ಬಹುನಿರೀಕ್ಷೆಯ Nokia 8.1 ಬಿಡುಗಡೆ; ಹೊಸ OS ಬಳಸಿರುವ ಮೊದಲ ಫೋನ್!

By Web Desk  |  First Published Dec 9, 2018, 5:08 PM IST

Nokia 8.1 ಮಾರುಕಟ್ಟೆಗೆ ಎಂಟ್ರಿ ನೀಡಿದೆ.  Android 9.0 Pie ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದಾಗಿದೆ!


ಬಹುನಿರೀಕ್ಷಿತ Nokia 8.1ನ್ನು HMD Global ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಟ್ಟಿದೆ.  ಈ ತಿಂಗಳಿನಾಂತ್ಯದಲ್ಲಿ ಭಾರತದ ಮಾರುಕಟ್ಟೆಯಲ್ಲೂ  Nokia 8.1 ಫೋನ್ ಲಭ್ಯವಾಗಲಿದೆ.   Nokia 8.1 ಅನ್ನು, ಈ ವರ್ಷಾರಂಭದಲ್ಲಿ ಬಿಡುಗಡೆಯಾದ Nokia 7.1 ಫೋನಿನ  ಮುಂದುವರಿದ ಭಾಗವೆನ್ನಬಹುದು. 

Android 9.0 Pie  ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದೆಂದು ಕಂಪನಿಯು ಹೇಳಿದೆ. 

Tap to resize

Latest Videos

Nokia 8.1 ಕೂಡಾ ನಾಚ್ಡ್ ಡಿಸ್ಪ್ಲೇ ಹೊಂದಿದ್ದು, ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ. Nokia 7.1 ಗೆ ಹೋಲಿಸಿದರೆ, Nokia 8.1 ಹೆಚ್ಚು ಕಾಂಪ್ಯಾಕ್ಟ್ ಆಗಿದ್ದು, ಒಂದೇ ಕೈಯಲ್ಲಿ ಬಳಸಬಹುದಾಗಿದೆ.

ಇದನ್ನೂ ಓದಿ: ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ Xiaomi! ಹೇಗಿದೆ ನೋಡಿ...

Nokia 8.1 ಫೀಚರ್ ಗಳು

  • ಡಿಸ್ಪ್ಲೇ : 6.1-ಇಂಚು 2280x1080 ಪಿಕ್ಸೆಲ್ಸ್
  • ಆಪರೇಟಿಂಗ್ ಸಿಸ್ಟಮ್ (OS) : Android 9.0 Pie
  • ಪ್ರೊಸೆಸರ್ : Octa-core Snapdragon 710
  • RAM: 4GB
  • ಸ್ಟೋರೆಜ್:  64GB
  • ಹಿಂಬದಿ ಕ್ಯಾಮೆರಾ: 12MP + 13MP
  • ಮುಂಬದಿ ಕ್ಯಾಮೆರಾ: 20MP
  • ಬ್ಯಾಟರಿ: 3500mAh

ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಸ್ಟೋರೆಜನ್ನು 400 GB ವರೆಗೂ ವಿಸ್ತರಿಸಬಹುದಾಗಿದೆ. ಕಂಪನಿಯು ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲವಾದರೂ, ₹25,000-₹ 30,000 ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

click me!