ವಾಟ್ಸಪ್ ಖಾತೆ ಅಳಿಸಿದರೆ ಹಳೆ ಮಾಹಿತಿ ಸಿಗದು

By Internet DeskFirst Published Sep 21, 2016, 6:30 PM IST
Highlights

ನವದೆಹಲಿ(ಸೆ.21): ಬಳಕೆದಾರರು ತಮ್ಮ ಖಾತೆಯನ್ನು ಅಳಿಸಿ ಹಾಕಿದಲ್ಲಿ, ಮತ್ತೆ ಅವರ ಮಾತುಕತೆಯ ಮಾಹಿತಿಯನ್ನು ತಮ್ಮ ಸರ್ವರ್‌ನಿಂದ ಮರಳಿ ಗಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಸಾಮಾಜಿಕ ಜಾಲತಾಣ ವಾಟ್ಸಪ್‌ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಜಿ ರೋಹಿಣಿ ಮತ್ತು ನ್ಯಾಯಮೂರ್ತಿ ಸಂಗೀತಾ ಧಿಂಗ್ರ ಸೆಹಗಲ್‌ ನ್ಯಾಯಪೀಠವು ಈ ಬಗ್ಗೆ ವಿವರಣೆ ಕೇಳಿದ್ದ ಬಗ್ಗೆ ವಾಟ್ಸಪ್‌ ಕೋರ್ಟ್‌ಗೆ ಅಫಿದಾವಿತ ಸಲ್ಲಿಸಿ ಮಾಹಿತಿ ನೀಡಿದೆ. ವಾಟ್ಸಪ್‌ ಕೋರ್ಟ್‌ಗೆ ನೀಡಿರುವ ಮಾಹಿತಿಯನ್ನು ಅರ್ಜಿದಾರರು ವಿರೋಧಿಸಿದರು.

ವಾಟ್ಸಪ್‌ನ ಹೊಸ ನೀತಿಯನ್ವಯ, ಬಳಕೆದಾರರ ಮಾಹಿತಿಯನ್ನು ದೀರ್ಘ ಕಾಲ ಉಳಿಸಿಕೊಳ್ಳಬಹುದು ಎನ್ನಲಾಗಿದೆ. ಆದರೆ ಅಫಿದಾವಿತ್‌ನಲ್ಲಿ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲವೆಂದಿದೆ. ಹೀಗಾಗಿ ಈ ವಿಚಾರದಲ್ಲಿ ಅದು ದ್ವಂದ್ವ ನೀತಿ ಅನುಸರಿಸಿದೆ ಎಂದು ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪ್ರತಿಭಾ ಎಂ ಸಿಂಗ್‌ ವಾದಿಸಿದ್ದಾರೆ. ಎರಡೂ ಕಡೆಗಳ ವಾದವನ್ನು ಆಲಿಸಿದ ಕೋರ್ಟ್‌, ತೀರ್ಪು ಸೆ. 23ರಂದು ನೀಡುವುದಾಗಿ ಘೋಷಿಸಿತು.

click me!