Vivo ಹೊಸ ಮೊಬೈಲ್ ಮಾರುಕಟ್ಟೆಗೆ ಲಗ್ಗೆ; ಬಜೆಟ್‌ ದರಕ್ಕೆ ಮಸ್ತ್ ಮಸ್ತ್ ಕ್ಯಾಮೆರಾ!

By Web Desk  |  First Published Jun 1, 2019, 7:49 PM IST

ಮೊಬೈಲ್ ಮಾರುಕಟ್ಟೆಯಲ್ಲಿ Vivo ತನ್ನದೇ ಛಾಪನ್ನು ಮೂಡಿಸಿದೆ. ಈಗ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ಬೆಲೆ ಮತ್ತು ಫೀಚರ್ಸ್


Vivoದ ಸ್ಮಾರ್ಟ್‌ಫೋನ್‌ ಅಂದರೆ ಕ್ಯಾಮೆರಾದ ಬಗ್ಗೆ ಏನೂ ಹೇಳಲೇ ಬೇಕಿಲ್ಲ. ಹೆಚ್ಚು ರೆಸೊಲ್ಯೂಷನ್‌ನ ಕ್ಯಾಮೆರಾಗಳು ಇದ್ದೇ ಇರುತ್ತವೆ. 

ಇದೀಗ Vivo Y ಸೀರೀಸ್‌ನಲ್ಲಿ ‘ವೈ15’ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದರಲ್ಲೂ ಕ್ಯಾಮೆರಾಗೆ ಆದ್ಯತೆ ನೀಡಲಾಗಿದೆ. 

Tap to resize

Latest Videos

ಇದನ್ನೂ ಓದಿ | ಬಿಡುಗಡೆಗೂ ಮುನ್ನ Redmi K20 ಡೀಟೆಲ್ಸ್ ಲೀಕ್! ಇಲ್ಲಿದೆ ಫೋನ್ ವಿವರ

ಬಜೆಟ್‌ ದರಕ್ಕೇ 13 ಮೆಗಾ ಪಿಕ್ಸೆಲ್‌, 8 ಮೆಗಾ ಪಿಕ್ಸೆಲ್‌ ಹಾಗೂ 3 ಮೆಗಾ ಪಿಕ್ಸೆಲ್‌ನ ಟ್ರಿಪ್ಪಲ್‌ ಕ್ಯಾಮೆರಾವಿದೆ. ಜೊತೆಗೊಂದು 16 ಮೆಗಾ ಫಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ. 

ಉಳಿದಂತೆ 4 ಜಿಬಿ RAM, 64 ಜಿಬಿ ROM, ಹಿಲಿಯೋ ಪಿ22 ಪ್ರೊಸೆಸರ್‌ ಇದೆ. 5000 mAh ಬ್ಯಾಟರಿ 24 ಗಂಟೆ ತಡೆ ರಹಿತ ಚಾರ್ಜ್ ನೀಡುತ್ತೆ ಅಂತ ಕಂಪನಿ ಪ್ರಕಟಣೆ ಹೇಳುತ್ತೆ.

ಬೆಲೆ: 13,990ರು.

click me!