂ ಇದೆ. ಬಾಯಲ್ಲಿಟ್ಟ ಬಿಸಿ ತುಪ್ಪದಂತೆ ಅದನ್ನು ನುಂಗುವ ಹಾಗೂ ಇಲ್ಲ, ಉಗುಳುವ ಹಾಗೂ ಇಲ್ಲ! ಎಂಬ ಪರಿಸ್ಥಿತಿಗೆ ಬಳಕೆದಾರರನ್ನು ನೂಕಿದೆ ಈ ವಾಟ್ಸಪ್.
ವಾಟ್ಸಪ್‌ನದ್ದು ಸ್ವಲ್ಪ ವಿಚಿತ್ರ ವ್ಯವಸ್ಥೆ. ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್ಬುಕ್, ಟ್ವಿಟ್ಟರ್‌ಗಳಂತೆ ಅಲ್ಲ ಇದು. ಬೇಕಾದಾಗ ಸೈನ್-ಇನ್, ಬೇಡವಾದಾಗ ಸೈನ್ -ಔಟ್ ಮಾಡೋ ಹಾಗಿಲ್ಲ. ಬೇಕಂದ್ರೆ ಆ್ಯಪ್ ಇನ್ಸ್ಟಾಲ್ ಮಾಡ್ಕೋಬೇಕು, ಬೇಡಾ ಅಂದ್ರೆ ಡಿಲೀಟ್ ಮಾಡ್ಬೇಕು ಅಷ್ಟೇ! ಆದರೆ ಇನ್ಸ್ಟಾಲ್- ಅನ್ ಇನ್ಸ್ಟಾಲ್- ರೀ ಇನ್ಸ್ಟಾಲ್ ಅಂದುಕೊಂಡಂತೆ ಸುಲಭವೂ ಅಲ್ಲ, ಆದ್ರೆ ಬೇರೆ ಆಪ್ಷನೇ ಇಲ್ಲ.
undefined
ನೀವು ಮೆಸೇಜ್ ಓದಿದ್ದೀರಿ ಎಂದು ತಿಳಿಸುವ ನೀಲಿ ಟಿಕ್ ಮಾರ್ಕನ್ನು ಡಿಸೇಬಲ್ ಮಾಡ್ಬಹುದು, ಆದರೆ ನೀವು ಆನ್‌ಲೈನ್ ಇರೋದು ಬೇರೆಯವರಿಗೆ ಗೊತ್ತಾಗೋದು ಕಷ್ಟವಲ್ಲ.
ಹಾಗಾದ್ರೆ ವಾಟ್ಸಪ್‌ನಲ್ಲಿ ಇದ್ದೂ, ಇಲ್ಲದಂಗೆ ಇರೋದು ಹೇಗೆ? ಇದಕ್ಕೆ ನೇರವಾದ ಅಥವಾ ಒಂದು ಬಟನ್ ಪರಿಹಾರ ಇಲ್ಲ. ಅದಾಗ್ಯೂ ಕೆಲವೊಂದು ಪ್ರಯತ್ನಗಳನ್ನು ಮಾಡಬಹುದು.
ಇದನ್ನೂ ಓದಿ | ಇನ್ಮುಂದೆ 2 ಫೋನ್‌ಗಳಿಗೆ WhatsApp ಸಪೋರ್ಟ್ ಇಲ್ಲ! ನಿಮ್ದು ಯಾವುದು?
ಒಂದು, ನೋಟಿಫಿಕೇಶನ್ ಸೌಂಡನ್ನು ಆಫ್ ಮಾಡಿಟ್ಟುಬಿಡಿ. ಒಂದು ವೇಳೆ ನಿಮ್ಮ ಪೋನ್‌ನಲ್ಲಿ ನೋಟಿಫಿಕೇಶನ್ ಸೈಲೆಂಟ್ ಮಾಡೋ ಆಯ್ಕೆನೇ ಇಲ್ಲ ಎಂದಾದಲ್ಲಿ, ಆಡಿಯೋ ರೆಕಾರ್ಡರ್ ಮೂಲಕ ನಿಶಬ್ಧವನ್ನೇ ರೆಕಾರ್ಡ್ ಮಾಡಿಕೊಳ್ಳಿ, ಬಳಿಕ ಅದನ್ನೇ ನೋಟಿಫಿಕೇಶನ್ ಸೌಂಡ್‌ಗೆ ಹಾಕಿಕೊಳ್ಳಿ. ಹೆಂಗಿದೆ ಐಡಿಯಾ?
ಎರಡು, ಹೊಸ ಮೆಸೇಜ್‌ಗಳಿಗೆ ನೊಟಿಫಿಕೇಶನನ್ನೇ ಡಿಸೇಬಲ್ ಮಾಡ್ಬಿಡಿ. ಫೋನ್ ಸೆಟ್ಟಿಂಗ್‌ಗೆ ಹೋಗಿ ಆ್ಯಪ್ ಪಟ್ಟಿಯನ್ನು ಓಪನ್ ಮಾಡಿ. ವಾಟ್ಸಪನ್ನು ಆಯ್ದುಕೊಳ್ಳಿ, ಬಳಿಕ ಅಲ್ಲಿ ನೋಟಿಫಿಕೇಶನ್ ಡಿಸೇಬಲ್ ಮಾಡಿ. ಈ ರೀತಿ ಮಾಡೋದ್ರಿಂದ, ನೀವು ವಾಟ್ಸಪ್ ಓಪನ್ ಮಾಡಿ ನೋಡದೇ ಇದ್ರೆ ಮೆಸೇಜ್ ಬಂದಿರೋದು ನಿಮ್ಮ ಗಮನಕ್ಕೆ ಬರಲ್ಲ.
ನಿಮ್ಮ ಫೋನ್‌ನಲ್ಲಿ ನೋಟಿಫಿಕೇಶನ್ ಲೈಟ್ ಸೌಲಭ್ಯ ಇದ್ರೆ ಅದನ್ನೂ ಡಿಸೇಬಲ್ ಮಾಡಿ. ವಾಟ್ಸಪ್ ನೋಟಿಫಿಕೇಶನ್ ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಲಭ್ಯವಿರುತ್ತದೆ.
ನಿಮ್ಮ ಫೋನಿನ ಹೋಮ್ ಸ್ಕ್ರೀನಿನಿಂದ ವಾಟ್ಸಪ್ ಶಾರ್ಟ್‌ಕಟ್‌ನ್ನು ತೆಗೆದು ಹಾಕಿ. ಫೋನ್ ತೆರೆದಾಗ ಅದು ಕಾಣಿಸದೇ ಇದ್ದರೇ, ಅದರ ಜೊತೆ ಎಂಗೇಜ್ ಆಗೋದು ಕೂಡಾ ಸಹಜವಾಗಿ ಕಡಿಮೆಯಾಗುತ್ತದೆ ಅಲ್ವಾ?
ಇದನ್ನೂ ಓದಿ | WhatsApp ಆಗಲಿದೆ ಇನ್ನಷ್ಟು ಇಂಟರೆಸ್ಟಿಂಗ್: ಬರಲಿವೆ ಈ 5 ಫೀಚರ್ಸ್!
ವಾಟ್ಸಪ್ ನಿಮ್ಮ ಇಂಟರ್ನೆಟ್ ಡೇಟಾ ಸಂಪರ್ಕವನ್ನು ಪಡೆದುಕೊಳ್ಳುವುದನ್ನು ತಪ್ಪಿಸಿ. ಫೋನ್ ಸೆಟ್ಟಿಂಗಿಗೆ ಹೋಗಿ, ಅಲ್ಲಿ ಅಪ್ಲಿಕೇಶನ್ ಮೆನುಗೆ ಹೋಗಿ, ವಾಟ್ಸಪ್ ಆಯ್ದುಕೊಳ್ಳಿ, ಬಳಿಕ ಫೋರ್ಸ್ ಸ್ಟಾಪ್ ಒತ್ತಿ ಅಷ್ಟೇ.
ಫೋರ್ಸ್ ಸ್ಟಾಪ್ ಮಾಡಿದ ಬಳಿಕ ನೀವು ವಾಟ್ಸಪ್ ತೆರೆಯದೇ ಇದ್ದರೆ, ನಿಮಗೆ ಕಳುಹಿಸಲಾದ ಮೆಸೇಜ್‌ಗಳ ಮೇಲೆ ಡಬಲ್ ಟಿಕ್ ಕೂಡಾ ಕಾಣಿಸಿಕೊಳ್ಳಲ್ಲ.
ಬಳಿಕ ಬ್ಯಾಗ್ರೌಂಡ್ ಡೇಟಾವನ್ನು ಡಿಸೇಬಲ್ ಮಾಡಬಹುದು. ನಿಮ್ಮ ಡೇಟಾಗಳನ್ನು ಪಡೆಯಲು ವಾಟ್ಸಪ್‌ಗೆ ನೀಡಿರುವ ಅನುಮತಿಗಳನ್ನು ಹಿಂಪಡೆಯಿರಿ. ಆ ಮೂಲಕ ವಾಟ್ಸಪ್‌ನಲ್ಲಿ ಇದ್ದೂ, ಮೆಸೇಜ್‌ಗಳನ್ನು ಸ್ವೀಕರಿಸುತ್ತಲೂ, ಅದನ್ನು ನಿರ್ಲಕ್ಷಿಸುವ ಮೂಲಕ ವಾಟ್ಸಪ್‌ನಿಂದ ಮಾಯವಾಗಬಹುದು!