ನಿಮ್ಮ ಬಳಿ ಈ ಪೋನ್'ಗಳು ಇದ್ರೆ ಜಿಯೋ ಸಿಮ್ ತಗೊಂಡ್ರೂ ವೆಸ್ಟ್... ಇದು ಬೇರೆ ಸಿಮ್'ಗಳ ರೀತಿಯಲ್ಲ!

By Internet DeskFirst Published Sep 21, 2016, 7:23 AM IST
Highlights

ಬೆಂಗಳೂರು(ಸೆ.21): ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಟೆಲಿಕಾಮ್ ಕಂಪನಿಗಳ ನಿದ್ದೆಗೇಡಿಸಿದೆ. ಅದೇ ಮತ್ತೊಂದು ಕಡೆ ಗ್ರಾಹಕನ ಡೇಟಾ ಹಸಿವನ್ನು ಹೆಚ್ಚಿಸಿದೆ.

ತಿಂಗಳಿಗೆ ದುಬಾರಿಯ 3G ಯನ್ನು ಒಂದು GB ಬಳಸಲು ಹಿಂದೆಟ್ಟು ಹಾಕುತ್ತಿದ್ದವನಿಗೆ ಅನಿಯಮಿತ 4G ಸೇವೆಯ ಆಸೆ ತೋರಿಸಿದೆ. ಹೀಗಾಗಿ ಜಿಯೋ ಹಿಂದೆ ಗ್ರಾಹಕ ಸಾಲುಗಟ್ಟಿ ನಿಂತಿದ್ದಾನೆ.  

ಉಚಿತ ಕರೆ, ಉಚಿತ ಡೇಟಾ ನೋಡಿದ ಗ್ರಾಹಕ ಜಿಯೋ ಸಿಮ್ ಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಆದರೆ ಇನ್ನು ಹಲವರಿಗೆ ಕೆಲವು ವಿಚಾರಗಳ ಬಗ್ಗೆ ಮಾಹಿತಿಯೇ ಇಲ್ಲ. ಸಾಮಾನ್ಯ ಸಿಮ್ ನಂತೆ ಜಿಯೋ ಬಳಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಎಲ್ಲರು ಅರಿಯಬೇಕಾಗಿದೆ. 

ಜಿಯೋ ಸಿಮ್ ತೆಗೆದುಕೊಂಡ ಕೆಲವರು ಮಾತ್ರ ಸಿಮ್ ಬಳಸುತ್ತಿದ್ದರೆ, ಇನ್ನೂ ಹಲವರು ನಮ್ಮ ಪೋನ್ ನಲ್ಲಿ ಜಿಯೋ ಬಳಕೆಯಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಅದಕ್ಕೇ ಉತ್ತರ ಇಲ್ಲಿದೆ. 

ಯಾವ ಗ್ರಾಹಕರಿಗೆ ಜಿಯೋ ಸಿಮ್ ವೆಸ್ಟ್: 
- ನಿಮ್ಮ ಬಳಿ ಫಿಚರ್ ಪೋನ್ ಇದ್ರೆ ಖಂಡಿತ ಜಿಯೋ ಸಿಮ್ ತಗೋ ಬೇಡಿ. ನಿಮ್ಮ ಪೋನ್ ನಲ್ಲಿ ಜಿಯೋ ಬಳಸಲು ಸಾಧ್ಯವಾಗುವುದಿಲ್ಲ.

- ನಿಮ್ಮ ಬಳಿ 2G ಮತ್ತು 3Gಗೆ ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಇದ್ದರು ಸಹ ಅದರಲ್ಲಿ ಜಿಯೋ ಸಿಮ್ ಕೆಲಸ ಮಾಡಲ್ಲ

- ಇದಲ್ಲದೇ 2 ವರ್ಷದ ಹಳೇಯ ಟಾಪ್ ಎಂಡ್ ಸ್ಮಾರ್ಟ್ ಪೋನ್ ಇದ್ದರು ಜಿಯೋ ಸಿಮ್ ಬಳಸಲಾಗುವುದಿಲ್ಲ. ಕಾರಣ ಈ ಪೋನ್ ಗಳು 4G ಸಪೋರ್ಟ್ ಮಾಡುವುದಿಲ್ಲ. 

- ನಿಮ್ಮ ಬಳಿ ಒಂದೇ ಪೋನ್ ಇದ್ದು, ಅದು ಸಿಂಗಲ್ ಸಿಮ್ ಪೋನ್ ಆಗಿದ್ದು, ನಂಬರ್ ಬದಲಾಯಿಸುವ ಮನಸ್ಸು ಇಲ್ಲ ಅಂದ್ರೆ ಜಿಯೋ ಸಿಮ್ ಹಿಂದೆ ಹೋಗಲೇ ಬೇಡಿ. ಯಾಕೆ ಅಂದ್ರೆ ಪೋರ್ಟ್ ಆಗಲು ಇನ್ನು ತುಂಬ ದಿನ ಹಿಡಿಯುತ್ತದೆ. 
 

click me!