ಸರ್ಫೇಸ್ ಪ್ರೋ 6, ಸರ್ಫೇಸ್ ಲ್ಯಾಪ್‌ಟಾಪ್ 2, ಸರ್ಫೇಸ್ ಬುಕ್ 2, ಸರ್ಫೇಸ್ ಗೋ ಈ ಸರಣಿಯಲ್ಲಿ ಬಂದಿರುವ ಹೊಸ ಲ್ಯಾಪ್‌ಟಾಪ್‌ಗಳು. Microsoft ಸರ್ಫೇಸ್ ಈಗ EMIನಲ್ಲೂ ಲಭ್ಯ
Microsoftನ ಲೇಟೆಸ್ಟ್ ಲ್ಯಾಪ್‌ಟಾಪ್ ಮೈಕ್ರೋಸಾಫ್ಟ್ ಸರ್ಫೇಸ್‌ಗಳನ್ನು ಈಗ EMIನಲ್ಲೂ ಖರೀದಿಸಬಹುದು. ಇದರ ಜೊತೆಗೆ ಸಿಟಿಬ್ಯಾಂಕ್‌ನಿಂದ 7500 ರು.ಗಳಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಪ್ರೀಮಿಯಂ ಪಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಉದ್ದೇಶಿಸಿರುವ Microsoft ಇದೀಗ ಸರ್ಫೇಸ್ ಸರಣಿಯ ಎಲ್ಲ ಸಾಧನಳಿಗೂ EMI ವ್ಯವಸ್ಥೆ ಕಲ್ಪಿಸಿದೆ.
ಸರ್ಫೇಸ್ ಪ್ರೋ 6, ಸರ್ಫೇಸ್ ಲ್ಯಾಪ್‌ಟಾಪ್ 2, ಸರ್ಫೇಸ್ ಬುಕ್ 2, ಸರ್ಫೇಸ್ ಗೋ ಈ ಸರಣಿಯಲ್ಲಿ ಬಂದಿರುವ ಹೊಸ ಲ್ಯಾಪ್‌ಟಾಪ್‌ಗಳು.
ಇದನ್ನೂ ಓದಿ | ಅಗ್ಗದ, ಹೊಸ ಫೀಚರ್‌ಗಳುಳ್ಳ Nokia 3.2 ಮಾರುಕಟ್ಟೆಗೆ; ಇಲ್ಲಿದೆ ಬೆಲೆ, ವಿವರ
ಎಂಟನೇ ತಲೆಮಾರಿನ ಸರ್ಫೇಸ್ ಪ್ರೊ ಲ್ಯಾಪ್‌ಟಾಪ್ ಕ್ವಾಡ್ ಕೋರ್ ಹೊಂದಿದ್ದು ಹಿಂದಿನ ಲ್ಯಾಪ್‌ಟಾಪ್‌ಗಳಿಂತ 1.5 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಫೋಟೋ ಎಡಿಟಿಂಗ್, ಸಿನಿಮಾ ವೀಕ್ಷಣೆಗೂ ಸೂಕ್ತವಾಗಿದೆ. ಸರ್ಫೇಸ್ ಲ್ಯಾಪ್‌ಟಾಪ್ 2 ಸಾಂಪ್ರದಾಯಿಕ ಬಳಕೆದಾರರಿಗೆ ಹೆಚ್ಚು ಇಷ್ಟವಾಗುವಂತಿದೆ.
ಸರ್ಫೇಸ್ ಬುಕ್2 ಟ್ಯಾಬ್ಲೆಟ್‌ನ ವೈವಿಧ್ಯತೆ ಹೊಂದಿದ್ದು ಕೀಬೋರ್ಡ್ ಮೂಲಕವೂ ಕೆಲಸ ಮಾಡಬಹುದು.