ಯುವಕರ, ಆಂಟಿಯರ ನೆಚ್ಚಿನ ಟಿಕ್ ಟಾಕ್ ಬ್ಯಾನ್!?

By Web Desk  |  First Published Nov 18, 2019, 8:00 PM IST

ಟಿಕ್ ಟಾಕ್ ಬ್ಯಾನ್ ಆಗುತ್ತಾ?/ ಮೂರು ಮಕ್ಕಳ ತಾಯಿಯಿಂದ ಬಾಂಬೆ ಹೈಕೋರ್ಟ್ ಮನವಿ/ ಬಹು ಜನಪ್ರಿಯ ಆ್ಯಪ್ ಬ್ಯಾನ್ ಆಗುತ್ತಾ?/ ಮತ್ತೆ ಟಿಕ್ ಟಾಕ್ ಗೆ ಕಂಟಕ ಶುರುವಾಯ್ತಾ?


ಮುಂಬೈ[ನ. 18]  ಮೂರು ಮಕ್ಕಳ ತಾಯಿಯೊಬ್ಬರು ಟಿಕ್ ಟಾಕ್ ನಿಷೇಧ ಮಾಡಲು ಆಗ್ರಹಿಸಿ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹೀನಾ ದರ್ವೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಈ ಟಿಕ್ ಟಾಕ್ ಅಪ್ಲಿಕೇಶನ್ ಗೆ ಎಷ್ಟು ಜೀವಗಳು ಬಲಿಯಾಗಿವೆ ಎಂಬ ಲೆಕ್ಕ ತೆಗೆಯುವಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.

Latest Videos

undefined

ಯುವಕರ ಮೇಲೆ ಅದರಲ್ಲೂ ವಿಶೇಷವಾಗಿ ಮಕ್ಕಳ ಮನಸ್ಸಿನ ಮೇಲೆ, ಸಾಮರ್ಥ್ಯದ ಮೇಲೆ ಈ ಟಿಕ್ ಟಾಕ್ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ.

ಮೊದಲು ಟಿಕ್ ಟಾಕ್, ಆಮೇಲೆ ಬೇರೆ ಟಾಕ್, ಆಂಟಿಯರಿದ್ದಾರೆ ಹುಷಾರ್!

ಕೀಳರಿಮೆ, ಹಿಂಜರಿಕೆತನ ಬೆಳೆಸುವುದಕ್ಕೂ ಈ ಅಪ್ಲಿಕೇಶನ್ ಕಾರಣವಾಗುತ್ತಿದೆ. ಸಮಯ ಮತ್ತು ಹಣದ ವ್ಯರ್ಥ ಇದರಿಂದ ಆಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಹಲವಾರು ಸಂದರ್ಭದಲ್ಲಿ ಈ ವಿಡಿಯೋ ಶೆರಿಂಗ್ ಅಪ್ಲಿಕೇಶನ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಉದಾಹರಣೆಯೂ ಇದೆ ಎಂದು ಮುಂಬೈನ ಪ್ರಕರಣವೊಂದನ್ನು ಉಲ್ಲೇಖ ಮಾಡಿದ್ದಾರೆ.

ವಕೀಲ ಅಲಿ ಕಶೀಫ್ ಖಾನ್ ದೇಶ್ ಮುಖ್ ಮಹಿಳೆಯ ಪರ ವಾದ ಮಂಡಿಸಲಿದ್ದಾರೆ. ಕಳೆದ ವರ್ಷ ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಮಕ್ಕಳ ಪೋರ್ನೋಗ್ರಫಿಗೆ ಈ ಅಪ್ಲಿಕೇಶನ್ ಕಾರಣವಾಗುತ್ತಿದೆ ಎಂಬ ಆತಂಕವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು.

ಜೊತೆ ಜೊತೆಯಲಿ ಅನು,, ಟಿಕ್ ಟಾಕ್ ನಲ್ಲಿ ಏನ್ ಮೋಡಿ ಮಾಡ್ತಾರೆ ನೋಡಿ!

ಇದಾದ ಮೇಲೆ ಟಿಕ್ ಟಾಕ್ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮದ್ರಾಸ್ ಹೈಕೋರ್ಟ್ ಆದೇಶ ತಡೆ ಹಿಡಿದು ಬ್ಯಾನ್ ಹಿಂದಕ್ಕೆ ಪಡೆಯಲು ಸೂಚಿಸಿತ್ತು. ಈಗ ಮತ್ತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು ಮುಂದೇನು ಎಂಬುದನ್ನು ನೋಡಬೇಕಿದೆ.

click me!