
ಈ ಸುದ್ಧಿ ಸುಳ್ಳಲ್ಲ, ಜಿಯೋ ಜಿದ್ದಿಗೆ ಬಿದ್ದ ಏರ್ಟೆಲ್ ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಿರುವ 70 ಸಾವಿರ ಮೌಲ್ಯದ ಐಫೋನ್ 7 ಅನ್ನು ಕೇವಲ 19,990 ರೂಗಳಿಗೆ ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ.
ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದ ಹಿನ್ನಲೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಕೊಳ್ಳಲು ಈ ಮಾದರಿಯ ಕೊಡುಗೆಯನ್ನು ನೀಡಲು ಮುಂದಾಗಿದೆ.
ಹೊಸ ಗ್ರಾಹಕರನ್ನು ಸೆಳೆಯಲು ಈ ಕೊಡುಗೆ ನೀಡಿದ್ದು, ಗ್ರಾಹಕರು 19,990 ನೀಡಿ ಐ ಪೋನ್ 7 ಖರೀದಿಸಿದರೆ, ಏರ್ಟೆಲ್ ಪೋಸ್ಟ್ ಪೇಡ್ ನೊಂದಿಗೆ 12 ತಿಂಗಳು ಉಳಿಯಬೇಕಿದೆ. ಸದ್ಯ ಈ ಕೊಡುಗೆ ನೋಯ್ಡಾ ಮತ್ತು ಕರ್ನಾಟಕದ ವಲಯದ ಗ್ರಾಹಕರಿಗೆ ಮಾತ್ರ ಲಭ್ಯವಿದೆ.
20 ಸಾವಿರ ಕೊಟ್ಟು ಮೊಬೈಲ್ ಖರೀಸಿದಿದ ಗ್ರಾಹಕರು ಪ್ರತಿ ತಿಂಗಳು ಕನಿಷ್ಠ 1900 ರೂ ಬಿಲ್ ಕಟ್ಟಬೇಕಿದ್ದು, ಇದಕ್ಕೆ ಪ್ರತಿಯಾಗಿ 5 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ.
ಇದರೊಂದಿಗೆ ಇನ್ನು ಹೆಚ್ಚಿನ ಡೇಟಾ ಬೇಕು ಎನ್ನುವವರು 2499 ಪ್ಲಾನ್ ಖರೀದಿಸ ಬಹುದಾಗಿದ್ದು, ಇದರಲ್ಲಿ 10 ಜಿಬಿ ಡೇಟಾ ಮತ್ತು ಉಚಿತ ಕರೆ ಸೌಲಭ್ಯ ದೊರೆಯಲಿದೆ. ಇದು ಸಾಲುವುದಿಲ್ಲ ಎನ್ನುವವರು 2999 ಪ್ಲಾನ್ ಪಡೆದರೆ 15 ಜಿಬಿ ಡೇಟಾ ಮತ್ತು ಉಚಿತ ಕರೆ ಪಡೆಯಬಹುದಾಗಿದೆ.
ಒಂದು ಕಡೆ ಮೊಬೈಲ್ ಬಿಲ್ ಕಟ್ಟಿದ ಜೊತೆಗೆ ಪೋನ್ ಸಾಲದ ಕಂತು ಸಹ ಪೂರ್ಣಗೊಳ್ಳಲಿದೆ. ಹೀಗೆ ಮಾಸಿಕ ಕಂತು ಕಟ್ಟಿದರು ಸುಮಾರು 67 ಸಾವಿರ ಹಣವನ್ನು ಕಟ್ಟ ಬೇಕಾಗಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಪುಲ್ ಹಣ ನೀಡಿ ಖರೀದಿಸಿದಕ್ಕಿಂತ ಕಡಿಮೆ ಬೆಲೆಗೆ ಏರ್ ಟೆಲ್ ಮೊಬೈಲ್ ನೀಡುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.