ಮೂರು ದಿನದಿಂದ ಗ್ರಾಹಕರಿಗೆ ಜಿಯೋ ಸಿಮ್ ಸಿಕ್ತಿಲ್ಲ, ಕಾರಣ ಕೇಳಿದ ಗ್ರಾಹಕರಿಗೆ ಸಿಕ್ಕ ಉತ್ತರ....?

By internet deskFirst Published Oct 10, 2016, 12:07 PM IST
Highlights

ಸಿಮ್ ಉಚಿತ ಎಂಬ ಕಾರಣಕ್ಕೆ ರಿಲಯನ್ಸ್ ಮಳಿಗೆಗಳಲ್ಲಿ ಗ್ರಾಹಕರಿಗೆ ಸರಿಯಾದ ಪ್ರತಿಕ್ರಿಯೇ ದೊರೆಯುತ್ತಿಲ್ಲ, ಮೂರು- ಮೂರು ದಿನ ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಮಿನಿ ಮಳಿಗೆ ಮುಂದೆ ಕ್ಯೂ ನಿಂತರು ಗ್ರಾಹಕರಿಗೆ ದೊರೆಯಬೇಕಿದ್ದ ಸಣ್ಣ ಗೌರವವು ಲಭ್ಯವಾಗುತ್ತಿಲ್ಲ ಎಂಬುದು ಅನೇಕರ ದೂರಾಗಿದೆ.  

ಬೆಂಗಳೂರು(ಅ.10): ಬೆಂಗಳೂರಿನ ಗ್ರಾಹಕರಿಗೆ ಮೂರು ದಿನದಿಂದ ರಿಲಯನ್ಸ್ ಮಾಲೀಕತ್ವದ ಜಿಯೋ ಸಿಮ್ ಸಿಗುತ್ತಿಲ್ಲ, ಒಂದು ಕಡೆ ಕೋಟಿಗೂ ಹೆಚ್ಚು ಗ್ರಾಹಕರನ್ನು ತಲುಪಿದ ದಾಖಲೆ ನಿರ್ಮಾಣವಾದ ಬೆನ್ನಲೇ ಸಿಮ್ ಖಾಲಿಯಾಗಿದೆ ಹಾಗೂ ಸರ್ವರ್ ಡೌನ್ ಇನ್ನೂ ಮೂರು ನಾಲ್ಕು ದಿನ ಸಿಮ್ ಸಿಗುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಸಿಮ್ ಉಚಿತ ಎಂಬ ಕಾರಣಕ್ಕೆ ರಿಲಯನ್ಸ್ ಮಳಿಗೆಗಳಲ್ಲಿ ಗ್ರಾಹಕರಿಗೆ ಸರಿಯಾದ ಪ್ರತಿಕ್ರಿಯೇ ದೊರೆಯುತ್ತಿಲ್ಲ, ಮೂರು- ಮೂರು ದಿನ ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಮಿನಿ ಮಳಿಗೆ ಮುಂದೆ ಕ್ಯೂ ನಿಂತರು ಗ್ರಾಹಕರಿಗೆ ದೊರೆಯಬೇಕಿದ್ದ ಸಣ್ಣ ಗೌರವವು ಲಭ್ಯವಾಗುತ್ತಿಲ್ಲ ಎಂಬುದು ಅನೇಕರ ದೂರಾಗಿದೆ.  

Latest Videos

ಇದಲ್ಲದೇ ಮೂರು ದಿನದಿಂದ ಸರ್ವರ್ ಡೌನ್ ಹಾಗಾಗಿ ಸಿಮ್ ಲಭ್ಯವಿಲ್ಲ ಎಂಬುದು ರಿಲಯನ್ಸ್ ಮಳಿಗೆಗಳಲ್ಲಿ ಗ್ರಾಹಕರಿಗೆ ಸಿಗುತ್ತಿರುವ ಉತ್ತರವಾಗಿದ್ದು, ಅನೇಖ ಕಡೆಗಳಲ್ಲಿ ಜಿಯೋ ಸಿಮ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದ್ದು, ಒಂದು ಸಿಮ್ ಗೆ 100 ರಿಂದ 300 ರೂ ಗೆ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರೇ ಮಾಹಿತಿ ನೀಡಿದ್ದಾರೆ. ಅನೇಕರು ದುಡ್ಡು ಕೊಟ್ಟು ಸಿಮ್ ಖರೀದಿಸಿದ್ದಾರೆ. 

click me!