ನೂತನ ಇತಿಹಾಸ ಬರೆದ ಜಿಯೋ: ಬಳಕೆದಾರರ ಸಂಖ್ಯೆ ಎಷ್ಟು ದಾಟಿದೆ ಗೊತ್ತೆ ?

Published : Oct 09, 2016, 11:33 AM ISTUpdated : Apr 11, 2018, 12:57 PM IST
ನೂತನ ಇತಿಹಾಸ ಬರೆದ ಜಿಯೋ: ಬಳಕೆದಾರರ ಸಂಖ್ಯೆ ಎಷ್ಟು ದಾಟಿದೆ ಗೊತ್ತೆ ?

ಸಾರಾಂಶ

ರಿಲಯನ್ಸ್ ಜಿಯೋ ಅತೀ ಕಡಿಮೇ ಅವಧಿಯಲ್ಲಿ 10 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದುವ ಗುರಿ ಹೊಂದಲಾಗಿದೆ. ಇಂಟರ್'ನೆಟ್  ಬಳಕೆಗಾಗಿ ಪ್ರತಿ ತಿಂಗಳು 250 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ದೇಶದಾದ್ಯಂತ ಜಿಯೋ 3100 ನಗರಗಳಲ್ಲಿ ಆಧಾರ್ ಆಧಾರಿತ ಸಿಮ್ ಆಕ್ಟಿವೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ

ಮುಂಬೈ(ಅ.9): ಟೆಲಿಕಾಂ ಇತಿಹಾಸದಲ್ಲಿ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ಕಾರ್ಯಚಾಲನೆ ಮಾಡಿದ ಒಂದೇ ತಿಂಗಳಲ್ಲಿ 1.60 ಕೋಟಿ ಗ್ರಾಹಕರು ರಿಜಿಯೋದ ಬಳಕೆದಾರರಾಗಿದ್ದಾರೆ.

ಟೆಲಿಕಾಂ ರಂಗದಲ್ಲಿ ಹೊಸ ಭರವಸೆಯೊಂದಿಗೆ ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಕಾಲಿಟ್ಟ ರಿಜಿಯೋ ಗ್ರಾಹಕರಿಗೆ ಇಂಟರ್'ನೆಟ್ ಹಾಗೂ ದೂರವಾಣಿ ದರಗಳನ್ನು ಇತರ ಟೆಲಿಕಾಂ ಕಂಪನಿಗಳಿಗಿಂತ ಉಚಿಸ ಸೇವೆಗಳನ್ನು ಒಳಗೊಂಡು ಅತೀ ಕಡಿಮೆ ಬೆಲೆಯಲ್ಲಿ ಹಲವು ಅನುಕೂಲಗಳನ್ನು ನೀಡಿದೆ.

'ಭಾರತದಾದ್ಯಂತ ನಾವು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಗಳಿಸಿದ್ದು, ಗ್ರಾಹಕರಿಗೆ ಅನುಕೂಲಗೊಳಿಸುವುದು ಹಾಗೂ ಹೆಚ್ಚು ಸಂತೃಪ್ತಿಗೊಳಿಸುವುದೆ ನಮ್ಮ ಪ್ರಮುಖ ಧ್ಯೇಯವಾಗಿದೆ. ಇಂಟರ್'ನೆಟ್ ಬಳಕೆಯಲ್ಲಿ ಪ್ರತಿಯೊಬ್ಬ ಭಾರತೀಯನು ಸಬಲೀಕರಣಗೊಳ್ಳಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ' ಎಂದು ರಿಲಯನ್ಸ್  ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಜಿಯೋ ಅತೀ ಕಡಿಮೇ ಅವಧಿಯಲ್ಲಿ 10 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದುವ ಗುರಿ ಹೊಂದಲಾಗಿದೆ. ಇಂಟರ್'ನೆಟ್  ಬಳಕೆಗಾಗಿ ಪ್ರತಿ ತಿಂಗಳು 250 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ದೇಶದಾದ್ಯಂತ ಜಿಯೋ 3100 ನಗರಗಳಲ್ಲಿ ಆಧಾರ್ ಆಧಾರಿತ ಸಿಮ್ ಆಕ್ಟಿವೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.

ಜಿಯೋ ಅತೀ ಕಡಿಮೆ ಬೆಲೆಯಲ್ಲಿ ಆಫರ್'ಗಳನ್ನು ಘೋಷಿಸಿದ ನಂತರ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್'ಟೆಲ್, ವೊಡಾಫೋನ್, ಐಡಿಯಾ, ಬಿಎಸ್'ಎನ್'ಎಲ್ ಸೇರಿದಂತೆ ಪ್ರಮುಖ ಕಂಪನಿಗಳು ಹಲವು ಉಚಿತ ಆಫರ್'ಗಳನ್ನು ನೀಡಿವೆ.

ಏರ್'ಟೆಲ್ ಭಾರತದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆಯಾದರೆ ನಂತರದ ಸ್ಥಾನದಲ್ಲಿ ಐಡಿಯಾ ಹಾಗೂ ವೊಡಾಫೋನ್ ಕಂಪನಿಗಳಿವೆ.

  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಐಬಿಎಂನಿಂದ 50 ಲಕ್ಷ ಮಂದಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ತರಬೇತಿ
ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ